ಬಾದರ್ಲಿ ಹಂಪನಗೌಡರಿಗೆ ಕಾಂಗ್ರೆಸ್ ಟಿಕೆಟ್ ಫಿಕ್ಸ್, ಬಸನಗೌಡಗೆ ಶಾಕ್!

ಚಿದಾನಂದ ದೊರೆ ಸಂಜೆವಾಣಿ
ಸಿಂಧನೂರು,ಮಾ.೧೭- ಮಾಜಿ ಶಾಸಕ ಹಂಪನಗೌಡ ಬಾದರ್ಲಿಗೆ ಕಾಂಗ್ರೆಸ್ ಟಿಕೆಟ್ ಫಿಕ್ಸ್ ಆಗಿದ್ದು, ಇದರಿಂದ ಟಿಕೆಟ್ ಪ್ರಬಲ ಆಕಾಂಕ್ಷಿಗಳಾಗಿದ್ದ ಬಸನಗೌಡ ಬಾದರ್ಲಿ, ಕೆ.ಕರಿಯಪ್ಪ ಇವರಿಗೆ ಶಾಕ್ ಆಗಿದೆ ಎನ್ನುವ ಸುದ್ದಿ ಕಾಂಗ್ರೆಸ್ ಪಕ್ಷದ ವಲಯದಲ್ಲಿ ಹರಿದಾಡ ತೊಡಗಿದೆ.
ತೀರ್ವ ಕುತೂಹಲ ಕೆರಳಿಸಿರುವ ಪಕ್ಷದ ಟಿಕೆಟ್ ಹಂಪನಗೌಡ ಬಾದರ್ಲಿ, ಕೆ.ಕರಿಯಪ್ಪ, ಬಸನಗೌಡ ಬಾದರ್ಲಿ ಇವರಲ್ಲಿ ಹೈಕಮಾಂಡ್ ಅಂತಿಮವಾಗಿ ಬಿ.ಫಾರ್ಮ ಯಾರಿಗೆ ಕೈಕೊಡುತ್ತದೆಯೊ ತಿಳಿಯದಾಗಿದೆ. ಕಾರಣ ಮೂವರು ಪ್ರಬಲ ಆಕಾಂಕ್ಷಿಗಳಾಗಿದ್ದು, ಇದೆಲ್ಲವನ್ನೂ ಅಳಿದು ತೂಗಿ ಹೈಕಮಾಂಡ್ ಹಂಪನಗೌಡರಿಗೆ ಟಿಕೆಟ್ ಫೈನಲ್ ಮಾಡಿದೆ ಎನ್ನುವ ಸುದ್ದಿ ಪಕ್ಷದ ಉನ್ನತ ಸ್ಥಾನದಲ್ಲಿರುವ ಮುಖಂಡರೆ ಪತ್ರಿಕೆಗೆ ಖಚಿತ ಪಡಿಸಿದ್ದಾರೆ.
ಟಿಕೆಟ್ ಯಾರಿಗೆ ಎನ್ನುವದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗಿಂತ ಜೆಡಿಎಸ್, ಬಿಜೆಪಿ ಕಾರ್ಯಕರ್ತರಲ್ಲಿ ತೀರ್ವ ಕುತೂಹಲ ಮೂಡಿಸಿದೆ. ಆದರೆ ಹಂಪನಗೌಡ, ಕರಿಯಪ್ಪ, ಬಸನಗೌಡ ಇವರು ತಮ್ಮದೆ ಪ್ರಭಾವ ಬಳಸಿಕೊಂಡು ಟಿಕೆಟ್ ಪಡೆಯಲು ಭಗೀರಥ ಪ್ರಯತ್ನ ನಡೆಸುತ್ತಿದ್ದಾರೆ.
ಪಕ್ಷದ ಹೈಕಮಾಂಡ ನನಗೆ ಟಿಕೆಟ್ ಫೈನಲ್ ಮಾಡಿದೆ ಎಂದು ಬಸನಗೌಡ ಹೇಳಿದರೆ, ಸಾಮಾಜಿಕ ನ್ಯಾಯದಡಿಯಲ್ಲಿ ನಿನಗೆ ಟಿಕೆಟ್ ಖಚಿತ ಎಂದು ಪಕ್ಷದ ಮುಖಂಡರು ಭರವಸೆ ನೀಡಿದ್ದಾರೆ ಎಂದು ಕೆ. ಕರಿಯಪ್ಪ ಹೇಳುತ್ತಿದ್ದಾರೆ. ಆದರೆ ಈ ಸಲ ಟಿಕೆಟ್ ಪಡೆಯುವುದು ಅಷ್ಟು ಸುಲಭದ ಮಾತಲ್ಲ ಎನ್ನುವದು ಎಲ್ಲರಿಗೂ ಗೊತ್ತಿದೆ. ಪ್ರಯತ್ನ ಮಾಡದೆ ಸುಮ್ನೆ ಕೈಕಟ್ಟಿ ಕುಳಿತರೆ ಟಿಕೆಟ್ ಸಿಗುವುದಿಲ್ಲ ಎಂಬ ಕಾರಣದಿಂದ ಊಟ, ನಿದ್ದೆ ಬಿಟ್ಟು ಪಕ್ಷದ ಮುಖಂಡರನ್ನು ಹಗಲು-ರಾತ್ರಿ ಕಾಡಿ ಬೇಡಿ ಬೇಟಿ ಮಾಡಿ ಮನವೊಲಿಸುವ ಕೆಲಸ ಮಾಡತೊಡಗಿದ್ದಾರೆ.
