ಬಾಂಬೆ ಮಟ್ಕಾ ಜೂಜಾಟ ಆರೋಪಿ ಸೆರೆ

ಬೆಂಗಳೂರು,ಏ.೧- ಬಾಂಬೆ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿಯೊಬ್ಬನನ್ನು ಬಂಧಿಸಿರುವ ಸಿಸಿಬಿ ಪೊಲೀಸರು ೩೦ ಸಾವಿರ ನಗದನ್ನು ವಶಪಡಿಸಿಕೊಂಡಿದ್ದಾರೆ.
ಚಂದ್ರಾಲೇಔಟ್‌ನ ಸೈಯದ್ ಫಿರೋಜ್ (೪೦) ಬಂಧಿತ ಆರೋಪಿಯಾಗಿದ್ದಾನೆ. ಆರೋಪಿಯಿಂದ ೩೦ ಸಾವಿರ ನಗದು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಆರೋಪಿಯು ಗಂಗೊಂಡನಹಳ್ಳಿ ಮುಖ್ಯರಸ್ತೆಯಲ್ಲಿ ಸಾರ್ವಜನಿಕರಿಂದ ೧೦ ರೂ.ಗಳಿಗೆ ೮೦ ರೂ. ಕೊಡುವುದಾಗಿ ನಂಬಿಸಿ ಬಾಂಬೆ ಮಟ್ಕಾ ಜೂಜಾಟ ನಡೆಸುತ್ತಿದ್ದ.
ಆರೋಪಿಯು ಹಲವು ದಿನಗಳಿಂದ ಮಟ್ಕಾ ಜೂಜಾಟವನ್ನು ನಡೆಸುತ್ತಿದ್ದ ಖಚಿತ ಮಾಹಿತಿಯಾಧರಿಸಿ ಕಾರ್ಯಾಚರಣೆ ಕೈಗೊಂಡು ಬಂಧಿಸಿ ಚಂದ್ರಾಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದರು.
ಕ್ಲಬ್ ಮೇಲೆ ದಾಳಿ
ಇಂದಿರಾ ನಗರದ ಬಾಲಾಜಿ ರಿ ಕ್ರಿಯೇಷನ್ ಕ್ಲಬ್ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ೪ ಲಕ್ಷ ೨೩ ಸಾವಿರ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ಕ್ಲಬ್‌ನಲ್ಲಿ ೩೦ ರಿಂದ ೩೫ ಮಂದಿ ಗುಂಪು ಸೇರಿ ಹಣವನ್ನು ಕಟ್ಟಿಕೊಂಡು ಅಂದರ್ ಬಾಹರ್ ಜೂಜಾಟವಾಡುತ್ತಿದ್ದರು.
ಕ್ಲಬ್‌ನಲ್ಲಿ ಜೂಜಾಟವಾಡುತ್ತಿದ್ದ ಖಚಿತ ಮಾಹಿತಿಯಾಧರಿಸಿ ದಾಳಿ ನಡೆಸಿ ೩೨ ಮಂದಿಯನ್ನು ವಶಕ್ಕೆ ತೆಗೆದುಕೊಂಡು ನಗದನ್ನು ವಶಪಡಿಸಿ, ಇಂದಿರಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದರು.