ಬಾಗಲವಾಡ ಪಿಡಿಓ ವಿರುದ್ಧ ಮೇಲಾಧಿಕಾರಿ ಕ್ರಮಕ್ಕೆ ಸೂಚನೆ ಇಓರಿಂದ ಮುಚ್ಚಿ ಹಾಕುವ ಯತ್ನ

ರಾಮಣ್ಣ ಕವಿತಾಳ
ಕವಿತಾಳ.ಜು.೨೯- ಸಮೀಪದ ಬಾಗಲವಾಡ ಗ್ರಾಪಂ ಅಭಿವೃದ್ದಿಧಿಕಾರಿ ಪೃಥ್ವಿರಾಜ್‌ರವರು ಪಂಚಾಯತನಲ್ಲಿ ಅವ್ಯಹಾರ ನಡೆಸಿದ್ದಾರೆ ಎಂದು ತಾಪಂಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಬಾಗಲವಾಡರವರು ದೂರನ್ನು ನೀಡಿ ಕ್ರಮಕ್ಕಾಗಿ ಒತ್ತಾಯಿಸಿದ್ದರು. ತಾ.ಪಂ ಅಧಿಕಾರಿಗಳು ದಿನಾಂಕ ೨೫.೦೩.೨೦೨೨ರಂದು ಪಂಚಾಯತಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಜಿ.ಪಂ ಸಿಇಓ ನೂರ ಜಹಾರ್‌ಖಾನಂರವರಿಗೆ ವರದಿಯನ್ನು ಸಲ್ಲಿಸಿದ್ದರು.
ಜಿಪಂ ಕಾರ್ಯನಿರ್ವಾಹಕಧಿಕಾರಿಗಳು ವರದಿಯನ್ನು ಪರಿಶೀಲನೆ ನಡೆಸಿ ಅವ್ಯವಾರ ನಡೆಸಿದ ಬಗ್ಗೆ ದೃಡವಾಗಿರುವುದರಿಂದ ಸರ್ಕಾರದ ಹಣವನ್ನು ದುರ್ಬಳಕೆ ಮಾಡಲಾಗಿದೆ. ಇತನ ವಿರುದ್ದ ಕ್ರಮವನ್ನು ಕೈಗೊಳ್ಳಬೇಕು ಮತ್ತು ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಬೇಕು ಎಂದು ಸಿರವಾರ ತಾ.ಪಂ ಕಾರ್ಯನಿರ್ವಾಹಕಧಿಕಾರಿ ಉಮೇಶರವರಿಗೆ ಆದೇಶಿದ್ದರು. ತಾಪಂ ಅಧಿಕಾರಿಗಳು ಪಿಡಿಓ ಪೃಥ್ವಿರಾಜ್ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸ್‌ರಿಗೆ ದೂರನ್ನು ನೀಡಿದ್ದರು. ದಾಖಲೆಗಳನ್ನು ಪರಿಶೀಲನೆ ನಡೆಸಿದ ಪೊಲೀಸ್‌ರು ಪಿಡಿಓ ವಿರುದ್ದ ಪ್ರಕರಣ ದಾಖಲಿಸಲು ಸೂಕ್ತ ದಾಖಲೆಗಳು ನೀಡಿಲ್ಲ ಬರಿ ಒಂದು ಹಾಳಿಯನ್ನು ನೀಡಿದ್ದು ಇದರಿಂದ ಪ್ರಕರಣ ದಾಖಲಿಸಲು ಬರುವದಿಲ್ಲವೆಂದು ತಿಳಿಸಿದರು.
ಈ ಕುರಿತು ಸಂಘಟನೆಯ ಸದಸ್ಯರಾದ ನಾಗರಾಜ ಹಿಂದಿನಮನೆ, ಗಂಗಾಧರ ಬಾಗಲವಾಡ, ಮೌನೇಶ ಕೋರಿ,ಹುಚ್ಚರಡ್ಡಿ ಭವಾನಿ, ಜ್ಯೋತಿ ಬಸವ ಜಗದೀಶ ಬಾಗಲವಾಢರವರು ಮೇಲಾಧಿಕಾರಿಗಳು ಪಿಡಿಓ ವಿರುದ್ದ ಕ್ರಮಕ್ಕಾಗಿ ಒತ್ತಾಯ ಮಾಡಿದ್ದರೂ ತಾ.ಪಂ ಅಧಿಕಾರಿ ಉಮೇಶ ಪಿಡಿಓರವರ ಆಮೀಷಕ್ಕೆ ಒಳಗಾಗಿ ಪೊಲೀಸ್ ಠಾಣೆಗೆ ಸರಿಯಾದ ದಾಖಲೆಗಳನ್ನು ಮುಟ್ಟಿಸುತ್ತಿಲ್ಲ ಪಿಡಿಓ ಮತ್ತು ಇಓ ವಿರುದ್ದ ಹೋರಾಟಮಾಡಲಾಗುವದು ಎಂದು ತಿಳಿಸಿದರು.

