ಬಾಗಲಕೋಟೆ ಪೋರಿ ಆಲ್ಬಂ ಹಾಡು ಬಿಡುಗಡೆ

ಬಾಗಲಕೋಟೆ,ನ.9 : ನಗರದ ಪ್ರಖ್ಯಾತ ನಟರಾಜ್ ನೃತ್ಯ ಶಾಲೆಯಲ್ಲಿ ಬಾಗಲಕೋಟೆ ಪೋರಿ ಆಲ್ಬಂ ಹಾಡು ಬಿಡುಗಡೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಬಿವಿವಿ ಸಂಘದ ಬಸವೇಶ್ವರ ಕಲಾ ಕಾಲೇಜಿನ ಸಂಗೀತ ವಿಭಾಗದ ಪ್ರೋ.ರೇವಣ್ಣ ಬೆಣ್ಣೂರ ಅವರು, ಬೆಂಗಳೂರು ಎಲ್ಲರನ್ನೂ ಸೆಳೆಯುವ ಸಿಟಿಯಾಗಿದೆ. ಆದರೆ, ಈಗ ಉತ್ತರ ಕರ್ನಾಟಕದವರು ಬೆಂಗಳುರನ್ನೆ ತಿರುಗ ಉತ್ತರ ಕರ್ನಾಟಕದತ್ತ ನೋಡುವ ಹಾಗೆ ಮಾಡುತ್ತಿದ್ದಾರೆ. ನಮ್ಮ ತಾಲೂಕಿನ ಯುವಕರು ತಾವೆ ಹಾಡನ್ನು ರಚಿಸಿ ಆಲ್ಬಂ ಹಾಡು ಮಾಡು ಮಾಡಿ ತಮ್ಮ ಪ್ರತಿಭೆಯನ್ನು ತೋರಿಸುವ ಮೂಲಕ ಜನರ ಗಮನ ಸೆಳೆಯುತ್ತಿದ್ದಾರೆ. ಹೀಗೆ ಅವರು ಮುನ್ನಡೆಯುವ ಮೂಲಕ ಬಾಗಲಕೋಟೆ ಜಿಲ್ಲೆ ಇನ್ನಷ್ಟು ರಾಜ್ಯಕ್ಕೆ ಪರಿಚಯಿಸಲಿ ಎಂದು ಹೇಳಿದರು.
ಪಾಲಕರು ತಮ್ಮ ಮಕ್ಕಳನ್ನು ವಿದ್ಯೆಗೆ ಅಷ್ಟೇ ಸೀಮಿತ ಮಾಡದೆ, ಮಕ್ಕಳ ಮನಸ್ಸು ಅರಿತು ಅವರಿಗೆ ಯಾವುದರಲ್ಲಿ ಆಸಕ್ತಿಯಿದೆಯೋ ಅದರಲ್ಲಿ ಅವರಿಗೆ ಪ್ರೋತ್ಸಾಹಿಸುವಲ್ಲಿ ಪಾಲಕರು ಮಂದಾಗಬೇಕು. ಆಗಲೇ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರಲಾಗುತ್ತದೆ. ಮಕ್ಕಳಿಗೆ ಅವರ ಮನೊಭಾವನ್ನು ವ್ಯಕ್ತಪಡಿಸಲು ಪಾಲಕರು ಅನುವುಮಾಡಿಕೊಡಬೇಕು ಎಂದರು.
