ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಸಿಎಂ ಸೂಚನೆ

ಕೋಲಾರ,ಡಿ,೨೮- ಜಿಲ್ಲಾಧಿಕಾರಿಗಳ ನ್ಯಾಯಾಲಯ, ಉಪವಿಭಾಗದಿಕಾರಿಗಳ ನ್ಯಾಯಾಲಯ ಹಾಗೂ ತಹಸೀಲ್ದಾರ್ ನ್ಯಾಯಾಲಯಗಳಲ್ಲಿ ಬಾಕಿ ಇರುವಂತ ಸುಮಾರು ೩.೫ ಸಾವಿರಕ್ಕೂ ಹೆಚ್ಚು ವಿವಿಧ ಪ್ರಕರಣಗಳನ್ನು ೬ ತಿಂಗಳಗಳಿಗೂ ಹೆಚ್ಚು ಕಾಲದಿಂದ ಬಾಕಿ ಇರುವುದನ್ನು ಕೊಡಲೇ ಇತ್ಯರ್ಥ ಪಡಿಸಿ ವಿಲೇವಾರಿ ಮಾಡಬೇಕೆಂದು ಸೂಚಿಸಲಾಗಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು,
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಅಡಿಟೊರಿಯಂನಲ್ಲಿ ಆಯೋಜಿಸಿದ್ದ ಕೆ.ಡಿ.ಪಿ. ಸಭೆಯ ನಂತರ ಮಾದ್ಯಮದವರೊಂದಿಗೆ ಅವರು ಮಾತನಾಡಿ ಸಾಮಾನ್ಯವಾಗಿ ಖಾತೆಗಳು, ಸರ್ವೆ, ಪೋಡಿ, ಫವತಿವಾರು ಇತ್ಯಾದಿ ಖಾತೆಗಳು ಹಾಗೂ ಇತರೆ ಕೆಲಸಗಳನ್ನು ಮಾಡದೆ ಇರುವುದಕ್ಕೆ ಪ್ರಮುಖ ಕಾರಣ ಅಧಿಕಾರಿಗಳು ಸಾರ್ವಜನಿಕರ ಕೈಗೆ ಸಿಗದೆ ಇರುವುದೇ ಅಗಿದೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಸಾರ್ವಜನಿಕರಿಗೆ ನಿಗಧಿ ಪಡೆಸಿದ ದಿನಾಂಕದಲ್ಲಿ ಭೇಟಿಗೆ ಅವಕಾಶ ಮಾಡಿ ಕೊಡಬೇಕೆಂದು ಸೂಚಿಸಲಾಗಿದೆ ಎಂದು ಹೇಳಿದರು,
ಸರ್ಕಾರಿ ಭೂಮಿಗಳನ್ನು ಯಾರೇ ಒತ್ತುವರಿ ಮಾಡಿದ್ದರೂ ಮುಲಾಜಿಲ್ಲದೆ ತೆರವು ಮಾಡಲು ಸೂಚಿಸಲಾಗಿದೆ. ಸರ್ಕಾರಿ ಆಸ್ತಿ ಸ್ವತ್ತುಗಳನ್ನು ಗುರುತಿಸಿ ದಾಖಲಾತಿಯನ್ನು ಸಲ್ಲಿಸಬೇಕೆಂದು ಅಧಿಕಾರಿಗಳಿಗೆ ಅದೇಶಿಸಿದೆ. ಸಾರ್ವಜನಿಕರಿಗೆ ದಾರಿ, ಸ್ಮಶನ, ಉದ್ಯಾನಗಳು ಇತ್ಯಾದಿಗಳಿಗೆ ಸರ್ಕಾರದ ಜಾಗಗಳ ಅವಶ್ಯಕತೆ ಇದೆ ಎಂದರು.
