ಬಾಂಬ್ ನಿಷ್ಕ್ರಿಯದಳ,ಶ್ವಾನದಳದಿಂದ ಸ್ಥಳ ತಪಾಸಣೆ

ಕಲಬುರಗಿ,ಸೆ 15 : ರವಿವಾರದಂದು ಜರುಗುವ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಮತ್ತು ವಿವಿಧ ಗಣ್ಯರ ಆಗಮನದ ಹಿನ್ನೆಲೆಯಲ್ಲಿ ,ನಗರದ ಸರದಾರ ವಲ್ಲಭಭಾಯಿ ಪಟೇಲ್ ವೃತ್ತ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಮುಂಜಾಗ್ರತೆ ಕ್ರಮವಾಗಿ ಬಾಂಬ್ ನಿಷ್ಕ್ರಿಯದಳ ಮತ್ತು ಶ್ವಾನದಳದವರು ಸ್ಥಳ ತಪಾಸಣೆ ನಡೆಸಿದರು.
ನಗರದ ಕೇಂದ್ರ ಬಸ್ ನಿಲ್ದಾಣ ,ರೈಲ್ವೆ ನಿಲ್ದಾಣ,ಸೂಪರ್ ಮಾರುಕಟ್ಟೆ,ವಿವಿಧ ಮಾಲ್ ಗಳು,ಜಿಲ್ಲಾಧಿಕಾರಿ ಕಚೇರಿ,ಜಿಲ್ಲಾ ನ್ಯಾಯಾಲಯ ಮೊದಲಾದ ಸ್ಥಳಗಳಲ್ಲಿ ಸ್ಥಳ ತಪಾಸಣೆ ನಡೆಯಿತು. ಎಸಿಪಿ ಶರಣಪ್ಪ ಹಾಗೂ ಇನ್ಸ್‍ಪೆಕ್ಟರ್ ಮಹಾದೇವ ಪಾಟೀಲ್ ಅವರ ನೇತೃತ್ವದ ತಂಡದಲ್ಲಿ ಸಿದ್ದಣ್ಣ,ಗುಂಡು ಪೂಜಾರಿ,ಮಹಾಂತೇಶ,ಸಿದ್ದರಾಮೇಶ,ವಿಶ್ವರಾಧ್ಯ,ಸೈದಪ್ಪ ,ರಾಜಕುಮಾರ,ಶರಣಪ್ಪ ಅವರು ಪಾಲ್ಗೊಂಡರು.