ಬಾಂಗ್ಲಾದೇಶದ ನಾಗರಿಕನಿಗೆ ಜಂಗಮದೀಕ್ಷೆ

ಕಲಬುರಗಿ, ಅ. 30: ಬಾಂಗ್ಲಾ ದೇಶದ ಮೂಲ ನಾಗರಿಕನಾಗಿರುವ ಯುವಕನೊಬ್ಬ ಕಾಶೀ ಜಂಗಮವಾಡಿ ಮಠದಲ್ಲಿ ನಡೆದ ಶ್ರೀ ಕಾಶೀ e್ಞÁನಸಿಂಹಾಸನಾಧೀಶ್ವರ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ 77ನೇ ಜನ್ಮದಿನೋತ್ಸವದಲ್ಲಿ ಜಂಗಮದೀಕ್ಷೆಸ್ವೀಕರಿಸಿ ಎಲ್ಲರ ಗಮನ ಸೆಳೆದಿದ್ದಾನೆ.
ಬಾಂಗ್ಲಾದೇಶದ ಮೂಲ ನಿವಾಸಿ ಪಂಕಜರಾಯ ಕಾಶೀ ಜಗದ್ಗುರುಗಳ ಆನ್‍ಲೈನ್ ಅಶೀರ್ವಚನದಿಂದ ಪ್ರೇರೆಪಿತನಾಗಿ ಕಳೆದ ನಾಲ್ಕು ವರ್ಷಗಳಿಂಗ ಜಗದ್ಗುರುಗಳ ಶಿಷ್ಯರಾಗಿದ್ದಾರೆ. ಪಂಕಜರಾಯ ಬಾಂಗ್ಲಾದೇಶದಲ್ಲಿ 500 ಜನರನ್ನು ಸಂಘಟಿಸಿ ಕಾಶೀ ಜಂಗಮವಾಡಿ ಶಾಖಾಮಠ ಸ್ಥಾಪನೆಗೆ ಮುಂದಾಗಿದ್ದಾರೆ. ಜಗದ್ಗುರುಗಳ 77ನೇ ಜನ್ಮದಿನದ ಅಂಗವಾಗಿ ಜಂಗಮವಾಡಿ ಮಠದಲ್ಲಿ ಹಮ್ಮಿಕೊಂಡಿದ್ದ ಜಗದ್ಗುರು ವಿಶ್ವಾರಾಧ್ಯ ಮಹಾರುದ್ರಾಭೀಷೇಕ, ಹೋಮ ಹವನದಲ್ಲಿ ಜಗದ್ಗುರುಗಳು ಪಂಕಜರಾಯ ಅವರಿಗೆ ಜಂಗಮದೀಕ್ಷೆ ನೀಡಿ, ನೈಷ್ಟಿಕ ಬ್ರಹ್ಮಚರ್ಯ ಬೋಧಿಸಿ ದಂಡ, ಜೋಳಿಗೆ ನೀಡಿ ಆಶೀರ್ವದಿಸಿರು, ಧÀರ್ಮಸಮಾರಂಭದಲ್ಲಿ ಆಶೀರ್ವಚನ ನೀಡಿದ ಜಗದ್ಗುರುಗಳು 77ನ್ನು ಹಿಂದಿಯಲ್ಲಿ ಸಾಥ್ ಸಾಥ್ ಎಂದು ಕರೆಯಲಾಗುತ್ತದೆ. ಸಾತ್ ಸಾತ್ ಎಂದರೆ ಜೊತೆ ಜೊತೆ ಎಂದಾರ್ಥವಾಗಿದೆ. ನಮ್ಮ 77ನೇ ಜನ್ಮದಿನದ ಸಂಧರ್ಭದಲ್ಲಿ ನಮ್ಮ ಜೊತೆ ಭಕ್ತರ ಸಹಕಾರ, ಭಕ್ತರ ಕಲ್ಯಾಣಕ್ಕೆ ನಮ್ಮ ಸಹಕಾರದ ಫಲವಾಗಿ ಬಾಂಗ್ಲಾದೇಶಕ್ಕೆ ಓರ್ವ ಸ್ವಾಮಿ ದೊರೆತಿದ್ದಾರೆ. ಜೊತೆಗೆ ದೇಶದ ದಕ್ಷಿಣದ ತುದಿಯಲ್ಲಿರುವ ರಾಮೇಶ್ವರಂನಲ್ಲಿ ಜಂಗಮವಾಡಿ ಮಠದ ನಿರ್ಮಾಕ್ಕೆ ಮುಂದಾಗಿದ್ದೇವೆಂದು ತಿಳಿಸಿದರು. ತಮಿಳುನಾಡು, ಆಂದ್ರ, ತೆಲಂಗಾನಾ, ಕರ್ನಾಟಕ, ಮಧ್ಯಪ್ರದೇಶದ ಭಕ್ತಾದಿಗಳು ಪಾಲ್ಗೊಂಡರು.