ಬಾಕ್ಸ್ ಆಫೀಸ್ ಸದ್ದು ಶಾಕುಂತಲ ವಿಫಲ

ಹೈದರಾಬಾದ್, ಏ.೧೭- ದಕ್ಷಿಣ ಭಾರತದ ನಟಿ ಸಮಂತ ರೂತ್ ಪ್ರಭು ಅಭಿನಯದ “ಶಾಕುಂತಲಂ” ಚಿತ್ರ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಸದ್ದು ಮಾಡಲು ವಿಫಲವಾಗಿದೆ.
ಚಿತ್ರ ವಿಮರ್ಶಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆದಿದೆ. ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರದೇ ಇರುವುದು ಚಿತ್ರದ ಹಣ ಗಳಿಕೆಯ ಮೇಲೆ ಹೊಡೆತ ಬಿದ್ದಿದೆ.
ಸಮಂತಾ ರುತ್ ಪ್ರಭು ಅವರ ಬಹು ನಿರೀಕ್ಷಿತ ಚಿತ್ರ “ಶಾಕುಂತಲಂ” ಏಪ್ರಿಲ್ ೧೪ ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.ಚಿತ್ರದ ಅದ್ಭುತ ದೃಶ್ಯಗಳು ಮತ್ತು ಸಮಂತಾ ಅವರ ಶಾಕುಂತಲಂ ನೋಟವನ್ನು ಎಲ್ಲರೂ ಇಷ್ಟಪಟ್ಟಿದ್ದಾರೆ. ಸಮಂತಾ ಅವರ ಚಿತ್ರ ಋಷಿಯ ಮಗಳು ಶಕುಂತಲೆಯ ಮಹಾಕಾವ್ಯದ ಪ್ರೇಮಕಥೆ ಸುತ್ತ ಚಿತ್ರ ಸಾಗಿದೆ.
ಶಾಕುಂತಲೆ, ರಾಜ ದುಶ್ಯಂತನನ್ನು ಪ್ರೀತಿಸಿಸುವ ಕಥನ ಇದಾಗಿದೆ. ಪ್ರಸಿದ್ಧ ಸಂಸ್ಕೃತ ನಾಟಕ ಅಭಿಜ್ಞಾನದದ ಕಥೆ ಆಧರಿಸಿದ ಚಿತ್ರ ಪ್ರೇಕ್ಷಕರ ಮನ ಗೆಲ್ಲುವಲ್ಲಿ ವಿಫಲವಾಗಿದೆ.
ಶಾಕುಂತಲಂ ಚಿತ್ರ ತೆಲುಗು, ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ಹೆಚ್ಚಿನ ಸಂಖ್ಯೆಯ ಪರದೆಗಳಲ್ಲಿ ಬಿಡುಗಡೆಯಾಗಿದೆ.ಆದರೂ ಚಿತ್ರ ತನ್ನ ಮೊದಲ ದಿನದಲ್ಲಿ ಹೆಚ್ಚಿನ ಜನರನ್ನು ಸೆಳೆಯಲು ವಿಫಲವಾಗಿದೆ.
ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲಿ ಚಿತ್ರ ೫ ಕೋಟಿ ರೂಪಾಯಿ ಮಾತ್ರ ಗಳಿಸಿದೆ. ೨ನೇ ದಿನದಂದು ಕಳಪೆ ಪ್ರದರ್ಶನವನ್ನು ಕಂಡಿತು ಹಣ ಸಂಗ್ರಹಣೆಯಲ್ಲಿ ಹಿಂದೆ ಬಿದ್ದಿದೆ.
ಅಂದಾಜಿನ ಪ್ರಕಾರ, ಶಾಕುಂತಲಂ ೨ ನೇ ದಿನದಂದು ಕೇವಲ ೧.೫ ಕೋಟಿ ಗಳಿಸಿದೆ. ೩ ನೇ ದಿನದಂದು, ಶಾಕುಂತಂ ೨ ಕೋಟಿ ರೂಪಾಯಿ ಗಳಿಸುವಲ್ಲಿ ಯಶಸ್ವಿಯಾಗಿದೆ,
ಶಾಕುಂತಲಂ ಒಂದು ಪೌರಾಣಿಕ ನಾಟಕವಾಗಿದ್ದು ಗುಣಶೇಖರ್ ಬರೆದು ನಿರ್ದೇಶಿಸಿದ್ದಾರೆ. ನೀಲಿಮಾ ಗುಣ ನಿರ್ಮಿಸಿದರೆ, ಶ್ರೀ ವೆಂಕಟೇಶ್ವರ ಕಾಳಿದಾಸನ ಶ್ರೇಷ್ಠ ನಾಟಕ ಅಭಿಜ್ಞಾನ ದಿ ರೂಲರ್ ಆಫ್ ದಿ ಪುರು ಡೈನಾಸ್ಟಿ, ಮೋಹನ್ ಅದಿತಿ ಬಾಲನ್ ಮತ್ತು ಅನನ್ಯ ನಾಗಲ್ಲ ಅವರು ಪೋಷಕ ಭಾಗಗಳಲ್ಲಿದ್ದಾರೆ.