ಬಾಡಾ ಕ್ರಾಸ್ ಚೆಕ್‍ಪೋಸ್ಟ್‍ನಲ್ಲಿ ಎರಡು ಪ್ರಕರಣಗಳಲ್ಲಿ ರೂ.7.43 ಲಕ್ಷ ನಗದು ವಶ

ಸಂಜೆವಾಣಿ ವಾರ್ತೆ

ದಾವಣಗೆರೆ,ಮಾ.27;  ಲೋಕಸಭಾ ಚುನಾವಣೆ ನಡೆಯುತ್ತಿದ್ದು ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಮಾರ್ಚ್ 26 ರಂದು ಮಧ್ಯಾಹ್ನದ ವೇಳೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಾಡಾ ಕ್ರಾಸ್ ಚೆಕ್‍ಪೋಸ್ಟ್‍ನಲ್ಲಿ ಎರಡು ಪ್ರಕರಣಗಳಲ್ಲಿ ರೂ.7.43 ಲಕ್ಷ ನಗದು ವಶಕ್ಕೆ ಪಡೆದು ತನಿಖೆ ಕೈಗೊಳ್ಳಲಾಗುತ್ತಿದೆ ಎಂದು ಸಹಾಯಕ ಚುನಾವಣಾಧಿಕಾರಿ ರೇಣುಕಾ ತಿಳಿಸಿದ್ದಾರೆ.ಕೆಎ-17-ಇಪಿ-7945 ಬೈಕ್ ಮೂಲಕ ರೂ. 2,50 ಲಕ್ಷ ಮತ್ತು ಕೆ.ಎ.17-ಹೆಚ್‍ಪಿ-6553 ಸಂಖ್ಯೆಯ ವಾಹನದಲ್ಲಿ ರೂ.4.93 ಲಕ್ಷ ನಗದು ಸಾಗಣೆ ಮಾಡುತ್ತಿದ್ದ ವೇಳೆ ಚೆಕ್‍ಪೋಸ್ಟ್ ಅಧಿಕಾರಿಗಳು ವಶಕ್ಕೆ ಪಡೆದು ಹಣ ಖಜಾನೆಯಲ್ಲಿರಿಸಿ ಮುಂದಿನ ತನಿಖೆ ಕೈಗೊಳ್ಳಲಾಗುತ್ತಿದೆ.ಚೆಕ್‍ಪೋಸ್ಟ್ ತಂಡದ ಅಧಿಕಾರಿ ಉಮೇಶ್ ಕುಮಾರ್ ಅವರು ಸ್ಥಳ ತನಿಖೆ ಮಾಡಿ ವರದಿ ನೀಡಿರುತ್ತಾರೆ.