ಬಾಣಂತಿಯರಿಗೆ ನೀಡುವ ಹಾಲಿನ ಪೌಡರ್‍ಗೆ ಕನ್ನ

ಮೈಸೂರು: ಜು.22:- ಗರ್ಭಿಣಿಯರು ಹಾಗೂ ಬಾಣಂತಿಯರ ಪೌಷ್ಟಿಕತೆ ಹೆಚ್ಚಿಸಲು ಸರ್ಕಾರ ನೀಡುವ ಹಾಲಿನ ಪೌಡರ್ ಗೆ ಕನ್ನ ಹಾಕಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಅಂಗನವಾಡಿ ಕೇಂದ್ರದಿಂದ ಹಾಲಿನ ಪೌಡರ್ ಸಾಗಿಸುವ ವೇಳೆ ಖದೀಮ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ. ಶಿಶು ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ದಂಗೆಕೋರರ ಜೊತೆ ಷಾಮಿಲಾಗಿ ಫಲಾನುಭವಿಗಳಿಗೆ ಟೋಪಿ ಹಾಕಿದ್ದಾರೆ.
ಬಡವರಿಗೆ ಸರ್ಕಾರ ನೀಡುವ ಸೌಲಭ್ಯ ತಲುಪಿಸದೆ ಭ್ರಷ ಅಧಿಕಾರಿಗಳು ತಿಂದು ತೇಗುತ್ತಾರೆ. ಗರ್ಭಿಣಿಯರು ಹಾಗೂ ಬಾಣಂತಿಯರ ಪೌಷ್ಟಿಕಾಂಶ ಹೆಚ್ಚಿಸಲು ಸರ್ಕಾರ ನೀಡುವ ಹಾಲಿನ ಪೌಡರ್ ನ್ನು ದಂಗೆಕೋರರ ಲೂಟಿ ಮಾಡುತ್ತಿದ್ದ ಹಗರಣ ಮೈಸೂರಿನಲ್ಲಿ ಬಯಲಾಗಿದೆ ಅಂಗನವಾಡಿಯ ಹಾಲು ಪೌಡರ್ ಗೆ ಕನ್ನ ಹಾಕಿದ ಖದೀಮನೊಬ್ಬ ಗ್ರಾಮಸ್ಥರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪ್ರಕರಣ ನಂಜನಗೂಡು ತಾಲೂಕಿನ ಮಡುವಿನಹಳ್ಳಿ ಗ್ರಾಮದಲ್ಲಿ ನಡೆದಿದೆ. ನೂರಾರು ಪ್ಯಾಕೆಟ್ ಗಳು ಖದೀಮನ ಬಳಿ ಪತ್ತೆಯಾಗಿದೆ. ಗರ್ಭಿಣಿಯರಿಗೆ ಬಾಣಂತಿಯರಿಗೆ ಸೇರಬೇಕಾದ ಹಾಲಿನ ಪೌಡರ್ ಪ್ಯಾಕೆಟ್ ಗಳು ಖಾಸಗಿ ವ್ಯಾಪಾರಸ್ಥರ ಕೈ ಸೇರುವ ದಂಧೆ ಈ ಮೂಲಕ ಬಟ್ಟಾ ಬಯಲಾಗಿದೆ. ಮಡುವಿನಹಳ್ಳಿ ಗ್ರಾಮದ ಅಂಗನವಾಡಿಯ ಸಿಬ್ಬಂದಿ ಮಂಜುಳಾ ಎಂಬುವರು ಹಾಲಿನ ಪ್ಯಾಕೆಟ್ ಗಳನ್ನು ದಂಧೆಕೋರರಿಗೆ ತಲುಪಿಸಿರುವ ಮಾಹಿತಿಯನ್ನ ಸಿಕ್ಕಿಬಿದ್ದ ವ್ಯಕ್ತಿಯೇ ಬಹಿರಂಗಪಡಿಸಿದ್ದಾನೆ. ನಂಜನಗೂಡು ತಾಲೂಕಿನಾದ್ಯಂತ ಈ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದರೂ ಪುರಾವೆಗಳಿಲ್ಲ ಸಬೂಬು ಹೇಳುತ್ತಿದ್ದರು. ಇದೀಗ ಹಾಲಿನ ಪ್ಯಾಕೆಟ್ ಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ನಗರ್ಲೆ ಗ್ರಾಮದ ಜಗದೀಶ್ ಎಂಬ ಖದೀಮ ಗ್ರಾಮಸ್ಥರ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ. ಅಂಗನವಾಡಿ ಸಿಬ್ಬಂದಿಗಳು ದಂಧೆಕೋರರ ಜೊತೆ ಕೈ ಜೋಡಿಸಿರುವುದು ಬೆಳಕಿಗೆ ಬಂದಿದೆ.ತಾಲೂಕಿನ ವಿವಿದ ಅಂಗನವಾಡಿ ಕೇಂದ್ರಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ಆರೋಪಿಯೇ ಒಪ್ಪಿಕೊಂಡಿದ್ದಾನೆ.
ಮಹಿಳಾ ಮತ್ತು ಶಿಶು ಅಭಿವೃದ್ದಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಈ ಸಂಭಂಧ ಹುಲ್ಲಹಳ್ಳಿ ಪೆÇಲೀಸ್ ಠಾಣೆಯಲ್ಲಿ ಎಫ್.ಐ.ಆರ್.ದಾಖಲಾಗಿದ್ದು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.