ನನಗೆ ಟಿಕೆಟ್ ಫೈನಲ್ ಎಂದು ಬಸನಗೌಡ ಬಾದರ್ಲಿ ಹೇಳುತ್ತಾರೆ. ಈ ಸಲ ಟಿಕೆಟ್ ನಿನಗೆ ಖಚಿತ ಎಂದು ಪಕ್ಷದ ಮುಖಂಡರು ನನಗೆ ಭರವಸೆ ನೀಡಿದ್ದಾರೆ ಎಂದು ಕೆ.ಕರಿಯಪ್ಪ ಹೇಳುತ್ತಾರೆ. ಇದರ ಬಗ್ಗೆ ಪತ್ರಿಕೆ ಹಂಪನಗೌಡರನ್ನು ಮಾತನಾಡಿಸಿದಾಗ ನನಗೆ ನಿನಗೆ ಟಿಕೆಟ್ ಖಚಿತ ಎಂದು ಅವರು ಇವರು ಹೇಳಿದಂತೆ ನಾನು ಹೇಳುವುದಿಲ್ಲ. ಸೂಕ್ತ ಅಭ್ಯರ್ಥಿಗೆ ಅಂತಿಮವಾಗಿ ಹೈಕಮಾಂಡ್ ನಿರ್ಧಾರ ತೆಗೆದುಕೊಂಡು ಟಿಕೆಟ್ ಫೈನಲ್ ಮಾಡುತ್ತದೆ ಎಂದು ಹಂಪನಗೌಡ ಬಾದರ್ಲಿ ಸ್ಪಷ್ಟನೆ ನೀಡಿದರು.
೨೦೨೩ ರ ವಿಧಾನಸಭೆ ಚುನಾವಣೆಗೆ ಕ್ಷಣಗಣನೆಗೆ ಆರಂಭವಾಗಿದೆ. ಯಾವ ಸಮಯದಲ್ಲಿ ಬೇಕಾದರೂ ಕೇಂದ್ರ ಚುನಾವಣೆ ಆಯೋಗ ಚುನಾವಣೆ ದಿನಾಂಕ ಪ್ರಕಟ ಮಾಡುವ ನಿರೀಕ್ಷೆ ಇದೆ. ಇದರಿಂದ ಟಿಕೆಟ್ ಫೈನಲ್ ಆಗದೆ ಇರುವ ಅಭ್ಯರ್ಥಿಗಳ ಎದೆ ಡವ ಡವ ಎನ್ನತೊಡಗಿದೆ.
ಹಂಪನಗೌಡ ಟಿಕೆಟ್ ಪಡೆದು ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡುವ ಮೊದಲು ಬಸನಗೌಡ ಬಾದರ್ಲಿಯವರಿಂದ ಅಗ್ನಿ ಪರೀಕ್ಷೆ ಎದುರಿಸಬೇಕಾಗಿದೆ. ಹಂಪನಗೌಡ ಶಾಸಕರಾಗಿ ನಿಗಮ ಮಂಡಳಿಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದು ಪಕ್ಷದ ಹಿರಿಯ ನಾಯಕರಾಗಿದ್ದಾರೆ. ಹಂಪನಗೌಡರಿಗೆ ಟಿಕೆಟ್ ಖಚಿತ ಎನ್ನುವಾಗಲೆ ಬಸನಗೌಡ ಬಾದರ್ಲಿ ಟಿಕೆಟ್ ಆಕಾಂಕ್ಷಿಯಾಗುವ ಮೂಲಕ ಹಂಪನಗೌಡರಿಗೆ ಬದ್ಧ ರಾಜಕೀಯ ವೈರಿಯಾಗಿದ್ದಾರೆ.
