ಬಾಗಿ ನಡೆದರೆ ಐಶ್ವರ್ಯ ಬೀಗಿ ನಡೆದರೆ ನಶ್ವರ

ಭಾಲ್ಕಿ:ಮಾ.11:ಜೀವನದಲ್ಲಿ ಮನುಷ್ಯ ಕೈ ಮುಗಿದು ತಲೆ ಬಾಗಿ ನಡೆದರೆ ಪ್ರೀತಿ, ವಿಶ್ವಾಸ, ಐಶ್ವರ್ಯ ಗಳಿಸಬಹುದು ಎಂದು ಶ್ರೀ ನಿರಂಜನ ಮಹಾಸ್ವಾಮಿಗಳು ಹೇಳಿದರು.
್ಕಇಲ್ಲಿನ ಲೆಕ್ಚರ್ ಕಾಲೋನಿಯ ಮೌನೇಶ್ವರ ಮಂದಿರದ ಹತ್ತಿರವಿರುವ ಸುಭಾಷ ಗೋವಿಂದರಾವ ಸೋಂಜಿ ಅವರ ನಿವಾಸದಲ್ಲಿ ವಿಶ್ವಗುರು ಬಸವಣ್ಣನವರ 890ನೇ ಜಯಂತ್ಯೋತ್ಸವ ವಚನಜಾತ್ರೆ 2023 ಹಾಗೂ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರ 24ನೇ ಸ್ಮರಣೋತ್ಸವ ಅಂಗವಾಗಿ ಹಿರೇಮಠ ಸಂಸ್ಥಾನದಿಂದ ಹಮ್ಮಿಕೊಂಡ `54ನೇ ಮನೆಗೊಂದು ಅನುಭವ ಮಂಟಪ’ ಕಾರ್ಯಕ್ರಮ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಮಕ್ಕಳ ಮೇಲೆ ಉತ್ತಮ ಸಂಸ್ಕಾರ ಬೀರಲು ಹೆತ್ತ ತಂದೆ-ತಾಯಿಗಳು ನಡೆ-ನುಡಿ ಒಂದಾಗಿಸಿಕೊಳ್ಳಬೇಕು. ಯೋಗ, ವಾಯುವಿಹಾರ, ಪ್ರಾರ್ಥನೆ ಮತ್ತು ಧ್ಯಾನ ಮೊದಲು ತಾವು ಮಾಡಿ ನಂತರ ಮಕ್ಕಳಿಗೆ ತಿಳಿ ಹೇಳಬೇಕು.ಈಗಿನ ಬಾಲಕರು ಕೇಳಿ ಮಾಡುವುದಕ್ಕಿಂತ ನೋಡಿ ಮಾಡುವುದರಲ್ಲಿ ಪ್ರವೀಣರಾಗಿದ್ದಾರೆ. ಮಕ್ಕಳಿಗೆ ಟಿವಿ, ಮೋಬೈಲ್ ಚಾಟಿಂಗ್, ಪಬ್ಜಿ ವ್ಯಸನಗಳಿಂದ ದೂರವಿಟ್ಟರೆ ಆದರ್ಶ ನಾಗರಿಕರಾಗಲು ಸಾಧ್ಯ ಎಂದು ಬಹು ಮಾರ್ಮಿಕವಾಗಿ ನುಡಿದರು.
ಪ್ರಾಚಾರ್ಯ ಅಶೋಕ ರಾಜೋಳೆ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಅತಿಮುಖ್ಯವಾಗಿದೆ. ಮಕ್ಕಳಿಗೆ ಚಿಕ್ಕವರಿದ್ದಾಗಲೇ ಉತ್ತಮ ಸಂಸ್ಕಾರ ಕಲಿಸುವುದು ಪೋಷಕರ ಪ್ರಮುಖವಾದ ಜವಾಬ್ದಾರಿ.ಮಕ್ಕಳ ಕಡೆ ಲಕ್ಷ ವಹಿಸಿದರೆ ಲಕ್ಷಾಧಿಪತಿಯಾಗುತ್ತಾರೆ.ನಿರ್ಲಕ್ಷ ಮಾಡಿದಲ್ಲಿ ಬೀಕ್ಷಾಧಿಪತಿಯಾಗುತ್ತಾರೆ.ಮಕ್ಕಳ ನಡೆ-ನುಡಿ ಕಡೆ ಸದಾ ಎಚ್ಚರದಿಂದಿರಬೇಕು ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯಕಾರಣಿ ಸದಸ್ಯ ಶೇಷಾರಾವ ಕಣಜಿಕರ್ ಅಧ್ಯಕ್ಷತೆ ವಹಿಸಿದರು.
ಸನ್ಮಾನ: ಸುಭಾಷ ಸೋಂಜಿ ದಂಪತಿಗಳಿಗೆ ಮತ್ತು ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಬಸವರಾಜ ಮರೆ ಅವರಿಗೆ ಸನ್ಮಾನಿಸಿ, ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಜೈಕಾಂತ ಗಂಗೂಜಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಬಾಬುರಾವ ಜೋಳದಾಪಕಾ, ಕದಳಿ ವೇದಿಕೆ ತಾಲೂಕು ಅಧ್ಯಕ್ಷ ಮಲ್ಲಮ್ಮ ನಾಗನಕೇರೆ ಪ್ರಮುಖರಾದ ಗೋವಿಂದರಾವ ಸೋಂಜಿ,ಸುನೀಲ ಸೋಂಜಿ,ಧನರಾಜ ಬಂಬಳಗೆ,ಬಾಬು ಲಾದಾ,ಅನೀಲ ಹಲಕುಡೆ,ಬಾಬು ಬೆಲ್ದಾಳೆ,ಶಿವಪುತ್ರ ದಾಬಶೆಟ್ಟಿ,ಶರಣಪ್ಪ ರುಮ್ಮಾ, ಸಂಗಮೇಶ ಸೋಂಜಿ,ದಿಲೀಪ ಜಾಧವ,ಡಿಗಂಬರ ಜಾಧವ,ಪ್ರವೀಣ ಜಾಧವ,ಸುಭಾಷ ರಾಜನಾಳೆ,ಸಂಗಮೇಶ ಬಿರಾದಾರ,ಲಕ್ಷಂ ಮೇತ್ರೆ,ಮಹೇಶ ಬಿರಾದಾರ,ಶರಣಪ್ಪ ಪಾಟೀಲ, ಕಪಿಲ ಕಲ್ಯಾಣೆ, ರವಿ ಬಿರಾದಾರ, ಬಿ.ಎಮ್.ಸುತಾರ, ಶಿವಪ್ರಕಾಶ ಕುಂಬಾರ, ಉಪಸ್ಥಿತರಿದ್ದರು.
ಶ್ರೀದೇವಿ ಶಾಂತಯ್ಯ ಸ್ವಾಮಿ ಪ್ರಾರ್ಥನೆಗೀತೆ ನಡೆಸಿಕೊಟ್ಟರು. ಕರ್ನಾಟಕ ಜಾನಪದ ಪರಿಷತ್ತ ತಾಲೂಕು ಅಧ್ಯಕ್ಷ ವಸಂತರಾವ ಹುನಸನಾಳೆ ಸ್ವಾಗತಿಸಿದರು. ಸಾಹಿತಿ ವೀರಣ್ಣ ಕುಂಬಾರ ನಿರೂಪಿಸಿದರು. ಸುಭಾಷ ಸೋಂಜಿ ವಂದಿಸಿದರು.