ಬಾಗಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಗ್ರಾಮಗಳಿಗೆ ಶಾಸಕರ ಭೇಟಿ

ಹರಪನಹಳ್ಳಿ.ಜು.೧೭: ತಾಲೂಕಿನ ಬಾಗಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ  ಶಾಸಕ ಜಿ.ಕರುಣಾಕರರೆಡ್ಡಿ ಭೇಟಿ ನೀಡಿ, ಗ್ರಾಮಗಳಲ್ಲಿನ ಸಾರ್ವಜನಿಕರ ಕುಂದು ಕೊರತೆಗಳನ್ನು ಕೇಳಿ ಪರಿಹಾರಕ್ಕೆ ಪ್ರಯತ್ನಿಸಿದರು.ಪಂಚಾಯಿತಿ ವ್ಯಾಪ್ತಿಯ ಕಾಯಕದಹಳ್ಳಿ, ದಡಗಾರನಹಳ್ಳಿ, ಶೃಂಗಾರತೋಟ,ಕೋಡಿಹಳ್ಳಿ ಗ್ರಾಮಗಳಲ್ಲಿ ಜೆಜೆಎಂನಲ್ಲಿ ಮನೆ ಮನೆಗೂ ನಳ ಸಂಪರ್ಕಿಸುವ ಯೋಜನೆಗೆ ಭೂಮಿ ಪೂಜೆ ನೇರವೇರಿಸಿದ ನಂತರ ಆಯಾ ಗ್ರಾಮಗಳಲ್ಲಿನ ದೇವಸ್ಥಾನಗಳಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಅಲಿಸಿದರು.ಶೃಂಗಾರತೋಟದ ಗ್ರಾಮಸ್ಥರು ಗ್ರಾಮದ ಸ್ಮಶಾನ ಅಭಿವೃದ್ಧಿ ರಸ್ತೆ ಸಂಪರ್ಕ ಹಾಗೂ ಆಂಜನೇಯ ದೇವಸ್ಥಾನಕ್ಕೆ ಗೋಪುರ ನಿರ್ಮಾಣಕ್ಕೆ ಮನವಿ ಮಾಡಿಕೊಂಡರು. ಇದೇ ವೇಳೆ ಗ್ರಾಮದ ಅಂಗನವಾಡಿ ಕೇಂದ್ರವನ್ನು ಪರಿಶೀಲಿಸಿದರು.ಕೋಡಿಹಳ್ಳಿ ಗ್ರಾಮದಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಅಲಿಸುವ ಸಂದರ್ಭದಲ್ಲಿ ಶಾಲಾ ಕೊಠಡಿ ದುರಸ್ತಿಯಾಗಿದೆ,ಒಳಚರಂಡಿವ್ಯವಸ್ಥೆ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸುವಂತೆ ಗ್ರಾಮಸ್ಥರು ಶಾಸಕರಿಗೆ ಮನವಿ ಮಾಡಿದರು,ಈ ವೇಳೆ ಗ್ರಾಮದಲ್ಲಿ ರಸ್ತೆ ಅಪೂರ್ಣವಾಗಿದ್ದಕ್ಕೆ ಗ್ರಾಮದ ಕೆಲವು ಮುಖಂಡರು ಆಕ್ಷೇಪ ವ್ಯಕ್ತಪಡಿಸಿದಾಗ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ನಡುವೆ ಮಾತಿನ ಜಟಾಪಟಿ ನಡೆಯಿತು, ಇದನ್ನು ಗಮನಿಸಿದ ಶಾಸಕರು ಈಗಾಗಲೇ ರಸ್ತೆ ಪೂರ್ಣಗೊಳಿಸಲು ಕ್ರಿಯಾ ಯೋಜನೆ ತಯಾರಿಸಲಾಗಿದೆ, ನಾನು ಕೇವಲ ಕೋಡಿಹಳ್ಳಿಗೆ ಮಾತ್ರ ಶಾಸಕ ಅಲ್ಲ 186 ಹಳಿಗಳಿಗೆ ಶಾಸಕನಾಗಿದ್ದೇನೆ ಎಲ್ಲರು ಕೆಲಸ ಕೇಳುತ್ತಾರೆ, ನಿಮ್ಮ ಊರಿಗೆ ಹೆಚ್ಚಿನ ಕೆಲಸವಾಗಿವೆ ಎಂದು ಹೇಳಿದರು. ಆದರೂ ಗ್ರಾಮದ ಮುಖಂಡರಾದ ಪರಸಪ್ಪ ಮಾತಿನ ಚಕಮಕಿ ಮುಂದುವರಿಸಿದರು, ಶಾಸಕರು ಬಾಗಳಿ ಗ್ರಾಮಕ್ಕೆ ತೆರಳಿದರು.ಗ್ರಾಪಂ ಅಧ್ಯಕ್ಷ ಬಿ.ನಾಗರಾಜ, , ಎಇಇ ಸಿದ್ದರಾಜ, ಕೃಷಿ ಸಹಾಯಕ ನಿರ್ದೇಶಕ ಮಂಜುನಾಥ ಗೊಂದಿ, ತೋಟಗಾರಿಕ ಸಹಾಯಕ ನಿರ್ದೇಶಕ ಜಯಸಿಂಹ, ಮುಖಂಡರಾದ ಕಣಿವಿಹಳ್ಳಿ ಮಂಜುನಾಥ,ವಿಷ್ಣುವರ್ಧನ್ ರೆಡ್ಡಿ, ಕಲ್ಲೇರ ಬಸವರಾಜ, ಬಾಗಳಿ ಕೊಟ್ರೇಶಪ್ಪ,ಗಿರೀಶ್,ಶುಗಾರತೊಟ ಲಿಂಗರಾಜು, ಎಂ.ಮಲ್ಲೇಶ್, ಶಾಸಕರ ಆಪ್ತ ಕಾರ್ಯದರ್ಶಿ ಹೆಚ್.ಎಸ್ ಹೇಮಂತ್ ಕುಮಾರ್,ಸಿದ್ದೇಶ್ ರೆಡ್ಡಿ ಹಾಗೂ ಗ್ರಾಮಸ್ಥರು ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂಧಿಗಳು ಇದ್ದರು.