ಬಾಡಿಯಾಲ ಶ್ರೀ ಬಸವೇಶ್ವರ ಶಾಲಾ ಮಕ್ಕಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಸೈದಾಪುರ:ಜ.11:ಇಲ್ಲಿಗೆ ಸಮೀಪದ ಶ್ರೀ ಬಸವೇಶ್ವರ ಆಂಗ್ಲ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿಗಳಾದ ಸಿಂದು ಅಂಗಡಿ, ಅಶ್ವಿನಿ ತಿಮ್ಮೋಜಿ ಧಾರವಾಡದಲ್ಲಿ ಜರುಗಿದ ತರಂಗ ಇಂಟೆಲೈಕಿಡ್ಜ್ ಲರ್ನಿಂಗ ಪ್ರೈ.ಲಿ.ಕಂಪನಿ ಹಮ್ಮಿಕೊಂಡ ರಾಜ್ಯ ಮಟ್ಟದ ಅಬಾಕಸ್ ಪರೀಕ್ಷೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಈ ಸಾಧನೆ ಇನ್ನೂಳಿದ ಮಕ್ಕಳಿಗೆ ಮಾದರಿಯಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಸಂಸ್ಥೆಯ ವತಿಯಿಂದ ಎಲ್ಲಾ ರೀತಿಯ ಮಾರ್ಗದರ್ಶನ ನೀಡಲಾಗುವುದು. ರಾಷ್ಟ್ರ ಮಟ್ಟದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವ ಮೂಲಕ ಗ್ರಾಮದ ಸಂಸ್ಥೆಯ ಮಹತ್ವ ಹೆಚ್ಚಾಗುವಂತೆ ಮಾಡಲಿ ಎಂದು ಸಂಸ್ಥೆಯ ಅಧ್ಯಕ್ಷ ಶಂಕರಗೌಡ ಮಾಲಿ ಪಾಟೀಲ್, ಉಪಾಧ್ಯಕ್ಷೆ ಅನ್ನಪೂರ್ಣ ಹಿರೇಮಠ, ಕೋಶಾಧ್ಯಾಕ್ಷ ಮರಿಗೌಡ ಪೆÇಲೀಸ್ ಪಾಟೀಲ್, ಮುಖ್ಯಗುರು ಬಸವರಾಜ ಹಿರೇಮಠ, ಶಿಕ್ಷಕರು, ಸಿಬ್ಬಂದಿ ವರ್ಗದವರು ಸೇರಿದಂತೆ ಇತರರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.