ಬಾಗಲವಾಡ ಪಂಚಾಯತನ ಪಿಡಿಓ ವಿರುದ್ದ ಪ್ರಕರಣ ದಾಖಲಿಸುವಂತೆ ಈಗಾಗಲೆ ಇಓರವರಿಗೆ ಸೂಚನೆ ನೀಡಲಾಗಿದೆ. ವಿಳಂಭವಾದರೆ ಸಹಿಸಲಾಗುವದಿಲ್ಲ ಇಓಗೆ ಮಾತನಾಡಿ ಕ್ರಮಕ್ಕಾಗಿ ಸೂಚಿಸಲಾಗುವದು. ನೂರು ಜಹಾರ್‌ಖಾನಂ ಜಿಪಂ ಸಿಇಓ ರಾಯಚೂರು

ನಾವು ಪ್ರಕರಣವನ್ನು ದಾಖಲಿಸುವಂತೆ ಪೊಲೀಸ್ ಠಾಣೆಗೆ ದೂರನ್ನು ನೀಡಲಾಗಿದೆ. ಪ್ರಕರಣವು ದಾಖಲಾಗಿದೆ ಪೊಲೀಸ್‌ರು ದಾಖಲೆ ಸರಿಯಿಲ್ಲವೆಂದು ಹೆಳಿರುವದರಿಂದ ಹೆಚ್ಚಿನ ದಾಖಲೆಗಾಗಿ ಜಿಪಂಗೆ ವರದಿಯನ್ನು ನೀಡಲು ಕೇಳಲಾಗಿದೆ.
ಉಮೇಶ ತಾ.ಪಂ ಇಓ ಸಿರವಾರ

ಪಿಡಿಓ ವಿರುದ್ದ ಪ್ರಕರಣ ದಾಖಲಿಸುವಂತೆ ಇಓರವರು ಹೇಳಿದ್ದಾರೆ ಆದರೆ ಸರಿಯಾದ ದಾಖಲೆ ನೀಡದಿರುವದರಿಂದ ಪ್ರಕರಣ ದಾಖಲಿಸಲು ಬರವದಿಲ್ಲ-ವೆಂಕಟೇಶ ಪಿಎಸ್‌ಐ ಕವಿತಾಳ

ಬಾಗಲವಾಡ ಗ್ರಾಪಂನಲ್ಲಿ ಪಿಡಿಓ ಪೃಥ್ವಿರಾಜ್‌ರವರು ೧೫ನೇ ಹಣಕಾಸು ಮತ್ತು ನರೇಗಾ ದಲ್ಲಿ ೧೪.೭೨.೨೦೧ ರೂಪಾಯಿ ಅವ್ಯಹಾರ ನಡೆಸಿದ್ದಾರೆ ಇದರ ಬಗ್ಗೆ ಮೇಲಾಧಿಕಾರಿಗಳು ಕ್ರಮಕ್ಕಾಗಿ ಸೂಚಿಸಿದ್ದರು ತಾಪಂ ಅಧಿಕಾರಿಗಳು ಎಂಜಲು ಆಸೆಗಾಗಿ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಸಿದ್ದಾರೆ. ನಾಗರಾಜ ಹಿಂದಿನ ಮನೆ ದೂರುದಾರ ಬಾಗಲವಾಡ