ಬಹು ಉಪಯೋಗಿ ಸೋಂಪು

ಸಾಮಾನ್ಯವಾಗಿ ಹೋಟೆಲ್‌ಗಳಲ್ಲಿ ಊಟ ಮುಗಿಸಿದ ಬಳಿಕ
ಬಿಲ್ ಜೊತೆ ಸೋಂಪು ಕಾಳು ಕೊಡುವುದನ್ನು ನೋಡಿದ್ದೇವೆ.
ಆದರೆ ಅದರ ಹಿಂದಿರುವ ಉದ್ದೇಶ ಅಷ್ಟಾಗಿ ಯಾರಿಗೂ ತಿಳಿದಿಲ್ಲ. ಕಾರಣ ತಿಳಿದರೆ ಪ್ರತಿ ದಿನ ಸೋಂಪು ಕಾಳು ಉಪ ಯೋಗಿಸುವುದರಲ್ಲಿ ಸಂಶಯವಿಲ್ಲ.
ಸೋಂಪು ಕಾಳನ್ನು ಪ್ರತಿದಿನ ಊಟವಾದ ಬಳಿಕ ಒಂದೆರಡು ಚಮಚ ತಿನ್ನುವುದರಿಂದ ಅಜೀರ್ಣ ಸಮಸ್ಯೆ ಕಾಡುವುದಿಲ್ಲ. ಊಟದ ನಂತರ ತಿನ್ನುವುದರಿಂದ ಬಾಯ ವಾಸನೆಯೂ ಕಮ್ಮಿಯಾಗುತ್ತದೆ.
ಸೋಂಪು ಕಾಳನ್ನು ರಾತ್ರಿ ನೀರಿನಲ್ಲಿ ನೆನೆಸಿ, ಬೆಳಗ್ಗೆ ಆ ನೀರಿನಿಂದ ಕಣ್ಣುಗಳನ್ನು ತೊಳೆಯುವುದರಿಂದ ಕಣ್ಣಿನ ಅನೇಕ ಸಮಸ್ಯೆ
ಗಳು ನಿವಾರಣೆಯಾಗುತ್ತವೆ
ಸೋಂಪನ್ನು ನೀರಿನಲ್ಲಿ ಕುದಿಸಿ, ಅದರ ಡಿಕಾಕ್ಷನ್ ತಯಾರಿಸಿ ಕುಡಿಯುವುದರಿಂದ ಮಹಿಳೆಯರ ಋತುಚಕ್ರದ ದಿನಗಳಲ್ಲಿ ಉಂಟಾಗುವ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.
ಹೊಟ್ಟೆ ನೋವು ಮತ್ತು ಇತರ ತೊಂದರೆ ನಿವಾರಣೆಯಾಗುತ್ತದೆ. ಜೊತೆಗೆ ನಿಯಮಿತವಾಗಿ ಋತುಚಕ್ರವಾಗುತ್ತದೆ.
ಇದು ಮಕ್ಕಳಿಗೂ ಒಳ್ಳೆಯದು. ಮಕ್ಕಳಲ್ಲಿ ಉಂಟಾಗುವ ಉದರ ತೊಂದರೆಗಳ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.
ಮಕ್ಕಳಲ್ಲಿ ಅಜೀರ್ಣ ಸಮಸ್ಯೆ ಕಾಡುತ್ತಿದ್ದರೆ ಒಂದು ಚಮಚ ಸೋಂಪು ಕಾಳುಗಳನ್ನು ಜಗಿಯಲು ನೀಡಬೇಕು. ಸೋಂಪು ಕಾಳುಗಳನ್ನು ಜಗಿದು ನುಂಗುವುದರಿಂದ ಪರಿಹಾರ ಸಿಗುತ್ತದೆ.