ಬಾಟ್ಲಾ ಎನ್ ಕೌಂಟರ್ ಭಯೋತ್ಪಾದಕ ಸಂಘಟನೆಯ ಸಹಚರ ಅರಿಜ್ ಖಾನ್‌ಗೆ ಗಲ್ಲು

ನವದೆಹಲಿ, ಮಾ 15-ಬಾಟ್ಲಾ ಹೌಸ್‌ ಎನ್‌ಕೌಂಟರ್‌ ಪ್ರಕರಣ ಕುರಿತಂತೆ ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ಸಹಚರ ಅರಿಜ್‌ ಖಾನ್‌ಗೆ ಗಲ್ಲು ಶಿಕ್ಷೆ ವಿಧಿಸಿ ದೆಹಲಿ ನ್ಯಾಯಾಲಯವು ಇಂದು ಮಹತ್ವದ ತೀರ್ಪು ನೀಡಿದೆ.
ಬಾಟ್ಲಾ ಹೌಸ್‌ ಪ್ರಕರಣದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಮೋಹನ್ ಚಂದ್ ಶರ್ಮಾ ಅವರ ಕೊಲೆ ಮತ್ತು ಇತರ ಅಪರಾಧಗಳ ಹಿಂದೆ ಅರಿಜ್‌ ಖಾನ್‌ ಮತ್ತು ಆತನ ಸಹಚರರ ಕೈವಾಡವಿರುವ ಬಗ್ಗೆ ನಿಖರ ಸಾಕ್ಷ್ತಗಳು ಲಭ್ಯವಾಗಿದ್ದವು. ಈ ಹಿನ್ನೆಲೆಯಲ್ಲಿನ್ಯಾಯಾಲಯ‌ಅರಿಜ್‌ ಖಾನ್‌ನನ್ನು ತಪ್ಪಿತಸ್ಥ ಎಂದು ಪರಿಗಣಿಸಿತ್ತು.ಅರಿಜ್‌ ಖಾನ್‌ಗೆ ಮರಣದಂಡನೆ ನೀಡಬೇಕು ಎಂದು ಪೊಲೀಸರ ಪರ ಹೆಚ್ಚುವರಿ ಸಾರ್ವಜನಿಕ ಅಭಿಯೋಜಕ ಎ.ಟಿ ಅನ್ಸಾರಿ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.

2008ರಲ್ಲಿ ದಕ್ಷಿಣ ದೆಹಲಿಯ ಜಾಮಿಯಾ ನಗರದಲ್ಲಿ ನಡೆದ ಬಾಟ್ಲಾ ಹೌಸ್‌ ಎನ್‌ಕೌಂಟರ್‌ನಲ್ಲಿ ದೆಹಲಿಯ ವಿಶೇಷ ಘಟಕದ ಪೊಲೀಸ್ ಇನ್‌ಸ್ಪೆಕ್ಟರ್‌ ಶರ್ಮಾ ಸಾವನ್ನಪಿದ್ದರು..

ಸತತ 12 ವರ್ಷಗಳ ಕಾನೂನು ಸಮರದಲ್ಲಿ ಅರಿಜ್ ಖಾನ್ ಗೆ ಗಲ್ಲು ಶಿಕ್ಷೆ ತೀರ್ಪು ಪ್ರಕಟಿಸುವ ಮೂಲಕ ಇನ್ಸ್ ಪೆಕ್ಟರ್ ಶರ್ಮಾ ಸಾವಿಗೆ ನ್ಯಾಯ ದೊರೆತಿದೆ.