ಬಾಗಲವಾಡ ಪ್ರಾ.ಆ.ಕೇಂ.: ಕೇಂದ್ರ ತಂಡ ಭೇಟಿ

ಸಿರವಾರ.ಮೇ.೦೨- ತಾಲೂಕಿನ ಬಾಗಲವಾಡ ಗ್ರಾಮದ ಆರೋಗ್ಯ ಮತ್ತು ಕ್ಷೇಮ ಕೇಂದ್ರಕ್ಕೆ ರಾಷ್ಟ್ರೀಯ ಮೌಲ್ಯ ಮಾಪನ ತಂಡ ಬುಧವಾರ ಭೇಟಿನೀಡಿ ಆರೋಗ್ಯ ಕೇಂದ್ರ ಸ್ವಚ್ಛತೆ, ಸಾರ್ವಜನಿಕರ ಸೇವೆ, ಸರಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡ ಬಗ್ಗೆ ಡಾ. ಸುಬ್ರಹ್ಮಣಿಯನ್, ಡಾ.ಮಹಮ್ಮದ್ ರಿಜ್ವಾನ್ ಅಲಿ, ಓಂಕಿS ಪರಿಶೀಲನೆ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಿವಕುಮಾರ್, ತಾಲೂಕು ಆರೋಗ್ಯ ಅಧಿಕಾರಿ ಡಾ.ಶರಣಬಸವ, ಹಾಗೂ ಮಹೇಶ, ಬಾಲಪ್ಪ, ಆಶಾ ಕಾರ್ಯಕರ್ತೆಯರು ಸೇರಿದಂತೆ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಸಿಬ್ಬಂದಿ ವರ್ಗ ಇದ್ದರು.