ಬಾಂಬ್ ತಯಾರಿಸುವ ವೇಳೆ ಸ್ಫೋಟ: ಮಹಿಳೆ ಸೇರಿ 6 ಮಂದಿ ಸಾವು

ಛಾಪ್ರ, ಜು.24- (ಬಿಹಾರ) ಬಾಂಬ್ ತಯಾರಿಸುವ ವೇಳೆ ಅದು ಸ್ಪೋಟಗೊಂಡು ಓರ್ವ ಮಹಿಳೆ ಸೇರಿ ಆರು ಮಂದಿ ಸಾವನ್ನಪ್ಪಿರುವ ಘಟನೆ ಬಿಹಾರ ಛಾಪ್ರಾ ಜಿಲ್ಲೆಯಲ್ಲಿ ಸಂಭವಿಸಿದೆ.
ಅವಶೇಷಗಳ ಅಡಿಯಲ್ಲಿ ಇನ್ನೂ ನಾಲ್ವರು ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಮನೆಯಲ್ಲಿ ಪಟಾಕಿ ಮದ್ದಿನಿಂದ ಬಾಂಬ್​ ತಯಾರಿಸಲಾಗುತ್ತಿತ್ತು ಎಂದು ಹೇಳಲಾಗಿದೆ.ಈ ವೇಳೆ ಹಠಾತ್ ಸ್ಪೋಟಗೊಂಡು ಈ ಅವಘಡ ಸಂಭವಿಸಿದೆ. ಈ ಸ್ಫೋಟದಿಂದಾಗಿ ಕಾಲ್ತುಳಿತ ಉಂಟಾಗಿದೆ ಹಾಗೂ ಮನೆಯ ಮೇಲ್ಛಾವಣಿ, ಗೋಡೆಗಳು ಕುಸಿದು ಬಿದ್ದು ಆರು ಜನರು ಮೃತಪಟ್ಟಿದ್ದಾರೆ.
ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದು, ಅವರನ್ನು
ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ನಾಲ್ವರು ಅವಶೇಷಗಳೂ ಅಡಿಯಲ್ಲಿ ಸಿಲುಕಿದ್ದಾರೆ ಅವರನ್ನು ಹೊರತೆಗೆಯುವ ಕಾರ್ಯ ಮುಂದಿವರಿದಿದೆ.
ಸ್ಪೋಟದ ರಭಸಕ್ಕೆ ವ್ಯಕ್ಕಿಯೊಬ್ಬರ ದೇಹ 60 ಮೀಟರ್ ವರೆಗೂ ಹೋಗಿ ಬಿದ್ದಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಹಾರ ಉಸ್ತುವಾರಿ ಕೈಗೊಂಡಿದ್ದಾರೆ.