ಬಾಗಳಿಯಲ್ಲಿರುವ ಚಾಳುಕ್ಯನ ವಾಸ್ತು ಶಿಲ್ಪಗಳು
 ಸಂಶೋಧನಾ ಪ್ರಬಂಧ ಮಂಡನೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.18: ದಿ ಮಿಥಿಕ್ ಸೊಸೈಟಿ ಬೆಂಗಳೂರು, ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ ನವದೆಹಲಿ, ದಾವಣಗೆರೆ ವಿಶ್ವ ವಿದ್ಯಾಲಯ, ದಾವಣಗೆರೆ, ಭಾರತೀಯ ಇತಿಹಾಸ ಸಂಕಲನ ಯೋಜನಾ ನವದೆಹಲಿ ಇವರ ಸಂಯುಕ್ತಾಶ್ರಯದಲ್ಲಿ ನಿನ್ನೆ ಶುಕ್ರವಾರ, ಬಾಗಳಿಯ ಶ್ರೀ ವೀರಾಂಜನೇಯ ದೇವಸ್ಥಾನ ಸಭಾ ಭವನದಲ್ಲಿ ನಡೆದ ರಾಷ್ಟ್ರೀಯ ವಿಚಾರ ಸಂಕೀರಣ ಬಾಗಳಿಯ ಇತಿಹಾಸ ಮತ್ತು ಸಂಸ್ಕೃತಿ, ಸಮಾರಂಭದಲ್ಲಿ, ಬಳ್ಳಾರಿಯ ಇತಿಹಾಸ ಸಂಶೋಧಕರು ಹಾಗೂ ಕರ್ನಾಟಕ ಇತಿಹಾಸ ಅಕಾಡೆಮಿ, ಜಿಲ್ಲಾಧ್ಯಕ್ಷರು ಆದ ಟಿ.ಹೆಚ್.ಎಂ. ಬಸವರಾಜರವರು, ಹರಪನಹಳ್ಳಿ ತಾಲ್ಲೂಕಿನ ಬಾಗಳಿಯಲ್ಲಿರುವ ಚಾಳುಕ್ಯನ ವಾಸ್ತು ಶಿಲ್ಪಗಳ ಬಗ್ಗೆ ಸಂಶೋಧನಾ ಪ್ರಬಂಧವನ್ನು ಮಂಡಿಸಿದರು,
18ನೇ ಶತಮಾನದಲ್ಲಿ ಬ್ರಿಟೀಷ್ ಅಧಿಕಾರಿಯಾಗಿದ್ದ, ಅಲೆಝಾಂಡರ್ ರೀಯಾ ಇವರು, ಬಾಗಳಿಗೆ ಭೇಟಿ ಇತ್ತು, ಅಲ್ಲಿಯ ವಾಸ್ತು ಶಿಲ್ಪದ ಬಗ್ಗೆ ಮತ್ತು ಕಲ್ಲೇಶ್ವರ ದೇವಸ್ಥಾನದ ಬಗ್ಗೆ ಅವರು ಬಳ್ಳಾರಿ ಜಿಲ್ಲೆಯ ಚಾಳುಕ್ಯನ ವಾಸ್ತು ಶಿಲ್ಪಗಳ ಬಗ್ಗೆ ಸವಿಸ್ಥಾರವಾಗಿ ವಿವರಿಸಿದ್ದಾರೆ. ಈ ಪುಸ್ತಕ 1896ರಲ್ಲಿ ಪ್ರಕಟವಾಗಿದೆ. ಇದರ ಜೊತೆಗೆ ಅವರು ತಾಲ್ಲೂಕಿನಲ್ಲಿರುವ ನಿಲಗುಂದ ಭೀಮೇಶ್ವರ ದೇವಸ್ಥಾನ, ಹಲವಾಗಲು ಕಲ್ಲೇಶ್ವರ ದೇವಸ್ಥಾನ, ಹಡಗಲಿ ಕೇಶವ ಮತ್ತು ಕಲ್ಲೇಶ್ವರ ದೇವಸ್ಥಾನ, ಹಿರೇ ಹಡಗಲಿ ಕಲ್ಲೇಶ್ವರ ದೇವಸ್ಥಾನ, ಕುರವತ್ತಿ ಮಲ್ಲಿಕಾರ್ಜುನ ದೇವಸ್ಥಾನ, ಹೊಳಲು ಅನಂತಶಯನ, ಮಾಗಳ ವೇಣುಗೋಪಾಲ ಸ್ವಾಮಿ, ಬಿದರಹಳ್ಳಿ ಲಕ್ಷ್ಮೀನರಸಿಂಹಸ್ವಾಮಿ, ಕೋಗಳಿ, ಅಂಬಳಿ, ಬನ್ನಿಕಲ್ಲು, ಈ ಊರುಗಳಲ್ಲಿರುವ ಎಲ್ಲಾ ವಾಸ್ತು ಶೀಲ್ಪಗಳ ಬಗ್ಗೆ ವಿವರಿಸಿದ್ದಾರೆ. ವಿಶೇಷವಾಗಿ ಬಾಗಳಿಯಲ್ಲಿ ಇರುವ ನವರಂಗ ಮಂಟಪದಲ್ಲಿ 63 ಕಂಬಗಳು ಬೇರೆ ಬೇರೆ ರೀತಿಯಲ್ಲಿ ಇರುವುದನ್ನು ವಿವರಿಸಿದ್ದಾರೆ. ಅಲ್ಲಿರುವ ಪಂಚಲಿಂಗೇಶ್ವರರು, ವೀರಭದ್ರ, ಕಲ್ಲೇಶ್ವರ, ಸರಸ್ವತಿ ನರಸಿಂಹ, ಸೂರ್ಯನಾರಾಯಣ, ಸಪ್ತ ಮಾತೃಕೆಯರು