ಬಾಗಿದ ಕಂಬ, ಜೋತುಬಿದ್ದ ವಿದ್ಯುತ್‍ತಂತಿ ಸರಿಪಡಿಸಲು ಲಂಚ: ರೈತರ ಆರೋಪ

??

ಆಳಂದ:ಮೇ.29: ಕೊಡಲಂಗರಾ ಮಾರ್ಗದ ಹೊಲದಲ್ಲಿನ ಬಾಗಿನಿಂತ ವಿದ್ಯುತ್ ಕಂಬ ಹಾಗೂ ಅದರ ಜೋತುಬಿದ್ದ ತಂತಿನ್ನು ಸರಿಪಡಿಸುವಂತೆ ಮನವಿ ಮಾಡಿದರೆ ಸಂಬಂಧಿತ ಜೆಸ್ಕಾಂ ಲೈನ್‍ಮ್ಯಾನ್‍ಗಳು ಹಣ ಕೇಳುತ್ತಿದ್ದಾರೆ. ರೈತರ ಜೀವಕ್ಕಿಂತ ಇವರಿಗೆ ಹಣವೇ ಮುಖ್ಯವಾಗಿದೆ ಎಂದು ಪ್ರಶ್ನಿಸಿ ಕೆಲವು ರೈತರು ಲಿಖಿತವಾಗಿ ದೂರುವ ಮೂಲಕ ಆರೋಪಿಸಿದ್ದಾರೆ.
ಈ ಕುರಿತು ಜೆಸ್ಕಾಂ ಅಭಿಯಂತರರಿಗೆ ಸಂಬಂಧಿತ ಆರು ಮಂದಿ ರೈತರು ಲಿಖಿತವಾಗಿ ದೂರು ಸಲ್ಲಿಸಿ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಹಲವು ವರ್ಷಗಳಿಂದ ಹೊಲಗಳಲ್ಲಿ ಹಾದುಹೋಗಿರುವ ವಿದ್ಯುತ್ ಕಂಬದಿಂದ ಜೋತುಬಿದ್ದು ತಂತಿಗಳಿಂದು ಹೊಲದಲ್ಲಿ ಕಡಿದು ಬಿದ್ದು ಜೀವಹಾನಿಯಾಗುವ ಅಪಾಯ ಕಾದಿದೆ. ಕೂಡಲೇ ಇದನ್ನು ಸರಿಪಡಿಸಿ ಅಥವಾ ತೆರವುಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕೊಡಲಹಂಗರಗಾ ರಸ್ತೆ ಬದಿಯ ರಾಜಶೇಖರ ತಟ್ಟಿ ಇವರ ತೋಟದ ವಿದ್ಯುತ್ ಟಿ.ಸಿ. ಯಿಂದ ರೈತ ಸನ್ಮುಖಪ್ಪಾ ಜಿ. ಹಡಪದ, ಜಯಕುಮಾರ ಎಚ್ ವರನಾಳೆ, ಭಾರತ ಎಚ್. ವರನಾಳೆ, ಬಾಬು ಎಂ. ಪವಾರ, ಜ್ಯೋತಿ ಪಿ, ಶಹಾ, ರಾಜಶೇಖರ ಈ ರೈತರು ತೋಟಗಳಿಗೆ ವಿದ್ಯುತ್ ಪಡೆಯುತ್ತಿದ್ದು, ಇಲ್ಲಿ ಕಬ್ಬು, ತರಕಾರಿ, ದ್ರಾಕ್ಷಿ ಬೆಳೆಗಾರರಾಗಿದ್ದು, ಆದರೆ ಜೆಸ್ಕಾನಿಂದ ಹಾಕಿದ ವಿದ್ಯುತ್ ಸರಬರಾಜು ಕಂಬಗಳು ಬಾಗಿವೆ. ತಂತಿಗಳು ತಲೆಗೆ, ಕೈಗೆ ತಗಲುವ ಹಾಗೆ ನಮ್ಮ ತೋಟದಲ್ಲಿ ತಂತಿ ಜೋತು ಬಿದ್ದಿವೆ ತೆರವುಗೊಳಿಸುತ್ತಿಲ್ಲ ಎಂದು ಅವರು ವಿವರಿಸಿದ್ದಾರೆ.
ಈ ಕುರಿತು ಹಲವಾರು ಬಾರಿ ಅರ್ಜಿ ಸಲ್ಲಿಸಿದರು ಮತ್ತು ಲೈನ್‍ಮ್ಯಾನ್‍ಗಗೆ ಮನವಿ ಮಾಡಿದರು ಸಹ ಯಾವುದೇ ಪ್ರಯೋಜನೆ ಆಗಿಲ್ಲ. ಕಂಬಗಳು ನೆಟ್ಟಗೆ ಮಾಡಿ ನಿಲ್ಲಸಲು ಹಣ ಕೇಳ್ತಾದಿದ್ದಾರೆ. ರೈತರ ಜೀವಕ್ಕಿಂತ ಹಣ ಮುಖ್ಯವಾಗಿದೆ. ರೈತನ ಬೆಳೆ ಹಾಳಾದರೂ ಸ್ಪಂದಿಸ ಲೈನಮ್ಯಾನ್ ವೇತನ ಪಡೆಯುವ ಲೈನ್‍ಮ್ಯಾನ್‍ಗಳು ಗುತ್ತಿಗೆ ಸಿಬ್ಬಂದಿಗರಿಗೆ 1 ಕಂಬನೆಟ್ಟಗೆ ಮಾಡಿ ತಂತಿಗಳು ಸರಿಯಾಗಿ ಬೀಗಿಯಲು ಕಂಬಕ್ಕೆಎ 2000 ರೂ. ಒಟ್ಟು ಕಂಬಗಳ ನೆಟ್ಟಗೆ ಮಾಡಿ ತಂತಿ ಜಯಲು 10,000/- ರೂ. ಲಂಚ ಕೇಳಿದ್ದಾರೆ ಎಂದು ಆರೋಪಿಸಿದರು.
ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ರೈತರು ಲಂಚ ಕೊಟ್ಟೆ ಕೆಲಸ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಮಳೆಗಾಲ ಪ್ರಾರಂಭವಾದರೆ ತಂತಿ ಎಳೆಯಲು ಕಂಬಗಳು ನೆಟ್ಟಗೆ ಮಾಡಲು ಕೆಸರಲ್ಲಿ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿ ವಿದ್ಯುತ್ ಹರಿದು ರೈತರೂ ಮೃತಪಟ್ಟರೆ ಮಾತ್ರ ಪರಿಶೀಲನೆಗೆ ಅಧಿಕಾರಿಗಳು ದಂಡು ಬರುವ ಬದಲು ಈ ರೈತರು ಈ ರೈತರು ಮಾಡಿದ ಮನವಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದ್ದಾರೆ.
ಲೈನ್‍ಮ್ಯಾನ್‍ಗಳ ಅಹಂಕಾರ ಮಿತಿಮಿರಿದೆ, ವೇತನ ಇದ್ದರು ರೈತರಿಂದ ಹಣ ಪಡದೇ ಕೆಲಸ ಮಾಡುವ ಪ್ರವರ್ತಿಗೆ ಸರ್ಕಾರ ಸೂಚನೆ ನೀಡಬೇಕು. ಸದ್ಯ ತೋಟದ ಮನೆಯಲ್ಲಿ ವಿದ್ಯುತ್ ಸರಬರಾಜ ಇಲ್ಲದಕ್ಕೆ ತೊಂದರೆ ಎದುರಾಗಿದೆ ಎರಡು ದಿನಗಳಲ್ಲಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.