ಬಾಣಂತಿಯರ ಆಹಾರ ಪದ್ಧತಿ ಹೀಗಿರಲಿ

ಬಾಣಂತಿಯರು ಕ್ಯಾಲ್ಸಿಯಂ ಇರುವ ಆಹಾರವನ್ನೇ ಸೇವಿಸಬೇಕು. ಮುಖ್ಯವಾಗಿ ಬಾಣಂತಿಯರಿಗೆ ನುಗ್ಗೆ ಸೊಪ್ಪನ್ನು ಹೆಚ್ಚಾಗಿ ಸೇವಿಸಲು ಕೊಡುತ್ತಾರೆ. ಯಾಕೆಂದರೆ ಇದರಲ್ಲಿ ವಿಟಮಿನ್ ಎ, ಬಿ ಮತ್ತು ಸಿ ಹಾಗೂ ಅಧಿಕ ಖನಿಜಾಂಶ, ಪೋಷಕಾಂಶದ ಪ್ರಮಾಣ ಅಧಿಕವಾಗಿ ಇರುತ್ತದೆ. ದೇಹಕ್ಕೆ ಅಧ್ಭುತವಾದ ಕ್ಯಾಲ್ಸಿಯಂ ದೊರೆಯುತ್ತದೆ.
ಬೆಳ್ಳುಳ್ಳಿಯಲ್ಲಿ ಆಯುರ್ವೇದ ಅಂಶಗಳು ಬಹಳಷ್ಟು ಹೇರಳವಾಗಿದೆ ಮತ್ತು ಇದು ಎಲ್ಲಾ ರೀತಿಯ ಕಾಯಿಲೆಗಳಿಂದ ಮುಕ್ತಗೊಳಿಸುವ ಸಾಮರ್ಥ್ಯ ಇದಕ್ಕಿದೆ. ಏಕೆಂದರೆ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿರೋ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದನ್ನು ಹಲವಾರು ಪೇಸ್ಟ್‌ಗಳಲ್ಲಿಯೂ ಬಳಸುತ್ತಾರೆ. ತರಕಾರಿಗಳ ಜೊತೆ ಬೆಳ್ಳುಳ್ಳಿ ಸೇರಿಸಬಹುದು ಅಥವಾ ಸೂಪ್ ಮಾಡಿಯೂ ಕುಡಿಯಬಹುದು
ಜೀರಿಗೆ: ಜೀರಿಗೆಯನ್ನು ಹೆಚ್ಚಾಗಿ ಮಸಾಲೆ ಪದಾರ್ಥದೊಂದಿಗೆ ಬಳಸುತ್ತಾರೆ.ಇದರ ಉಪಯೋಗಗಳು ಅಪಾರವಾಗಿದ್ದು ನಮ್ಮ ದೇಹದಲ್ಲಿ ಜೀರ್ಣ ಶಕ್ತಿ ಅಲ್ಲದೇ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ರಕ್ತ ಸಂಚಲನವನ್ನು ಸುಗಮಗೊಳಿಸುತ್ತದೆ. ಅಲ್ಲದೇ ಅಧಿಕವಾದ ಕ್ಯಾಲ್ಸಿಯಂ ಕಬ್ಬಿಣಾಂಶವನ್ನೂ ಒಳಗೊಂಡಿದೆ.
ಒಣ ಶುಂಠಿ ಪುಡಿ ಅನೇಕ ಉರಿಯೂತದ ಗುಣಗಳನ್ನು ಹೊಂದಿದ್ದು, ಅನಿಲವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಒಣ ಶುಂಠಿ ಪುಡಿಯನ್ನು ಅನೇಕ ಬಗೆಯ ಖಾದ್ಯಗಳಲ್ಲಿ ಪ್ರಮುಖ ಮಸಾಲೆಗಳಾಗಿ ಬಳಸಬಹುದು.
ಆಹಾರಗಳಲ್ಲಿ ಮೆಂತೆ ಸೊಪ್ಪು ಹಾಗೂ ಮೆಂತೆಬೀಜವನ್ನು ಹಲವಾರು ಕಾರಣಗಳಿಗಾಗಿ ಬಳಸುತ್ತಾರೆ ಮತ್ತು ಇದರಲ್ಲಿ ಹೇರಳವಾಗಿ ಕ್ಯಾಲ್ಸಿಯಂ ಪ್ರಮಾಣವೂ ಇದೆ. ಅಲ್ಲದೇ ಹೆರಿಗೆ ಆದ ನಂತರ ಸುಮಾರು ಆರು ತಿಂಗಳು ಇದನ್ನು ಆಹಾರದಲ್ಲಿ ಬಳಸಿದರೆ ಎದೆ ಹಾಲಿನ ಪ್ರಮಾಣ ಹೆಚ್ಚಾಗುವುದಲ್ಲದೇ ಸುಸ್ತು ನಿಶ್ಯಕ್ತಿಯಿಂದ ಮುಕ್ತಿ ಪಡೆಯಬಹುದು.
ಮೊಟ್ಟೆಗಳು ಪ್ರೋಟೀನ್‌ನ ಉತ್ತಮ ಮೂಲ. ಡಿಎಚ್‌ಎ ಬಲವರ್ಧಿತ ಮೊಟ್ಟೆಗಳನ್ನು ಸೇವಿಸುವುದರಿಂದ ಎದೆ ಹಾಲಿನಲ್ಲಿರುವ ಕೊಬ್ಬಿ ನಾಮ್ಲವನ್ನು ಹೆಚ್ಚಿಸಿ, ಮಗುವಿಗೆ ಹೆಚ್ಚು ಪೌಷ್ಠಿಕಾಂಶವನ್ನು ನೀಡುತ್ತದೆ. ಮೊಟ್ಟೆಗಳನ್ನು ಆಮ್ಲೆಟ್ ತಯಾರಿಸಿ, ಅವುಗಳನ್ನು ಕುದಿಸಿ ಅಥವಾ ಬೆಳಗಿನ ಉಪಾಹಾರಕ್ಕಾಗಿ ಬೇಯಿಸಿ ಸೇವಿಸಬಹುದು.