ಬಾಗಲವಾಡ ಗ್ರಾ.ಪಂ.ಗೆ ‘ಗಾಂಧಿ ಗ್ರಾಮ ಪುರಸ್ಕಾರ’

ಸಿರವಾರ.ಸೆ.೨೮- ರಾಜ್ಯ ಸರಕಾರದಿಂದ ೨೦೨೨-೨೩ನೇ ಸಾಲಿನ ’ಗಾಂಧಿ ಗ್ರಾಮ ಪುರಸ್ಕಾರ’ ಪ್ರಶಸ್ತಿ ಪ್ರಕಟಿಸಿದ್ದು, ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿಗೆ ಸಿರವಾರ ತಾಲೂಕಿನ ಬಾಗಲವಾಡ ಗ್ರಾಮ ಪಂಚಾಯಿತಿ ಆಯ್ಕೆಯಾಗಿದೆ.
“ರಾಜ್ಯ ಮಟ್ಟದ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾದ ಗ್ರಾಮ ಪಂಚಾಯತಿಗಳಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಅ೦೨ ರಂದು ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕರು, ಉಪಾಧ್ಯಕ್ಷರು ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿ ಪ್ರಶಸ್ತಿ ಸ್ವೀಕರಿಸಲು ರಾಜ್ಯ ಸರಕಾರ ಕೋರಿದೆ.
ಈ ಸಂದರ್ಭದಲ್ಲಿ ಬಾಗಲವಾಡ ಗ್ರಾ.ಪಂ. ಗಾಂಧೀ ಗ್ರಾಮ ಪುರಸ್ಕಾರ ಪ್ರಶಸ್ತಿಗೆ ಭಾಜನವಾಗಿರುವುದರಿಂದ ಗ್ರಾಮಪಂಚಾಯಿತಿ ಅಧ್ಯಕ್ಷ ತಿಪ್ಪಣ್ಣ ವಕೀಲರು, ಉಪಾಧ್ಯಕ್ಷೆ ಪಾರ್ವೆತಮ್ಮ ಹಿರೇಬಾದರಲದಿನ್ನಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶರಣಬಸವ, ಗ್ರಾಮದ ಮುಖಂಡರಾದ ನಾಗಣ್ಣ ಸಾಹುಕಾರ, ಗುರ್ರಪ್ಪ ಸಾಹುಕಾರ, ಶಿವರಾಜಪ್ಪ ಸಾಹುಕಾರ, ಬಿ.ಕೆ.ಅಮರೇಶಪ್ಪ ವಕೀಲರು, ಶಿವಶಂಕರಗೌಡ, ಅಮರೇಶ ನಾಯಕ, ಬಸವರಾಜ ಕಾವಲಿ, ಯಮನಪ್ಪ ಯಾದವ ಸೇರಿ ಊರಿನ ಮುಖಂಡರು, ಸಂಘ -ಸಂಸ್ಥೆಗಳು ಹರ್ಷ ವ್ಯಕ್ತಪಡಿಸಿವೆ.