ಈಗಾಗಲೇ ಶ್ರೀನಿವಾಸಪುರ ಸೇರಿದಂತೆ ವಿವಿಧಡೆ ಒತ್ತುವರಿಗಳನ್ನು ತೆರವು ಮಾಡುವ ಕಾರ್ಯಕ್ರಮಗಳು ಮುಕ್ತಾಯ ಹಂತದಲ್ಲಿದೆ ಸರ್ಕಾರಿ ಜಾಗ ಎಂತ ಪ್ರಭಾವಿಗಳು ಒತ್ತುವರಿ ಮಾಡಿದ್ದರೂ ತೆರವು ಗೊಳಿಸಿ ಎಂದು ಅದೇಶಿಸಲಾಗಿದೆ. ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಎರಡು ಇಲಾಖೆಗಳು ಜಂಟಿ ಸರ್ವೆ ಮಾಡಿಸಿ ಗುರುತಿಸುವಂತಾಗ ಬೇಕು, ಕಂದಾಯ ಮತ್ತು ಅರಣ್ಯ ಇಲಾಖೆಗಳು ಇವು ಬೇರೆ ಬೇರೆಯಾಗಿದ್ದು ಇವುಗಳಿಗೆ ಪ್ರತ್ಯೇಕ ಕಾನೂನುಗಳಿದೆ ಅವುಗಳನ್ನು ಅಧಿಕಾರಿಗಳು ಪಾಲಿಸುತ್ತಾರೆ ಎಂದು ತಿಳಿಸಿದರು,
ರಾಜ್ಯದ ಯಾವೂದೇ ಮೊರಾರ್ಜಿ ದೇಸಾಯಿ ಶಾಲೆಗಳಲ್ಲಿ ಮಲ ಸ್ವಚ್ಛತೆಯಂತ ಕಾರ್ಯಗಳು ಮಕ್ಕಳಿಂದ ಆಗದಂತೆ ಮುಂಜಾಗೃತ ಕ್ರಮಗಳು ಕೈಗೊಳ್ಳ ಬೇಕೆಂದು ಕಟ್ಟು ನಿಟ್ಟಿನ ಸೊಚನೆ ನೀಡಲಾಗಿದೆ. ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಇಂದಿನ ಸಭೆಗೆ ಗೈರು ಹಾಜರಾಗಿದ್ದಾರೆ. ಈ ಕುರಿತು ಪರಿಶೀಲಿಸಿ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು,
ರಾಜ್ಯದ ೩೭ ಹೋಬಳಿಗಳಲ್ಲಿ ಮೊರಾರ್ಜಿದೇಸಾಯಿ ವಸತಿ ಶಾಲೆಗಳಿದೆ ಈ ಶಾಲೆಗಳಲ್ಲಿ ಏನೇನು ಕೊರತೆ ಎಂಬುವುದನ್ನು ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಯಾವೂದೇ ಹಣದ ಕೊರತೆಗಳು ಇಲ್ಲ. ನಾನು ಹಣಕಾಸು ಸಚಿವನಾಗಿದ್ದೇನೆ ಎಂದು ಹೇಳಿದರು,
ಪ್ರಶ್ನೆಯೊಂದಕ್ಕೆ ಕೆ.ಸಿ.ವ್ಯಾಲಿ ಮೂರನೇ ಹಂತದ ಶುದ್ದೀಕರಣ ಸರ್ಕಾರದ ಮುಂದೆ ಇಲ್ಲ. ಮೂರನೇ ಹಂತದ ಶುದ್ದೀಕರಣ ಮಾಡಿದಲ್ಲಿ ಕುಡಿಯಲು ಸಹ ಬಳಿಸ ಬಹುದಾಗಿದೆ.ಈ ನೀರಿನ್ನು ಅಂತರ್ಜಲ ಅಭಿವೃದ್ದಿಗಾಗಿ ಮಾಡಿದ ಯೋಜನೆಯಾಗಿದ್ದು ಈ ಹಿಂದೆ ೧೫೦೦ ಅಡಿಗೆ ನೀರು ಸಿಗುವಂತೆ ಅಗಿತ್ತು ಈಗಾ ಕೆ.ಸಿ. ವ್ಯಾಲಿ ನೀರನ್ನು ಕೆರೆಗಳಿಗೆ ತುಂಬಿಸಿದ್ದರಿಂದ ೪೦೦- ೫೦೦ ಅಡಿಗಳಿಗೆ ನೀರು ಸಿಗುವಂತಾಗಿರುವುದು ನಿಮಗೆ ಕಂಡ ವಿಷಯವಾಗಿದೆ ಎಂದು ತಿಳಿಸಿದರು.
