ಬಾಂದಾರಗೆ ನೀರು ಹರಿಸುವಂತೆ ಆಗ್ರಹಿಸಿ ರಸ್ತೆ ತಡೆ ನಡೆಸಿದ ರೈತರು

ಬಸವನಬಾಗೇವಾಡಿ:ಮಾ.3: ತಾಲೂಕಿನ ಸಂಕನಾಳ ಗ್ರಾಮದ ಪಕ್ಕದಲ್ಲಿ ನಿರ್ಮಾಣವಾದ ಮುಳವಾಡ ಏತ ನೀರಾವರಿ ಯೋಜನೆಯ ಸಂಕನಾಳ ಮುಖ್ಯ ಕಾಲುವೆಯಿಂದ ಕೇವಲ 2 ಕಿ, ಮಿ ಅಂತರದಲ್ಲಿರುವ ಗ್ರಾಮದ ಬಾಂದಾರಗೆ ನೀರು ಹರಿಸುವಂತೆ ಆಗ್ರಹಿಸಿ ಗ್ರಾಮಸ್ಥರು ರೈತರು ಶನಿವಾರ ರಾಜ್ಯ ಬಿಜ್ಜಳನ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಈ ಸಂಧರ್ಭದಲ್ಲಿ ರೈತ ರಾಜಶೇಖರ ಸಜ್ಜನ ಮಾತನಾಡಿ ಗ್ರಾಮದ ಪಕ್ಕದಲ್ಲಿ ನಿರ್ಮಾಣವಾಗಿರುವ ಕಾಲುವೆಯಿಂದ ಕೇವಲ 2 ಕಿ,ಮಿ ಅಂತರದ್ಲಿ ಬಾಂದಾರ ಇದೆ ಕಾಲುವೆಗೆ ಹರಿಸುವ ನೀರನ್ನು ಬಾಂದಾರಗೆ ಹರಿಸುವುದರಿಂದ ಗ್ರಾಮದಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ, ಇದರಿಂದ ಗ್ರಾಮದಲ್ಲಿ ಬೋರವೆಲ್ಲಗಳಲ್ಲಿ ನೀರುವ ಹರಿಯುತ್ತದೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಈ ಹಿನ್ನಲೆಯಲ್ಲಿ ಸಾಕಾಷ್ಟು ಬಾರಿ ತಹಶೀಲ್ದಾರ ಹಾಗೂ ಕೃಷ್ಣಾ ಭಾಗ್ಯಜಲ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿzಲ್ಲಿದರಿಂದ ಯಾವುದೇ ಪ್ರಯೋಜನವಾಗಿಲ್ಲ ಈ ನಿಟ್ಟಿನಲ್ಲಿ ಅಧಿಕಾರಿಗಳು ಸಮ್ಮುಖದಲ್ಲಿ ಕಾಲುವೆಗೆ 12 ಇಂಚಿನ ಪೈಪ್ ಅಳವಡಿಸಿ ಪೈಪ್ ಮೂಲಕ ಬಾಂದರಗೆ ನೀರು ಹರಿಸಲು ಅನುಕೂಲ ಕಲ್ಪಿಸಲು ಅವಕಾಶ ಕಲ್ಪಿಸಬೇಕು ಎಂದು ಪಟ್ಟು ಹಿಡಿದರು. ನಂತರ ತಹಶೀಲ್ದಾರ ಯಮನಪ್ಪ ಸೋಮನಕಟ್ಟಿ ಮದ್ಯ ಪ್ರವೇಶಿಸಿ ರೈತರೊಂದಿಗೆ ಚರ್ಚಿಸಿ ರ್ತಸೆ ಮೇಲೆ ನಡೆಸುತ್ತಿರುವ ಪ್ರತಿಭಟನೆಯನ್ನ ಹಿಂದೆ ಪಡೆಯುವಂತೆ ಮನವಿ ಮಾಡಿದರು, ನಂತರ ಕೃಷ್ಣಾ ಭಾಗ್ಯ ಜಲ ನಿಗಮದ ಇಇ ಬಸವರಾಜ ದೊಡಮನಿ ಅವರೊಂದಿಗೆ ದೂರವಾಣಿ ಸಂಪರ್ಕ ಮಾಡಿ ಕಾಲುವೆಯಿಂದ ಪೈಪ್ ಮೂಲಕ ಬಾಂದಾರಗೆ ನೀರು ಕಲ್ಪಿಸುವುದಾಗಿ ಭರವಸೆ ನೀಡಿದರು.
ಈ ಸಂಧರ್ಭದಲ್ಲಿ ರೈತರಾದ ಸಾವಿತ್ರಿ ಬೀರಲದಿನ್ನಿ, ಲಕ್ಮವ್ವ ತಂಗಡಗಿ, ಗುರುಶಾಂತ ಸಜ್ಜನ, ಭೀಮಪ್ಪ ಡೋನೂರ, ಈರಯ್ಯ ಹಿರೇಮಠ, ಬಿ,ಟಿ ಬಿರಾದಾರ, ಮಡಿವಾಳಪ್ಪ ನಾಗರಡ್ಡಿ, ಹಾಗೂ ಕೃಷ್ಣಾ ಭಾಗ್ಯ ಜಲ ಅಧಿಕಾರಿಗಳಾದ ಜಗದೀಶ ಹೊನ್ನಕಸ್ತೂರಿ, ಎನ್ ಎಸ್ ನಸರಡ್ಡಿ ಪಿಎಸ್‍ಐ ರವಿ ಪವಾರ, ಸೇರಿದಂತೆ ಮುಂತಾದವರು ಇದ್ದರು.