ಬಾಕಿ ಕಾಮಗಾರಿ ತ್ವರಿತ ಪೂರ್ಣಗೊಳಿಸಿ ಬಿಲ್‌ಗಳ ಚಿಂತೆ ಬಿಡಿ

ಕೋಲಾರ,ಆ,೧೨- ಕೋಲಾರ ವಿಧಾನ ಕ್ಷೇತ್ರದಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಡೆಯುತ್ತಿರುವ ಕಾಮಗಾರಿಗಳು ತ್ವರಿತವಾಗಿ ಪೂರ್ಣಗೊಳಿಸ ಬೇಕೆಂದು ಶಾಸಕ ಕೊತ್ತೂರು ಮಂಜುನಾಥ್ ಗುತ್ತಿಗೆದಾರರಿಗೆ ಸೂಚಿಸಿದರು,
ನಗರದ ಲೋಕೋಪಯೋಗಿ ಇಲಾಖೆಯಲ್ಲಿ ಆಯೋಜಿಸಿದ್ದ ಗುತ್ತಿಗೆದಾರರ ಸಭೆಯಲ್ಲಿ ಅವರು ಮಾತನಾಡುತ್ತಾ ಕಾಮಗಾರಿಗಳ ವಿಳಂಭ ಧೋರಣೆಯಿಂದಾಗಿ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ ಎಂದು ದೂರುಗಳು ಸಾಕಷ್ಟಿವೆ. ಕಾಮಗಾರಿಗಳು ಕೈಗೆತ್ತಿ ಕೊಂಡು ೨-೩ ವರ್ಷಗಳು ಕಳೆದರೂ ಸಹ ಇನ್ನು ಪೂರ್ಣಗೊಳಿಸದೆ ವಿಳಂಭ ಮಾಡುತ್ತಿರುವುದಕ್ಕೆ ಕಾರಣವೇನು ನಿಮಗೆ ಟೆಂಡರ್‌ನಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಅವಧಿಯನ್ನು ಗೊತ್ತು ಪಡೆಸಿಲ್ಲವೇ ಎಂದು ಪ್ರಶ್ನಿಸಿದರು,
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೃಷ್ಣರೆಡ್ಡಿ ಮಾತನಾಡಿ ಕಾಮಗಾರಿಗಳ ಬಿಲ್‌ಗಳು ಕಳದ ೩-೪ ವರ್ಷಗಳಿಂದ ನಿಗಧಿತ ಅವಧಿಯಲ್ಲಿ ಬಿಡುಗಡೆ ಮಾಡದ ಕಾರಣ ಕಾಮಗಾರಿಗಳು ಬಾಕಿ ಉಳಿದಿವೆ. ಬಿಲ್‌ಗಳು ಬಿಡುಗಡೆ ಮಾಡಿಸಿದಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸುವುದಾಗಿ ತಿಳಿಸಿದರು,
ಶಾಸಕರು ನಿಮ್ಮ ಬಿಲ್‌ಗಳು ಎಷ್ಟೇ ಬಾಕಿ ಇರಲಿ, ಅವುಗಳನ್ನು ನಮ್ಮ ಜವಾಬ್ದಾರಿಗೆ ಬಿಡಿ ಎಲ್ಲವನ್ನು ನವೆಂಬರ್ ಡಿಸೆಂಬರ್ ಒಳಗೆ ಪೂರ್ಣವಾಗಿ ಬಿಡುಗಡೆ ಮಾಡಿ ಕೊಡುವುದಾಗಿ ಭರವಸೆ ನೀಡಿದ ಅವರು ಈ ಸಂಬಂಧವಾಗಿ ನೇರವಾಗಿ ಮುಖ್ಯ ಮಂತ್ರಿಗಳನ್ನೆ ಭೇಟಿ ಮಾಡಿ ಲೋಕೋಪಯೋಗಿ ಸಚಿವರ ಮೂಲಕ ಬಿಲ್‌ಗಳನ್ನು ಬಿಡುಗಡೆ ಮಾಡಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಹೊರ ರಾಜ್ಯದವರೆಲ್ಲಾ ಟೆಂಡರ್‌ಗಳನ್ನು ಪಡೆದು ಕಾಮಗಾರಿ ಮಾಡುತ್ತಿದ್ದಾರೆ. ಸ್ಥಳೀಯರಿಗೆ ಸದ್ಯತೆ ನೀಡಿ ಸ್ಥಳೀಯರಾದರೆ ಅವರನ್ನು ಕರೆಸಿ ಕೊಂಡು ಕಾಮಗಾರಿಗಳಲ್ಲಿ ಏನಾದರೂ ಲೋಪದೋಷಗಳಿದ್ದರೆ ಸರಿಪಡೆಸ ಬಹುದು ಅವರಿಗೂ ಸಹ ಭಯ ಇರುತ್ತದೆ ಹೊರಗಿನವರಾದರೆ ಅವರನ್ನು ಎಲ್ಲಿ ಹುಡುಕಿಕೊಂಡು ಹೋಗೋಣಾ ಎಂದರು.
