ಬಹುಸಂಖ್ಯಾತ ಹಿಂದೂಗಳ ಮತಕ್ಕಾಗಿ ಬಾಬ್ರಿ ಮಸೀದಿ ಮುಸ್ಲಿಂರಿಂದ ಕಸಿದುಕೊಳ್ಳಲಾಗಿದೆ: ಓವೈಸಿ

ಕಲಬುರಗಿ:ಜ.20: ಬಹುಸಂಖ್ಯಾತ ಹಿಂದೂಗಳ ಮತಕ್ಕಾಗಿ ಎಲ್ಲ ರಾಜಕೀಯ ಪಕ್ಷಗಳು ಜಗಳವಾಡುತ್ತಿದ್ದು, ಬಹುಸಂಖ್ಯಾತರ ಮತಕ್ಕಾಗಿಯೇ ಬಾಬ್ರಿ ಮಸೀದಿ ಮುಸ್ಲಿಂರಿಂದ ಕಸಿದುಕೊಳ್ಳಲಾಗಿದೆ ಎಂದು ಎಐಎಂಐಎಂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ಅಸಾದೋದ್ದೀನ್ ಓವೈಸಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಹರಿಹಾಯ್ದರು.
ನಗರದಲ್ಲಿ ಶನಿವಾರ ಖಾಸಗಿ ಹೊಟೇಲ್‍ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನಾವು ಕಾಂಗ್ರೆಸ್ ನೇತೃತ್ವದಲ್ಲಿನ ಇಂಡಿಯಾ ಒಕ್ಕೂಟದಲ್ಲಿದ್ದೇವೆ ಎಂದು ಹೇಳುತ್ತಾರೆ. ಅವರ ಸರ್ಕಾರ ದೆಹಲಿಯಲ್ಲಿ ಪ್ರತಿ ಗುರುವಾರ ಸರ್ಕಾರಿ ಶಾಲೆಗಳಲ್ಲಿ ಹುನಮಾನ್ ಚಾಲೀಸಾ ಪಠಣೆ ಮಾಡಲು ಹೇಳಿದ್ದಾರೆ. ಹಿಂದೂಯೇತರ ಆ ಶಾಲೆಯಲ್ಲಿನ ಮಕ್ಕಳು ಏನು ಮಾಡಬೇಕು? ಈಗ ಎಲ್ಲರ ಬಹುಸಂಖ್ಯಾತರ ಮತಗಳಿಗಾಗಿ ಜಗಳ ಶುರುವಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಇರಲಿಲ್ಲ ಅಂದ್ರೆ ನಾವು ಹೋಗ್ತಿದ್ದೆವೆ ಎಂಬ ಮಾತನ್ನು ಇಂಡಿಯಾ ಒಕ್ಕೂಟದವರು ಮಾತನಾಡುತ್ತಿದ್ದಾರೆ. ನನ್ನ ಪ್ರಮುಖ ಮೂರು ವಿಚಾರಗಳ ಬಗ್ಗೆ ಯಾರು ಏನು ಹೇಳೋದಿಲ್ಲ. ಎಲ್ಲರಿಗೂ ಬಹುಸಂಖ್ಯಾತರ ಮತಗಳ ಮೇಲೆ ಕಣ್ಣಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಬಹುಸಂಖ್ಯಾತ ಮತಗಳ ಕ್ರೂಢೀಕರಣ ಮಾಡುತ್ತಿದ್ದಾರೆ. ಆ ಮೂಲಕ ಭಾರತದ ಮುಸ್ಲಿಂರಿಗೆ ಪ್ರಧಾನಿ ಮೋದಿ ಸಂದೇಶ ನೀಡಿದ್ದಾರೆ. ಭಾರತದ ರಾಜಕೀಯದಲ್ಲಿ ಮುಸ್ಲಿಂರ ಸ್ಥಾನ ಎಲ್ಲಿದೆ ಎಂಬುದನ್ನು ಅವರು ತೋರಿಸಿದ್ದಾರೆ ಎಂದು ಓವೈಸಿ ಅವರು ಪ್ರಧಾನಿ ವಿರುದ್ಧ ತನ್ನ ಅಸಮಧಾನ ವ್ಯಕ್ತಪಡಿಸಿದರು.
500 ವರ್ಷಗಳ ಕಾಲ ಮುಸ್ಲಿಂರು ಅಲ್ಲಿ ನಮಾಜ್ ಮಾಡಿದ್ದಾರೆ. 1992ರಲ್ಲಿ ಬಿಜೆಪಿ ಸಂಘ ಪರಿವಾರ ದೇಶದ ಸರ್ವೋಚ್ಛ ನ್ಯಾಯಾಲಯದ ಮುಂದೆ ಪ್ರಮಾಣ ಮಾಡಿ ಬಾಬ್ರಿ ಮಸೀದಿ ಕೆಡವಿದರು. ಭಾರತದ ಮುಸ್ಲಿಂರಿಂದ ವ್ಯೆವಸ್ಥಿತವಾಗಿ ಬಾಬ್ರಿ ಮಸೀದಿಯನ್ನ ಕಸಿದುಕೊಂಡಿದ್ದಾರೆ ಎಂದು ಅವರು ಆರೋಪಿಸಿದರು.