ಯರ್‌ಗೋಳ್ ಯೋಜನೆ ಕುಡಿಯುವ ನೀರಿಗೆ ರೂಪಿಸಿದ್ದು ಉದ್ಘಾಟನೆಗೆ ಬಂದಾಗ ಸಮಯದ ಅಭಾವ ಅಗಿರುವುದರಿಂದ ಕೆ.ಡಿ.ಪಿ. ಸಭೆ ನಡೆಸಲಾಗಲಿಲ್ಲ. ಈಗಲು ಸಮಯದ ಅಭಾವದಿಂದ ಪ್ರಮುಖ ಇಲಾಖೆಗಳ ಪರಿಶೀಲನೆ ನಡೆಸಲಾಯಿತು. ನಮ್ಮ ಸರ್ಕಾರದಲ್ಲಿ ಪಾರದರ್ಶಕ ಆಡಳಿತ ಇದೆ. ಎಲ್ಲಾ ಸಭೆಗಳನ್ನು ಪಾರದರ್ಶಕವಾಗಿ ಮಾಡಲು ಸಾಧ್ಯವಿಲ್ಲ. ಕೆ.ಡಿ.ಪಿ. ಸಭೆಯನ್ನು ನಾನು ಪಾರದರ್ಶಕವಾಗಿ ಮಾಡಿಲ್ಲ.ಎಂದರು
ಕೋಲಾರದ ೬ ತಾಲ್ಲೂಕುಗಳಲ್ಲೂ ಬರಗಾಲ ಘೋಷಣೆಯಾಗಿದೆ. ಅದರೆ ಎಲ್ಲೂ ಸಹ ಟ್ಯಾಂಕ್‌ನಿಂದ ನೀರು ಪೂರೈಕೆ ಮಾಡುವಷ್ಟು ಹದಗೆಟ್ಟಿಲ್ಲ.ಯರ್‌ಗೋಳ್ ನೀರು ಕೊಟ್ಟ ಮೇಲೆ ಟ್ಯಾಂಕರ್‌ಗಳಿಂದ ನೀರು ಪೊರೈಕೆ ಮಾಡುವುದನ್ನು ಎಲ್ಲಾ ಕಡೆ ಸ್ಥಗಿತಗೊಳಿಸಿದದು ಕುಡಿಯುವ ನೀರಿನ ಸಮಸ್ಯೆ ಬರೆಹರಿಸಲಾಗಿದೆ ಎಂದು ಹೇಳಿದರು,
ಜಿಲ್ಲಾಧಿಕಾರಿಗಳಿ ಮತ್ತು ಸಿ.ಇ.ಓ. ಅವರಿಗೆ ಕುಡಿಯುವ ನೀರಿನ ತೊಂದರೆ ಅಗದಂತೆ ಆಡಳಿತ ನಿರ್ವಹಣೆ ಮಾಡಲು ಸೂಚಿಸಲಾಗಿದೆ. ಹೊಸ ಬೋರ್‌ವೆಲ್‌ಗಳ ಅವಶ್ಯಕತೆ ಇದ್ದು ಕೊರೆಸಲು ಸೂಚನೆ ನೀಡಲಾಗಿದೆ.ಅದರೆ ಕೇಂದ್ರದ ನಿಯಮಗಳು ಬೋರ್ ಕೊರೆಸಲು ಅಡ್ಡಿಯಾಗಿದೆ ಎಂದು ತಿಳಿಸಿದರು,
ಜಿಲ್ಲೆಯಲ್ಲಿ ಜಾನುಗಾರುಗಳಿಗೆ ಯಾವೂದೇ ರೀತಿ ಮೇವು ಸಮಸ್ಯೆ ಇಲ್ಲ. ೧೮ ತಿಂಗಳಿಗೆ ಅಗುವಷ್ಟು ಮೇವುಗಳು ದಾಸ್ತನು ಇದೆ ಈಗಾಗಲೇ ಮೇವು ಕಿಟ್‌ಗಳನ್ನು ವಿತರಿಸಲಾಗಿದೆ
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ಶಾಸಕ ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಎಂ.ಎಲ್. ಅನಿಲ್ ಕುಮಾರ್, ಶಾಸಕರಾದ ಸಮೃದ್ದಿ ಮಂಜುನಾಥ್, ವೆಂಕಟಶಿವಾರೆಡ್ಡಿ, ಜಿಲ್ಲಾಧಿಕಾರಿ ಅಕ್ರಂಪಾಷ, ಜಿ.ಪಂ.ಸಿ.ಇ.ಓ. ಪದ್ಮಬಸವಂತಪ್ಪ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ಉಪಸ್ಥಿತರಿದ್ದರು,