ಬಾದನಹಟ್ಟಿ ಗ್ರಾ.ಪಂ. ಅಧ್ಯಕ್ಷರಾಗಿ ಕಾಳಮ್ಮ ಆಯ್ಕೆ


ಸಂಜೆವಾಣಿ ವಾರ್ತೆ
ಕುರುಗೋಡು.ಸೆ.13 ಸಮೀಪದ ಬಾದನಹಟ್ಟಿ ಗ್ರಾಮಪಂಚಾಯಿತಿ ಕಛೇರಿ ಸಭಾಂಗಣದಲ್ಲಿ ಗ್ರಾಪಂ. ಅಧ್ಯಕ್ಷರ ಚುನಾವಣೆ ಶಾಂತಿಯುತವಾಗಿ ಜರುಗಿತು.
ಪ್ರಾರಂಭದಲ್ಲಿ ಬಾದನಹಟ್ಟಿ ಗ್ರಾಪಂ. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕಾಳಮ್ಮ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಹುಲಿಗೆಮ್ಮ ಇಬ್ಬರು ನಾಮಪತ್ರ ಸಲ್ಲಿಸಿದರು. ನಿಗದಿತ ಸಮಯದ ಒಳಗೆ ಯಾರೊಬ್ಬರೂ ಕೂಡ ನಾಮಪತ್ರ ಹಿಂಪಡೆಯದ ಕಾರಣ ಚುನಾವಣೆ ಪ್ರಕ್ರಿಯೆ ನಡೆಯಿತು.
ಒಟ್ಟು 22 ಸದಸ್ಯರನ್ನು ಹೊಂದಿರುವ ಗ್ರಾಮಪಂಚಾಯಿತಿಯು ಚುನಾವಣೆ ವೇಳೆ ಕಾಂಗ್ರೆಸ್ ಬೆಂಬಲಿತ ಹುಲಿಗೆಮ್ಮ ನವರಿಗೆ 2 ಮತಗಳು ದೊರೆತರೆ, ಕಾಳಮ್ಮನವರಿಗೆ 19 ಮತಗಳು ಲಭಿಸಿದವು. ಒಬ್ಬ ಸದಸ್ಯ ಗೈರಾಗಿದ್ದರು. ಕೊನೆಯಲ್ಲಿ ಬಿಜೆಪಿ ಬೆಂಬಲಿತ ಕಾಳಮ್ಮ ನವರು ನೂತನ ಬಾದನಹಟ್ಟಿ ಗ್ರಾಪಂ. ಅದ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ನಿರ್ಮಲಾ ಎಲ್ಲರ ಸಮಕ್ಷದಲ್ಲಿ ಘೋಷಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷ ಬಾಸಾ ಹನುಮಂತರೆಡ್ಡಿ ಮಾತನಾಡಿ, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಹುತೇಕ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದೇವೆ. ಈಗಲೂ ಸಹ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕಾಳಮ್ಮನವರನ್ನು ಬಾದನಹಟ್ಟಿ ಗ್ರಾಪಂ. ನೂತನ ಅದ್ಯಕ್ಷರನ್ನಾಗಿ ಗೆಲ್ಲಿಸಿಕೊಂಡು ಬಂದಿದ್ದೇವೆ. ಇದರಿಂದ ಗ್ರಾಪಂ ಅಧ್ಯಕ್ಷ ಸ್ಥಾನ ಬಿಜೆಪಿ ಪಾಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ. ಪಿಡಿಓ ಅನಿಲ್‍ಕುಮಾರ್, ಸಹಾಯಕ ಚುನಾವಣೆ ಅಧಿಕಾರಿ ರಾಜಶೇಖರ ಗೌಡ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗೊರವರಗಾದಿಲಿಂಗಪ್ಪ, ಮೆಟ್ರಿಸಿದ್ದಯ್ಯ, ಕೆ.ಮಂಜುನಾಥ, ತಾ.ಪಂ. ಮಾಜಿ ಸದಸ್ಯ ಬಿ.ಗೋವಿಂದಪ್ಪ, ಬಾಸಾ ಸತ್ಯನಾರಾಯಣರೆಡ್ಡಿ, ಪಿ.ಬಸಪ್ಪಯ್ಯ, ಪಿ.ತಿಮ್ಮಪ್ಪ, ಬಿ.ಕೆ.ಪರಶುರಾಮ, ಚಾನಾಳು ರಾಮಣ್ಣ, ಕೆ.ಹನುಮಂತಪ್ಪ, ವೆಂಕಾರೆಡ್ಡಿ ಮತ್ತು ಕೆ.ಪರಸುರಾಮ ಸೇರಿದಂತೆ ಇತರೆ ಊರಿನ ಮುಖಂಡರು ಇದ್ದರು.
ಪಿಎಸ್‍ಐ ಎಸ್.ರಘು ಮತ್ತು ಸಿಬ್ಬಂದಿ ಚುನಾವಣೆಯಲ್ಲಿ ಬಿಗಿಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದ್ದರು.