ಇದಕ್ಕೆ ಪ್ರತಿ ಕ್ರಿಯಿಸಿದ ಶಾಸಕ ಕೊತ್ತುರು ಮಂಜುನಾಥ್ ಮತ್ತು ವಿಧಾನ ಪರಿಷತ್ ಅನಿಲ್ ಕುಮಾರ್ ಅವರು ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತವಾದ ಲೋಕೋಪಯೋಗಿ ಕಟ್ಟಡ ಹಾಗೂ ಐ.ಬಿ. ಗೆಸ್ಟ್ ಹೌಸ್‌ಗಳು ಹ್ಯಾಲಿ ಪ್ಯಾಡ್ ನಿರ್ಮಾಣದ ಅವಶ್ಯಕತೆ ಇದೆ ಎಂದರು.
ಕೃಷ್ಣರೆಡ್ಡಿ ಅವರು ಸೋಲೂರು ಬಳಿಯ ೯ ಎಕರೆ ಸರ್ಕಾರಿ ಜಾಗವಿದ್ದು ಇದರಲ್ಲಿ ಹ್ಯಾಲಿ ಪ್ಯಾಡ್ ಹಾಗೂ ಐ.ಬಿ.ಗೆಸ್ಟೆ ಹೌಸ್‌ಗಳು ನಿರ್ಮಿಸ ಬಹುದಾಗಿದೆ ಎಂಬ ಸಲಹೆಯನ್ನು ಅಂಗಿಕರಿಸಿ ಸ್ಥಳ ಪರಶೀಲನೆ, ದಾಖಲಾತಿಗಳ ಪರಿಶೀಲಿಸಿ ಮುಂದಿನ ಕ್ರಮ ಜರುಗಿಸ ಬಹುದಾಗಿದೆ ಎಂಬ ಅಭಿಪ್ರಾಯ ವ್ಯಕ್ತ ಪಡೆಸಿದರು,
ಸೋಮವಾರ ಬೆಳಿಗ್ಗೆ ಎ.ಪಿ.ಎಂ.ಸಿ. ಬಳಿ ಮಾಲೂರು ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನಡೆಸಲು ಸಿದ್ದಪಡೆಸಿ ಎಂದ ಶಾಸಕರು ಅಂದು ಸಂಜೆ ಮುಖ್ಯ ಮಂತ್ರಿಗಳು ಕೋಲಾರ ಜಿಲ್ಲೆಯ ಎಲ್ಲಾ ಶಾಸಕರ ಸಭೆಯನ್ನು ಕರೆದಿದ್ದಾರೆ. ಸಭೆಯಲ್ಲಿ ಜಿಲ್ಲೆಯಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು. ಎಂದರು.
ಲೋಕೋಪಯೋಗಿ ಇಲಾಖೆಯ ಸಹಾಯ ಕಾರ್ಯನಿರ್ವಾಹಕ ಅಭಯಂತರರಾದ ಮಂಜುನಾಥ್, ಗುತ್ತಿಗೆದಾರರಾದ ಕೃಷ್ಣರೆಡ್ಡಿ, ಯಲವಾರ ಸೊಣ್ಣೆಗೌಡ, ಶ್ರೀರಾಮರೆಡ್ಡಿ, ಮಾರ್ಜೇನಹಳ್ಳಿ ಬಾಬು, ಮಣಿಘಟ್ಟ ಸೊಣ್ಣೆಗೌಡ, ನಾರಾಯಣಸ್ವಾಮಿ ಮುಂತಾದವರು ಇದ್ದರು,