ಮಸ್ಕಿ ವಿಧಾನ ಸಭೆಯ ಬೈ ಎಲೆಕ್ಷನ್‌ನಲ್ಲಿ ಬಸನಗೌಡ ತುರ್ವಿಹಾಳರನ್ನು ಗೆಲ್ಲಿಸಿದರೆ ಮಾತ್ರ ಕುಷ್ಟಗಿ ಅಮರೆಗೌಡ ಭಯ್ಯಾಪುರ ಸಿಂಧನೂರಿಗೆ ಹಂಪನಗೌಡ ಬಾದರ್ಲಿಗೆ ಟಿಕೆಟ್ ಗ್ಯಾರಂಟಿ ಎಂದು ಪಕ್ಷದ ಮುಖಂಡರಾದ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ ತುರ್ವಿಹಾಳ ಪಟ್ಟಣದಲ್ಲಿ ನಡೆದ ಪಕ್ಷದ ಚುನಾವಣೆ ಪ್ರಚಾರದ ಬಹಿರಂಗ ಸಭೆಯಲ್ಲಿ ಹೇಳಿ ಎಲ್ಲರನ್ನು ಹುಬ್ಬೆರಿಸುವಂತೆ ಮಾಡಿದರು. ಅದರಂತೆ ನುಡಿದಂತೆ ಪಕ್ಷದ ಮುಖಂಡರು ನಡೆದುಕೊಂಡು ಹಂಪನಗೌಡರಿಗೆ ಈ ಸಲ ಟಿಕೆಟ್ ನೀಡಲು ತೀರ್ಮಾನ ಮಾಡಿದ್ದಾರೆ. ಅಲ್ಲದೆ ಜೆಡಿಎಸ್ ಶಾಸಕ ವೆಂಟರಾವ ನಾಡಗೌಡರಿಗೆ ಹಂಪನಗೌಡ ಬಾದರ್ಲಿ ಪ್ರಬಲ ಹಾಗೂ ಸೂಕ್ತ ಅಭ್ಯರ್ಥಿ ಹೈಕಮಾಂಡಗೆ ಮನವೊಲಿಸುವ ಪ್ರಯತ್ನ ಮಾಡಿದ್ದು ಹಂಪನಗೌಡರನ್ನುಬಿಟ್ಟು ಬೇರೆಯರಿಗೆ ಟಿಕೆಟ್ ನೀಡಿದರೆ ಕಾಂಗ್ರೆಸ್ ಅಭ್ಯರ್ಥಿ ಗೆಲವು ಕಡಿಮೆ ಇದರಿಂದ ಜೆಡಿಎಸ್ ನಾಡಗೌಡರನ್ನು ಗೆಲ್ಲಿಸಲು ಸಹಕರಿಸಿದಂತಾಗುತ್ತೇದೆ ಎಂದು ತಾಲುಕಾ ಕಾಂಗ್ರೆಸ್ ಪಕ್ಷದ ಮುಖಂಡರು ಹೈಕಮಾಂಡ್ ಮನವರಿಕೆ ಮಾಡಿದ ಮೇಲೆ ಅಳಿದು ತೂಗಿ ಹಂಪನಗೌಡರಿಗೆ ಟಿಕೆಟ್ ಪಿಕ್ಷ ಮಾಡಿದೆ ಎನ್ನಲಾಗಿದೆ.
ಹಂಪನಗೌಡರಿಗೆ ಇದು ಕೊನೆಯ ಚುನಾವಣೆಯಾಗಿದ್ದು, ಈ ಸಲ ಅವರನ್ನು ಎಲ್ಲರು ಒಂದಾಗಿ ಒಗ್ಗಟ್ಟಿನಿಂದ ಕೆಲಸ ಮಾಡಿ ಗೆಲ್ಲಿಸಬೇಕು. ಮುಂದೆ ಸರ್ಕಾರ ಬಂದರೆ ಬಸನಗೌಡ ಹಾಗೂ ಕೆ.ಕರಿಯಪ್ಪ ಇವರಿಗೆ ನಿಗಮ ಇಲ್ಲವೆ ಒಐಅ ಮಾಡುವುದಾಗಿ ಹೈಕಮಾಂಡ್ ಮನವೋಲಿಸಿದೆ ಎನ್ನಲಾಗಿದೆ. ಆದರೆ ನಮಗೆ ಟಿಕೆಟ್ ಕೊಡಿ ಹಂಪನಗೌಡರನ್ನು ಒಐಅ ಇಲ್ಲವೆ ಎಮ್‌ಪಿ ಟಿಕೆಟ್ ಕೊಡಿ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಮ್ಮದು ಎಂದು ಬಸನಗೌಡ ಕೆ.ಕರಿಯಪ್ಪ ಹೇಳಿದ್ದಾರೆ ಎಂದು ಮಾತು ಗಳು ಕೇಳಿ ಬರುತ್ತಿವೆ. ಯಾವುದು ಸತ್ಯ ಎಂಬುದು ಟಿಕೆಟ್ ಸಿಕ್ಕ ಮೇಲೆ ಎಲ್ಲವು ಬಹಿರಂಗವಾಗುತ್ತದೆ.