ಬಾಕಿ ವೇತನ ಪಾವತಿಗೆ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ

ರಾಯಚೂರು, ಫೆ.೨೧-ವಸತಿ ನಿಲಯ ಕಾರ್ಮಿಕರ ಬಾಕಿ ವೇತನ ಕೂಡಲೇ ಪಾವತಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಜಿಲ್ಲಾ ಸಮತಿ ಪದಾಧಿಕಾರಿಗಳು ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಅಹೋರಾತ್ರಿ ಅನಿರ್ಧಿಷ್ಟ ಪ್ರತಿಭಟನಾ ಧರಣಿ ಹಮ್ಮಿಕೊಂಡಿದ್ದರು.
ಎಐಯುಟಿಯುಸಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಸರಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯ ಕಾರ್ಮಿಕರಿಗೆ ಕಳೆದ ೭ ತಿಂಗಳಿನಿಂದ ವೇತನ ಮಂಜೂರು ಮಾಡದೇ ನಿರ್ಲಕ್ಷ ವಹಿಸಿರುವ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಮಟ್ಟದ ನೂರಾರು ಕಾರ್ಮಿಕರು ಪ್ರತಿಭಟನೆ ನಂತರ ಕೇವಲ ಒಂದೊಂದು ತಿಂಗಳ ವೇತನ ಪಾವತಿಸಿದೆ ನಂತರ ಯಥಾಸ್ಥಿತಿ ಮುಂದುವರೆಯುತ್ತಾ ಬಂದಿದೆ.ವೇತನ ಬಾಕಿ ಸಮಸ್ಯೆ ಬಗೆ ಹರಿಯುತ್ತಲೇ ಇಲ್ಲ, ಇದೀಗ ಮುಷ್ಕರಕ್ಕೆ ಕಳೆ ನೀಡಿದರೂ ಅಧಿಕಾರಿಗಳು ಸೂಕ್ತ ಸ್ಪಂಧನೆ ನೀಡದಿರುವುದು ಅತ್ಯಂತ ವಿಷಾದಕರ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮಾಜ ಕಲ್ಯಾಣ ವಸತಿ ನಿಲಯ ಕಾರ್ಮಿಕರಿಗೆ ೭ ತಿಂಗಳು, ಹಿಂದುಳಿದ ಹಾಗೂ ಪರಿಶಿಷ್ಠ ವರ್ಗಗಳ ವಸತಿ ನಿಲಯ ಕಾರ್ಮಿಕರಿಗೆ ೪ ತಿಂಗಳು ಬಾಕಿಯಿರುವ ವೇತನವನ್ನು ಅತೀ ಶೀಘ್ರವೇ ಪಾವತಿಸಬೇಕು. ಕನಿಷ್ಠ ವೇತನ ಪಾವತಿಸುವ ಕ್ರಮ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು.
ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಗುತ್ತಿಗೆ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು. ಎಲ್ಲಾ ಕಾರ್ಮಿಕರಿಗೆ ಐಡಿ, ನೇಮಕಾತಿ ಪತ್ರ ವೇತನ ಚೀಟಿ, ಹಾಜರಾತಿ ನಿರ್ವಹಣೆ ಕಡ್ಡಾಯವಾಗಿ ಪಾಲಿಸಬೇಕು. ಕಾರ್ಮಿಕರಿಗೆ ಪಿಎಫ್, ಇಎಸ್‌ಐ ಮಾಹಿತಿ ಒದಗಿಸಬೇಕು. ಕನಿಷ್ಠ ವೇತನಕ್ಕೆ ತಕ್ಕಂತೆ ಪಿಎಫ್ ಕೊಡುಗೆ ಪಾವತಿಸಬೇಕು.
ಎಲ್ಲಾ ಕಾರ್ಮಿಕರಿಗೆ ಯೂನಿಪಾರ್ಮ, ಕನಿಷ್ಠ ವಾರದ ರಜೆ, ಸಾರ್ವಜನಿಕ ರಜೆರಾಷ್ಟ್ರೀಯ ಹಬ್ಬದ ದಿನದಂದು ಕೆಲಸ ಮಾಡಿದ್ದಕ್ಕೆ ಎರಡು ಪಟ್ಟು ವೇತನ ನೀಡಬೇಕು.
ದಿನಕ್ಕೆ ಎಂಟು ಗಂಟೆ ಮಾತ್ರ ಕೆಲಸ ಪಡೆಯಬೇಕು. ಹೆಚ್ಚುವರಿ ಕೆಲಸಕ್ಕೆ ಓಟಿ ನೀಡಬೇಕು.
ಈ ಸಂದರ್ಭದಲ್ಲಿ ಅಣ್ಣಪ್ಪ, ಗಾಯಿತ್ರಿ, ಹುಚ್ಚಣ್ಣ, ಅಂಬಿಕಾ, ಅಮರೇಶ, ಸುಲೋಚನಾ, ನಾಗಮ್ಮ, ಮಹೇಶ್ವರಿ ಸೇರಿದಂತೆ ಉಪಸ್ಥಿತರಿದ್ದರು.