ಬಾದನಹಟ್ಟಿ ಗ್ರಾಮದ ಶ್ರೀನಂದಿ ಶಾಲಾ ಆವರಣದಲ್ಲಿ ಜಾನಪದ ಸಂಭ್ರಮ
ಅಲೆಮಾರಿ ಹಗಲುವೇಶ ಕಲಾವಿದರಿಗೆ ಸರ್ಕಾರ ಪ್ರೋತ್ಸಾಹ ನೀಡಬೇಕು – ಅಂಬರೇಷ್ಕುರುಗೋಡು.ಜ.15: ಊರಿಂದ- ಇನ್ನೊಂದು ಊರಿಗೆ ಅಲೆಮಾರಿ ಹಗಲುವೇಶ ಹಾಕಿಕೊಂಡು ಜೀವನ ನಡೆಸುವ ಹಗಲುವೇಶ ಕಲಾವಿದರಿಗೆ ಸರ್ಕಾರ ಪ್ರೋತ್ಸಾಹ ನೀಡಬೇಕು, ಅಂದಾಗ ಮಾತ್ರ ಅವರ ಕಲೆ ನಾಡಿನಲ್ಲಿ ಜೀವಂತವಾಗಿರಲು ಸಾದ್ಯವಾಗುತ್ತಿದೆ ಎಂದು ಜಾನಪದ ಸಾಹಿತ್ಯಪರಿಷತ್ ಕುರುಗೋಡು ತಾಲೂಕು ಘಟಕ ಅದ್ಯಕ್ಷ ಚಾನಾಳುಅಂಬರೇಷ್ ಸರ್ಕಾರವನ್ನು ಒತ್ತಾಯಿಸಿದರು.
ಅವರು, ಸಮೀಪದ ಬಾದನಹಟ್ಟಿ ಗ್ರಾಮದ ಶ್ರೀನಂದಿ ರೆಸಿಡೆನ್ಸಿಯಲ್ ಪಬ್ಲಿಕ್ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶ್ರೀ ದೊಡ್ಡಬಸವೇಶ್ವರ ಹಗಲುವೇಶ ಕಲಾ ಸಂಘವು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ವಿಶೇಷ ಘಟಕ ಯೋಜನೆ ಅಡಿಯಲ್ಲಿ ರಾತ್ರಿ ಹಮ್ಮಿಕೊಂಡಿದ್ದ ಜಾನಪದ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದಿನ ತಂತ್ರಜ್ಞಾನದ ಯುಗದಲ್ಲಿ ಹಗಲು ವೇಷಗಾರರು ರಾಮಾಯಾಣ, ಮಹಾಭಾರತ ಎಂಬ ಕಥೆಗಳ ವೇಶ-ಭೂಷಣಗಳೊಂದಿಗೆ ಪ್ರದರ್ಶನವನ್ನು ಅಲೆಮಾರಿಯಾಗಿ ಜೀವನ ನಡೆಸಿ, ನಮ್ಮ ನಾಡಿನ ರಾಜ-ಮಹಾರಾಜ, ಹಾಗು ವೀರವನಿತೆಯರ ಕಥೆಗಳನ್ನು ಬಿಂಬಿಸುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದು ನುಡಿದರು.
ಶ್ರೀ ದೊಡ್ಡಬಸವೇಶ್ವರ ಹಗಲು ವೇಷ ಕಲಾಸಂಘ ತಾಲೂಕು ಅಧ್ಯಕ್ಷ ವೈ.ಚಿನ್ನಸ್ವಾಮಿ ಮಾತನಾಡಿ, ಹಿಂದಿನಕಾಲದಿಂದಲೂ ನಮ್ಮ ತಾತ-ಮುತ್ತಾತನ ಕಾಲದಿಂದಲೂ ರಾಮಾಯಣ, ಮಹಾಭಾರತ, ಕುರುಕ್ಷೇತ್ರಗಳ ಬಗ್ಗೆ ಕಥೆಯ ನಾಟಕವಾಡಿ ಅವರು ಕೊಟ್ಟ ದವಸ,ದಾನ್ಯ, ತೆಗೆದುಕೊಂಡು ಜನರನ್ನು ರಂಜಿಸುತ್ತದ್ದೆವು. ಕಳೆದ ಮೂರು ವರ್ಷಗಳಿಂದ ಕರೋನ ಕರಿನೆರಳು ಬಂದು ಹಗಲು ವೇಶಗಾರರಬದುಕು ನುಚ್ಚು ನೂರು ಮಾಡಿದೆ, ಕರೋನ ಈಗ ಮರೆಯಾದರು ಕೂಡ ಬದುಕು ಕಟ್ಟಿಕೊಳ್ಳುವಲ್ಲಿ, ನಮಗೆ ತುಂಬಾ ತೊಂದರೆ ಯಾಗುತ್ತಿದೆ. ಊರೂರು ಅಲೆದು ಜೀವನಮಾಡಿ, ಕಲೆಯೇ ಉಸಿರು ಎಂದು ನಂಬಿ ಜೀವನ ನಡೆಸುವ ನಮಗೆ ಸರ್ಕಾರ ಮಾತ್ರ ನಮಗೆ ಪ್ರೋತ್ಸಾಹವಾಗಲಿ, ಮಾಷಾಶನವಾಗಲಿ ನೀಡಿಲ್ಲ. ಆದ್ದರಿಂದ ಸರ್ಕಾರ ಈಗಲಾದರೂ ನಮ್ಮ ಕಲೆಗೆ ಪ್ರೋತ್ಸಾಹ, ನೀಡಬೇಕೆಂದು ಮನವಿ ಮಾಡಿದ್ದಾರೆ.
ಎಂ.ರಾಘವೇಂದ್ರ ಕುಡಿತಿನಿ ಕಲಾತಂಡದವರಿಂದ ಮರಗಲ್ಲು ಕುಣಿತಾ, ಶಿವಲಿಂಗಪ್ಪ ಕೊಪ್ಪಳ ಕಲಾತಂಡದವರಿಂದ ಗೊಂಬೆ ಕುಣಿತಾ, ವೈ.ಸುರೇಶ ಕುರುಗೋಡು ಕಲಾತಂಡದವರಿಂದ ಭೀಮಾಂಜಿನೇಯ ಯುದ್ಧ ಮತ್ತು ಟಿ.ಜಂಬಣ್ಣ ಕಂಪ್ಲಿ ಕಲಾತಂಡದವರಿಂದ ತಮಟೆವಾಧ್ಯ ಕಾರ್ಯಕ್ರಮಗಳು ಅದ್ಭುತವಾಗಿ ಮೂಡಿಬಂದವು.
ಈ ಸಂದರ್ಭದಲ್ಲಿ ಬಾದಹನಹಟ್ಟಿ ಶ್ರೀನಂದಿಶಾಲೆಯ ಅದ್ಯಕ್ಷ ಜೆ.ರವಿರೆಡ್ಡಿ, ಕನ್ನಡ ಸಾಹಿತ್ಯ ಪರಿಷತ್ ಅದ್ಯಕ್ಷ ಮಸೂತಿ ನಾಗರಾಜ್, ಕಲಾವಿದ ಅಶ್ವರಾಮಣ್ಣ, ವೈ.ಮಂಜುನಾಥ, ಎಂ.ರಾಘವೇಂದ್ರ, ಕೆ.ಲಿಂಗರಾಜ, ವೈ.ಸುರೇಶ, ವಿ.ಶಿವಲಿಂಗ ಮತ್ತು ಇತರೆ ಕಲಾವಿದರು ಇದ್ದರು.