ಬ್ರಹ್ಮ, ವಿಷ್ಣು, ಮುಂತಾದವರ ವಾಸ್ತು ಶಿಲ್ಪದ ವಿವರಣೆ ಮಾಡಿದ್ದಾರೆ. ಆದರೆ ಗೋಪುರದ ಮೇಲೆ ಇರುವ ಲೈಂಗಿಕ ಅಥವಾ ಮಿಥುನ ಶಿಲ್ಪಗಳನ್ನು ಕೆತ್ತಲಾಗಿದೆ. ಇದರ ಬಗ್ಗೆ ಉಲ್ಲೇಖವಿಲ್ಲ. ಕಾರಣ ಸಂಶೋಧಕರು ಶಿಲ್ಪಿ ಏಕೆ ಈ ವಿಗ್ರಹಗಳನ್ನು ಕೆತ್ತಿದ್ದಾನೆ ಎಂಬುವುದರ ಬಗ್ಗೆ ಕ್ಷೇತ್ರ ಕಾರ್ಯ ಮಾಡಬೇಕು ಮತ್ತು ಡಾ.ಎಸ್.ಎಂ.ವೃಷಬೇಂದ್ರ ಸ್ವಾಮಿಯವರು ತಾಲ್ಲೂಕಿನ ಪಂಚ ಗಣಾಧೀಶ್ವರರ ಬಗ್ಗೆ ಬರೆಯುತ್ತಾ ಇಲ್ಲಿ ಈ ಶರಣರು ಇಲ್ಲಿಗೆ ಬಂದು ಹೋಗಿರುವುದು ತಿಳಿಯುತ್ತದೆ. ಅದರಲ್ಲಿ ಒಬ್ಬರಾದ ಬಾಗಳಿಯ ಪಕ್ಕದಲ್ಲಿಯೇ ಇರುವ ಕೂಲಹಳ್ಳಿಯ ಮದ್ದಾನೇಶ್ವರ ಶರಣರು ಬಾಗಳಿಯ ಕಲ್ಲೇಶ್ವರ ದೇವಸ್ಥಾನಕ್ಕೆ ಬಂದಿದ್ದಾರೆಂಬ ಐತಿಹ್ಯ ಇದೆ. ಈಗ ಪುರತತ್ವ ಇಲಾಖೆಯವರು ಇಲ್ಲಿ ಮ್ಯೂಜೀಯಂ ಸ್ಥಾಫಿಸಿ ಇಲ್ಲಿಯ ಶಿಲ್ಪ ಕಲೆಗಳನ್ನು ಸ್ಮಾರಕಗಳನ್ನು, ಶಾಸನಗಳನ್ನು ರಕ್ಷಿಸಿದ್ದಾರೆ. ಇದೇ ಸಂದರ್ಭದಲ್ಲಿ ಟಿ.ಹೆಚ್.ಎಂ. ಬಸವರಾಜ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. 
ವೇದಿಕೆಯಲ್ಲಿ ನವದೆಹಲಿಯ ಎ.ಬಿ.ಐ.ಎಸ್.ವೈ. ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಡಾ. ಬಾಲಮುಕುಂದ ಪಾಂಡೆ, ದಿ.ಮಿಥಿಕ್ ಸೊಸೈಟಿ, ಬೆಂಗಳುರಿನ ಉಪಾಧ್ಯಕ್ಷರಾದ ಪ್ರೊ.ಎಂ.ಕೊಟ್ರೇಶ್, ಗೌರವ ಕೋಶಾಧ್ಯಕ್ಷರಾದ ಕೆ.ಎನ್.ಹಿರಿಯಣ್ಣಯ್ಯ, ದಾವಣಗೆರೆ ವಿಶ್ವ ವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೊ.ವೆಂಕಟರಾವ್ ಎಂ. ಪಾಲಾಟಿ, ಬಾಗಳಿಯ ನಾಟಿ ವೈದ್ಯರಾದ ಪಂಡಿತ ಡಾ.ಬಿ.ಬಿ.ಹೊಸೂರಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಕೆ.ನೀಲಮ್ಮ, ಕರ್ನಾಟಕ ಇತಿಹಾಸ ಅಕಾಡೆಮಿ ರಾಜ್ಯಾಧ್ಯಕ್ಷರಾದ ಡಾ.ದೇವರಕೊಂಡ ರೆಡ್ಡಿ, ಡಾ.ಡಿ.ಬಿ. ಪರಶಿವಮೂರ್ತಿ, ಡಾ.ಎಸ್.ವೈ. ಸೋಮಶೇಖರ್, ಡಾ.ಹೊನ್ನೂರಸ್ವಾಮಿ, ಡಾ. ವಿಠಲ ಪೋತದಾರ, ಶ್ರೀ ರಾಜಶೇಖರ್ ಬಣಕಾರ್, ಬಾಗಳಿ ಗ್ರಾಮ ಪಂಚಾಯಿತಿ ಸದಸ್ಯರು ಸಮಸ್ತ ಗ್ರಾಮಸ್ಥರು, ಮಿಥಿಕ್ ಸೊಸೈಟಿಯ ಎಸ್. ರವಿ, ಬಾಗಳಿ ಸ್ಮಾರಕ ಸಂರಕ್ಷಣಾಧಿಕಾರಿ ಅಮರೇಶಪ್ಪ ಇನ್ನು ಮುಂದಾದವರು ಉಪಸ್ಥಿತರಿದ್ದರು.