ಬಾದರ್ಲಿ ಸಮ್ಮುಖದಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ

ಸಂಜೆವಾಣಿ ವಾರ್ತೆ
ಸಿಂಧನೂರು.ಏ.೧೬- ನಗರದಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಅವರ ನೇತೃತ್ವದಲ್ಲಿ ಜೆಡಿಎಸ್, ತೊರೆದು ಕಾಂಗ್ರೇಸ್ ಪಕ್ಷವನ್ನು ಹಲವು ಮುಖಂಡರು, ಕಾರ್ಯಕರ್ತರು ಇಂದು ಬೆಳಗ್ಗೆ ಸೇರ್ಪಡೆಯಾದರು.
ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ನಮ್ಮ ಪಕ್ಷದ ಲೋಕಸಭಾ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರನ್ನು ಗೆಲ್ಲಿಸಲು ಮತ್ತು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈ ಬಲಪಡಿಸಲು ನಾವೆಲ್ಲಾ ಒಗ್ಗಟ್ಟಿನಿಂದ ಚುನಾವಣೆ ಮಾಡೋಣ ಎಂದು ಹೇಳುತ್ತಾ ಪಕ್ಷದ ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಂಡರು.
ಸಿಂಧನೂರು ಪಟ್ಟಣದಲ್ಲಿನ ಜೆಡಿಎಸ್ ಮುಖಂಡರಾದ ಎಂ.ಡಿ ನದಿಮುಲ್ಲಾ, ಅಜರ್ ಖಾನ್, ಚಾಂದ್ ಪಾಷಾ, ಪರ್ವೇಜ್, ಮಹಮದ್ ಎತ್ಮಾರಿ, ಸೊಹೆಲ್ ದೇಸಾಯಿ, ತನ್ವಿರ್ ಹುಸೇನ್, ಸೈಯದ್ ಹಾಜಿ ಮಸ್ತಾನ್, ಆಸಿಫ್ ಗನಿಸಾಬ್, ಮುಜಾಫರ್ ಖಾನ್ ಸಾಬ್ ಸೇರಿದಂತೆ ಅನೇಕರು ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳ ನ್ನು ಒಪ್ಪಿ ಪಕ್ಷ ಸೇರ್ಪಡೆ ಯಾದರು.
ಮುಖಂಡರಾದ ಕಾಳಿಂಗಪ್ಪ ವಕೀಲರು, ಮಲ್ಲಿಕಾರ್ಜುನ ಪಾಟೀಲ್, ಖಾಜಿ ಮಲ್ಲಿಕ್, ಶೇಖರಪ್ಪ ಗಿಣಿವಾರ, ಎಚ್.ಭಾಷಾ, ಅನೀಲ ಕುಮಾರ ವಾಯ್ ಸೇರಿದಂತೆ ಅನೇಕರಿದ್ದರು.