ಬಾಕಿಯಿರುವ ನೀರಿನ ಕರವನ್ನು ಕಡ್ಡಾಯವಾಗಿಮೇ 31 ರೊಳಗಾಗಿ ಪಾವತಿಸಲು ಸೂಚನೆ

ಕಲಬುರಗಿ,ಮಾ.27:ನಗರಕ್ಕೆ ಸರಬರಾಜು ಮಾಡುತ್ತಿರುವ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಕಲಬುರಗಿ ನಗರದ ಸಾರ್ವಜನಿಕರು ಬಾಕಿ ಇರುವ ನೀರಿನ ಕರವನ್ನು “kalaburagiwatersupply.org”/ QR code ಹಾಗೂ ಗ್ರಾಹಕರ ಸೇವಾ ಕೇಂದ್ರಗಳಲ್ಲಿ 2023ರ ಮೇ 31 ರೊಳಗಾಗಿ ಕಡ್ಡಾಯವಾಗಿ ಪಾವತಿಸಬೇಕೆಂದು ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.

 ಒಂದು ವೇಳೆ ಮೇಲ್ಕಂಡ ನಿಗದಿತ (ದಿನಾಂಕ 31-05-2023ರೊಳಗಾಗಿ) ಅವಧಿಯೊಳಗಾಗಿ ಬಾಕಿಯಿರುವ ನಳಗಳ ನೀರಿನ ಕರ ಪಾವತಿಸದೇ ಇದ್ದಲ್ಲಿ ನೀರಿನ ಕರ ಮೊತ್ತಕ್ಕೆ ಶೇಕಡಾ    1.5 ರಷ್ಟು ಪ್ರತಿ ಮಾಹೆಯ ಬಡ್ಡಿಯನ್ನು ಹಾಕಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.