ಬಾಕಿ ವೇತನ ಬಿಡುಗಡೆಗೆ ಗಡುವು

ಕಲಬುರಗಿ,ನ.14-ಪಿ.ಡಿ.ಎ. ಇಂಜಿನಿಯರಿಂಗ್ ಕಾಲೇಜ ಶಿಕ್ಷಕರ ಸಂಘ ಮತ್ತು ಶಿಕ್ಷಕೇತರ ಸಂಘದಿಂದ ಅನುದಾನಿತ ವಿಭಾಗಗಳ ಪ್ರಾಧ್ಯಾಪಕ ಮತ್ತು ಶಿಕ್ಷಕೇತರ ಸಿಬ್ಬಂದಿಯ ವಿವಿಧ ಬೇಡಿಕೆಗಳಿಗಾಗಿ ಜಿಲ್ಲಾಧಿಕಾರಿಯ ಮೂಲಕ ಸರಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು.
7 ನೇ ವೇತನ ಶ್ರೇಣಿಯ ಮೂರು ತಿಂಗಳ (ಅಗಸ್ಟ್, ಸೆಪ್ಟೆಂಬರ್, ಅಕ್ಟೋಬರ್) ಬಾಕಿ ಇರುವ ವೇತನವನ್ನು ಬಿಡುಗಡೆ ಮಾಡಬೇಕು,6 ನೇ ವೇತನ ಶ್ರೇಣಿಯ 33% ಬಾಕಿರುವ ಅರಿಯರಸನ್ನು ಬಿಡುಗಡೆ ಮಾಡಬೇಕು, ಪ್ರತಿ ತಿಂಗಳ ಮೊದಲನೇ ವಾರದಲ್ಲಿ ಸಂಬಳವನ್ನು ಬಿಡುಗಡೆ ಮಾಡಬೇಕು. ಒಂದು ವಾರದಲ್ಲಿ ಈ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಉಪವಾಸ ಸತ್ಯಾಗ್ರಹದಂತ ಉಗ್ರ ಹೋರಾಟವನ್ನು ಕೈಗೊಳ್ಳಲಾಗುವುದೆಂದು ಪಿ.ಡಿ.ಎ. ಶಿಕ್ಷಕರ ಸಂಘದ ಅಧ್ಯಕ್ಷರಾದ ಪ್ರೊ. ಗಣೇಶ ಪಾಟೀಲ ತಿಳಿಸಿದರು. ಇದೇ ಸಂದರ್ಭದಲ್ಲಿ ಸಂಘದ ಸದಸ್ಯರಾದ ಡಾ. ಬಾಬುರಾವ ಶೇರಿಕರ, ಮಾತನಾಡುತ್ತಾ ಕೊರೊನಾದಂತ ಸಂಕಟ ಸಂದರ್ಭದಲ್ಲಿಯೂ ಕೂಡಾ ಆನ್‍ಲೈನ್ ಪಾಠಗಳನ್ನು ಮಾಡುತ್ತಾ ಪ್ರತ್ಯಕ್ಷ ಪರೀಕ್ಷೆಗಳನ್ನು ಕೂಡ ಮಾಡಿ ಪ್ರಾಧ್ಯಾಪಕರೆಲ್ಲರು ಸುಮಾರು 3 ತಿಂಗಳಿಂದ ವೇತನ ವಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಗಣೇಶ ಚತುರ್ಥಿ, ದಸರಾ ಹಾಗೂ ಈಗ ಬರುವ ದೀಪಾವಳಿಗೂ ಕೂಡಾ ವೇತನವಿಲ್ಲದೆ ಪ್ರಾಧ್ಯಾಪಕರು ಮತ್ತು ಶಿಕ್ಷಕೇತರ ಸಿಬ್ಬಂದಿಯೂ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಸರಕಾರ ತುರ್ತಾಗಿ ವೇತನವನ್ನು ಬಿಡುಗಡೆಗೊಳಿಸಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದೆಂದು ಹೇಳಿದರು. ಡಾ. ಎಮ್.ಬಿ. ಮಳಖೇಡ ರವರು ಮತ್ತು ಬಸವನಾಂದ ಮೋಟಗಿ ರವರು ಮಾತನಾಡುತ್ತಾ ಕರ್ನಾಟಕದಲ್ಲಿ ಎಲ್ಲಾ ವಿಶ್ವವಿದ್ಯಾಲಯಗಳು ಪದವಿ ವಿದ್ಯಾಲಯಗಳ ಪ್ರಾಧ್ಯಾಪಕರಿಗೆ ಎಲ್ಲರಿಗೂ ವೇತನ ಕೊಡಲಾಗುತ್ತಿದೆ. ಕೇವಲ ರಾಜ್ಯದ ಹತ್ತು ಅನುದಾನಿತ ಇಂಜನಿಯರಿಂಗ್ ಕಾಲೇಜುಗಳ ಪ್ರಾಧ್ಯಾಪಕರು ಮತ್ತು ಶಿಕ್ಷಕೇತರ ಸಿಬ್ಬಂದಿಗೆ ಮಾತ್ರ ವೇತನ ಬಿಡುಗಡೆ ಮಾಡಿಲ್ಲ ಆದ್ದರಿಂದ ಈ ಮಲತಾಯಿ ಧೋರಣೆ ಬಿಟ್ಟು ವೇತನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ಅಧ್ಯಕ್ಷರಾದ ಪ್ರೊ. ಗಣೇಶ ಪಾಟೀಲ, ಕಾರ್ಯದರ್ಶಿಡಾ. ಪ್ರಶಾಂತ ಕಾಂಬಳೆ, ಖಜಾಂಚಿ ಪ್ರೊ. ರಾಜೇಂದ್ರ ಚಿಂಚೋಳಿಕರ್, ಸದಸ್ಯರಾದ ಡಾ. ಹರಿಶ್ಚಂದ್ರ ಅಷ್ಟಗಿ, ಡಾ. ನಾಗಭೂಷಣ ಪಾಟೀಲ, ಡಾ. ಎಸ್.ಎ. ಅಡಕಿ, ಡಾ. ಎಮ್.ಬಿ. ಮಳಖೇಡ, ಪ್ರೊ. ಪ್ರಕಾಶ ಪಾಟೀಲ, ಡಾ. ಶರಣಗೌಡ ಪಾಟೀಲ, ಡಾ. ಸಂಗಮೇಶ ಸಕ್ರೀ, ಪ್ರೊ. ಬಸವಾನಂದ ಮೋಟಗಿ, ಡಾ. ಬಾಬುರಾವ ಶೇರಿಕರ, ಪ್ರೊ. ಚಂದ್ರಶೇಖ ಸಿರೆಗಾರ, ಸಂತೋಷ ಹಿರೇಮಠ, ಅರುಣ ಪೋಸಂಗಿರಿ, ಉಪಸ್ಥಿತರಿದ್ದರು.