ಬಹು ಅಂಗಾಂಗ ಕಸಿಗೆ ಸಹಯೋಗ

ಬೆಂಗಳೂರು,ಏ.೧- ಸಮಗ್ರ ಹೃದಯ ಮತ್ತು ಶ್ವಾಸಕೋಶ ಮತ್ತು ಯಕೃತ್ ಕಸಿ ಮಾಡಲು ಚೆನ್ನೈ ನ ಎಂಜಿಎಂ ಹೆಲ್ತ್ ಕೇರ್ ಸಹಯೋಗದೊಂದಿಗೆ ಮೀಟ್ರಾ ಸಹಯೋಗ ಮಾಡಿಕೊಳ್ಳಲಾಗಿದೆ.

ಹೃದಯ ಮತ್ತು ಶ್ವಾಸಕೋಶ ಕಸಿ ಮೂಲಕ, ಹೃದಯ ಮತ್ತು ಶ್ವಾಸಕೋಶದ ಕಸಿ, ಹೃದಯಕ್ಕೆ ಯಾಂತ್ರಿಕ ರಕ್ತಪರಿಚಲನಾ ಬೆಂಬಲ ಸಾಧನ ಒದಗಿಸುವ ಮೂಲಕ, ಹೃದಯ ಮತ್ತು ಶ್ವಾಸಕೋಶದ ಕಸಿ ಮಾಡುವ ಉದ್ದೇಶ ಹೊಂದಲಾಗಿದೆ.

ಡಾ.ಕೆ.ಆರ್.ಬಾಲಕೃಷ್ಣನ್ ೩೭೫ಕ್ಕೂ ಹೆಚ್ಚು ಹೃದಯ ಮತ್ತು ಶ್ವಾಸಕೋಶಶಸ್ತ್ರಚಿಕಿತ್ಸೆ ನಡೆಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಡಾ.ತ್ಯಾಗರಾಜನ್ ಶ್ರೀನಿವಾಸನ್ ೧,೭೦೦ಕ್ಕೂ ಹೆಚ್ಚು ಲಿವರ್ ಕಸಿ ಗಳ ವೈಯಕ್ತಿಕ ಅನುಭವ ಹೊಂದಿದ್ದಾರೆ ಮತ್ತು ೩,೫೦೦ಕ್ಕೂ ಹೆಚ್ಚು ಲಿವರ್ ಟ್ರಾನ್ಸ್ ಪ್ಲಾಂಟ್ ಗಳ ಒಂದು ಸಂಚಿತ ಅನುಭವ ಹೊಂದಿದ್ದಾರೆ.

ರೋಗಿಗಳಿಗೆ ವೈದ್ಯಕೀಯ ವಿಜ್ಞಾನ ನೀಡುವ ಅತ್ಯುತ್ತಮ ಸೇವೆ ಮೂಲ ಗುರಿ” ಎಂದು ಎಂಜಿಎಂ ಹೆಲ್ತ್ ಕೇರ್ ನ ಇನ್ ಸ್ಟಿಟ್ಯೂಟ್ ಆಫ್ ಹಾರ್ಟ್ ಅಂಡ್ ಲಂಗ್ ಟ್ರಾನ್ಸ್ ಪ್ಲಾಂಟ್ ಆ?ಯಂಡ್ ಮೆಕಾನಿಕಲ್ ಸರ್ಕ್ಯುಲೇಟರಿ ಸಪೋರ್ಟ್ ಸಂಸ್ಥೆಯ ನಿರ್ದೇಶಕ ಡಾ.ಕೆ.ಆರ್.ಬಾಲಕೃಷ್ಣನ್ ತಿಳಿಸಿದ್ದಾರೆ

“ಎಂಜಿಎಂ ಹೆಲ್ತ್ ಕೇರ್ ಕ್ಲಿನಿಕಲ್ ತಂಡ ಹೃದಯ ಮತ್ತು ಶ್ವಾಸಕೋಶದ ಕಸಿ ಮತ್ತು ಹೃದಯ ವೈಫಲ್ಯ ನಿರ್ವಹಣಾ ಕಾರ್ಯಕ್ರಮಗಳನ್ನು ಸ್ಥಾಪಿಸಲು ಮೀತ್ರ ಆಸ್ಪತ್ರೆಯ ವೈದ್ಯಕೀಯ ತಂಡದೊಂದಿಗೆ ನಿಕಟವಾಗಿ ಕೆಲಸ ಮಾಡಲಿದೆ.