ಬಾಗಲಕೋಟೆ : ಮುಸ್ಲಿಂ ಪ್ರತಿನಿಧಿಗಳ ಸಮ್ಮೇಳನ – ಜಿಲ್ಲಾ ಮುಸ್ಲಿಂ ನಾಯಕರು ಭಾಗಿ


ರಾಯಚೂರು.ಜು.೧೭- ಮುಸ್ಲಿಂ ಸಮುದಾಯದ ಪ್ರತಿನಿಧಿಗಳ ಸಮ್ಮೇಳನ ನಿನ್ನೆ ಬಾಗಲಕೋಟೆಯಲ್ಲಿ ನಡೆಯಿತು.
ಉದ್ದೇಶಿತ ಸಮ್ಮೇಳನದಲ್ಲಿ ಅನೇಕ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಮುಸ್ಲಿಂ ಸಮುದಾಯಕ್ಕೆ ಎಲ್ಲಾ ಪಕ್ಷಗಳಲ್ಲಿ ಪ್ರಾತಿನಿತ್ಯ ದೊರೆಯಬೇಕು ಮತ್ತು ಮುಸ್ಲಿಂ ಸಮುದಾಯ ಒಗ್ಗಟ್ಟಿನೊಂದಿಗೆ ಮುಂಬರುವ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎನ್ನುವ ವಿಷಯದ ಬಗ್ಗೆ ಈ ಸಮ್ಮೇಳನದಲ್ಲಿ ಚರ್ಚೆ ನಡೆಯಿತು. ಈ ಸಮ್ಮೇಳನದಲ್ಲಿ ಜಿಲ್ಲೆಯಿಂದ ಪ್ರಮುಖ ಮುಸ್ಲಿಂ ಮುಖಂಡರು ಪಾಲ್ಗೊಂಡಿದ್ದರು. ಬಷೀರುದ್ದೀನ್, ಮುಜೀಬುದ್ದೀನ್, ಅಬ್ದುಲ್ ಕರೀಂ, ಸಾಜೀದ್ ಸಮೀರ್, ಅಸ್ಲಾಂ ಪಾಷಾ, ಮಹ್ಮದ್ ಶಾಲಂ, ರಫೀ, ಅಮ್ಜದ್ ಸೇಠ್ ಹಟ್ಟಿ, ಮಹ್ಮದ್ ಉಸ್ಮಾನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.