ಮಹಾತ್ಮಾ ಗಾಂಧಿ ಈ ವಿಚಾರದಲ್ಲಿ ಏನಾದರೂ ಹೇಳಿದ್ದಾರೆಯೇ ಗೋಡ್ಸೆ ಗುಂಡು ಹೊಡೆದಾಗ ಗಾಂಧಿ ಹೇ ರಾಮ ಅಂತಾ ಹೇಳಿದರು. ವಿಶ್ವ ಹಿಂದು ಪರಿಷತ್ ಹುಟ್ಟಿಕೊಂಡಾಗ ರಾಮ ಬಂದಿರಲಿಲ್ಲ. 1950ರಲ್ಲಿ ಜನಸಂಘದ ಮೊದಲ ಸಂತ್ ಸಮಾವೇಶ ಜರುಗಿತು. 1989ರಲ್ಲಿ ಪಾಲನ್‍ಪುರದಲ್ಲಿ ಬಿಜೆಪಿ ರೆಸ್ಯೂಲೇಷನ್ ಪಾಸ್ ಮಾಡಿತು. ಕಾಂಗ್ರೆಸ್‍ನ ಜಿ.ಬಿ. ಪಂತ್ ಅವರು ಆಗ ಮುಖ್ಯಮಂತ್ರಿ ಆಗಿದ್ದರು. ರಾಜ್ ಕೆ ಅಂಧೆರಿಯಲ್ಲಿ ರಾಮನ ಮೂರ್ತಿ ಇಡಲಾಗಿತ್ತು ಎಂದು ಅವರು ತಿಳಿಸಿದರು.
ಆಗ ಅಲ್ಲಿನ ಕಲೆಕ್ಟರ್ ನಾಯರ್‍ಸಾಬ್ ಅವರು ಮಸೀದಿ ಬಂದ್ ಮಾಡಿ ಪೂಜಾ ಶುರು ಮಾಡಿದರು. ನಮ್ಮ ಮಸೀದಿ ಇತ್ತು, ಇರುತ್ತೆ ಕೂಡ, ಅವರು ಅಲ್ಲಿಂದ ಮೂರ್ತಿ ತೆಗೆಯಲಿಲ್ಲ. ಸರ್ವೋಚ್ಛ ನ್ಯಾಯಾಲಯದ ತೀರ್ಪು ಬಂದಾಗ ನಾನು ಹೇಳಿದ್ದೆನೆ. ಇಂತಹ ಸಾಕಷ್ಟು ವಿಚಾರಗಳು ಹೊರ ಬರುತ್ತೆ. ಈಗ ಸಂಘ ಪರಿವಾರ ಎಲ್ಲ ಕಡೆ ಹೋಗಿ ಇಲ್ಲಿ ಮಸೀದಿ ಇರಲಿಲ್ಲ ಅಂತಾ ಹೇಳ್ತಿದ್ದಾರೆ. 1986ರಲ್ಲಿ ಕೀಲಿ ತೆಗೆಯದಿದ್ದರೆ ಈ ಸಂದರ್ಭ ಬರುತ್ತಿರಲಿಲ್ಲ. 6 ಡಿಸೆಂಬರ್ ಬಾಬ್ರಿ ಮಸೀದಿ ಕೆಡವದೇ ಹೋಗಿದ್ದರೆ ಈಹೊತ್ತು ಇಂತಹ ಸನ್ನಿವೇಶ ನಿರ್ಮಾಣವಾಗುತ್ತಿರಲಿಲ್ಲ ಎಂದು ಅವರು ಆಕ್ರೋಶ ಹೊರಹಾಕಿದರು.
ದೇಶದ ಸರ್ವೋಚ್ಛ ನ್ಯಾಯಾಲಯವು ತನ್ನ ಕೊನೆ ತೀರ್ಪಿನಲ್ಲಿ ನಂಬಿಕೆ ಆಧಾರದಲ್ಲಿ ಮುಸ್ಲಿಂರು ಈ ಸ್ಥಳ ನೀಡಲು ಸಾಧ್ಯವಿಲ್ಲ. ಅಲ್ಲಿ ಮಂದಿರ ಕೆಡವಿ ಮಸೀದಿ ನಿರ್ಮಾಣವಾಗಿಲ್ಲ ಎಂದು ಜಸ್ಟಿಸ್ ಜೆ.ಎಸ್. ವರ್ಮಾ ಹೇಳಿದ್ದಾರೆ ಎಂದು ಅವರು ತಿಳಿಸಿದರು.