ವಕೀಲರಾದ ಮಳಿಯಮ್ಮ ಕೆಂಚೆನ್ನವರ ಮಾತನಾಡಿ, ಪ್ರತಿಯೊಬ್ಬ ಮಗುವಿನಲ್ಲಿಯೂ ಬೇರೆ ಬೇರೆ ರೀತಿಯ ಪ್ರತಿಭೆಗಳು ಅಡಗಿರುತ್ತವೆ. ಆದರೆ, ಮಕ್ಕಳು ಅವುಗಳನ್ನು ಹೊರಹಾಕಲು ಪಾಲಕರು ಬಿಡದೇ, ಶಿಕ್ಷಣಕ್ಕೆ ಮಾತ್ರ ಸೀಮಿತ ಮಾಡಿದ್ದಾರೆ. ಶಿಕ್ಷಣದ ಜೊತೆಗೆ ಮಕ್ಕಳಿಗೆ ಸಂಗೀತ, ನೃತ್ಯ, ಕ್ರೀಡೆ ಹೀಗೆ ಎಲ್ಲವನ್ನೂ ಕಲಿಸುವ ಮೂಲಕ ಪಾಲಕರು ಮಕ್ಕಳನ್ನು ಪ್ರೋತ್ಸಹಿಸಬೇಕು. ಆಗಲೇ ಮಕ್ಕಳು ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಮುತ್ತು ಮುಷ್ಠಿಗೆರಿಮಠ ಅವರು ತಮ್ಮ ಹೊಸ ಪ್ರಯತ್ನದೊಂದಿಗೆ ಈಗಾಗಲೇ ಮೂರು ಆಲ್ಬಂ ಹಾಡು ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ. ಇನ್ನೂ ಹೆಚ್ಚಿನ ಹಾಡುಗಳು ಬಿಡುಗಡೆ ಮಾಡಲಿ ಎಂದರು.
ಮುತ್ತು ಮುಷ್ಠಿಗೇರಿಮಠ ಅವರು ಮಾತನಾಡಿ, ಈಗಾಲೇ ಮಿಡಲ್‍ಕ್ಲಾಸ್ ಹುಡುಗರ ಹಾಡು, ನಮ್ಮ ಬಾಗಲಕೋಟೆ ಆಲ್ಬಂ ಹಾಡುಗಳನ್ನು ಬಿಡುಗಡೆ ಮಾಡಲಾಗಿದ್ದು, ಎಲ್ಲ ಹಾಡುಗಳಿಗೂ ಜನರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಹಾಗೆಯೇ ಬಾಗಲಕೋಟೆ ಪೋರಿ ಹಾಡು ಜನರು ವೀಕ್ಷಿಸುವ ಮೂಲಕ ಹರಸಿ ಹಾರೈಸಿ ನಮ್ಮನ್ನು ಪ್ರೋತ್ಸಾಹಿಸಬೇಕು ಎಂದರು.
ಬಾಗಲಕೋಟೆ ಪೋರಿ ಹಾಡು ಮುತ್ತು ಮುಷ್ಠಿಗಿಮಠ ರಚಿಸಿದ್ದು, ಅಶ್ವಿನಿ ಭರಟ್ಟಿ, ಬಾಲ ಕಲಾವಿದರಾದ ಆಯುಷ್ ಇಂಗಳಗಿ, ಮನೋಜ ಕೋಟಿಕಲ್, ರಾಜೇಶ್ವರಿ ನಾಗರಾಳ, ವೈಭವ ಚವ್ಹಾಣ್ ಈ ಆಲ್ಬಂ ಹಾಡಿನಲ್ಲಿ ನಟಿಸಿದ್ದಾರೆ. ಪುನಿತ ಸಾಯಿನಾಥ ಅವರು ವಿಡಿಯೋ ಚಿತ್ರಿಕರಣ ಹಾಗೂ ಸಂಕಲನ ಮಾಡಿದ್ದಾರೆ ಎಂದು ತಿಳಿಸಿದರು.
ನಟರಾಜ ಇಂಗಳಗಿ, ಅಶ್ವಿನ ಎನ್.ಎಸ್, ಜಯಶ್ರೀ ಲಾಗಲೋಟಿ, ಡಿ.ಎಚ್. ಪಾಟೀಲ, ಅಶ್ವಿನಿ ಭರಡ್ಡಿ, ಪ್ರಕಾಶ ಎಚ್. ಮುಂತಾದವರು ಉಪಸ್ಥಿತರಿದ್ದರು. ಪ್ರೊ.ಶ್ರಿಕಾಂತ ಸರಡಗಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.