ಬಾಡಿಬಿಲ್ಡಿಂಗ್:ಹೃತ್ವಿಕ್ ತೃತೀಯ

ಕೋಲಾರ, ಮೇ ೨೯- ನಗರದ ಕಠಾರಿಪಾಳ್ಯದ ರಾಜ್ಯಮಟ್ಟದ ಕುಸ್ತಿಪಟು ರಮೇಶ್‌ರ ಸುಪುತ್ರ ಆರ್ ಹೃತ್ವಿಕ್ ಬಾಬು ಪ್ರಥಮ ಬಿಎಸ್ಸಿ ವಿದ್ಯಾರ್ಥಿ ಬೆಂಗಳೂರಿನ ಬಸವನಗುಡಿಯ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಬೆಂಗಳೂರು ವಿಶ್ವವಿದ್ಯಾಲಯ ಬಾಡಿ ಬಿಲ್ಡಿಂಗ್ ಉತ್ಸವ್-೨೦೨೩ಸ್ವರ್ಧೆಯಲ್ಲಿ ತೃತೀಯ ಸ್ಥಾನ ಪಡೆಯುವ ಮೂಲಕ ಜಿಲ್ಲೆಗೂ ಹಾಗೂ ಕರ್ನಾಟಕ ರಾಜ್ಯಕ್ಕೂ ಕೀರ್ತಿ ತಂದಿದ್ದಾರೆ.
ನಗರದ ಚೈತನ್ಯ ವಿದ್ಯಾಸಂಸ್ಥೆಯಲ್ಲಿ ಪ್ರಥಮ ಬಿಎಸ್ಸಿ ವ್ಯಾಸಂಗ ಮಾಡುತ್ತಿರುವ ಹೃತ್ವಿಕ್ ಬಾಬು ಕೋಲಾರ ವ್ಯಾಯಾಮ ಶಾಲೆ(ಗರಡಿ ಮನೆ)ಯಲ್ಲಿ ನಿರಂತರ ಅಭ್ಯಾಸ ಮಾಡುವ ಮೂಲಕ ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಲು ಮುಂದಾಗಿದ್ದಾರೆ.