ಬಾಂಗ್ಲಾದಲ್ಲಿ ದೋಣಿಗೆ ಹಡಗು ಡಿಕ್ಕಿ ೨೫ ಕ್ಕೂ ಹೆಚ್ಚು ಮಂದಿ ಸಾವು

ಢಾಕಾ.ಮೇ೩: ಬಾಂಗ್ಲಾದೇಶದಲ್ಲಿ ಎರಡು ದೋಣಿಗಳ ನಡುವೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ೨೫ ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮಧ್ಯ ಬಾಂಗ್ಲಾದೇಶದಲ್ಲಿ ಈ ಘಟನೆ ನಡೆದಿದ್ದು, ಕನಿಷ್ಠ ೨೫ ಮಂದಿ ಸಾವನ್ನಪ್ಪಿದ್ದು, ಎಲ್ಲ ೨೫ ಮೃತದೇಹಗಳನ್ನು ಪತ್ತೆ ಮಾಡಲಾಗಿದೆ ಎಂದು ಪೊಲೀಸ್ ಇಲಾಖೆ ಮುಖ್ಯಸ್ಥ ಮಿರಾಜ್ ಹುಸೇನ್ ಹೇಳಿದ್ದಾರೆ.
ಶಿಬ್ಬಾರ್ ಪಟ್ಟಣದ ಸಮೀಪವಿರುವ ಪದ್ಮಾ ನದಿಯಲ್ಲಿ ಕನಿಷ್ಠ ೩೦ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿಯು ಮರಳು ಸಾಗಿಸುತ್ತಿದ್ದ ಹಡಗಿಗೆ ಡಿಕ್ಕಿ ಹೊಡದ ಪರಿಣಾಮ ದೋಣಿ ಪಲ್ಟಿಯಾಗಿದೆ ಎನ್ನಲಾಗಿದ್ದು, ದೋಣಿಯಲ್ಲಿ ಎಷ್ಟು ಪ್ರಯಾಣಿಕರಿದ್ದರು ಎನ್ನುವ ಕುರಿತು ಇನ್ನೂ ನಿಖರವಾದ ಮಾಹಿತಿ ಲಭ್ಯವಾಗಿಲ್ಲ.