ಬಹುಮುಖ ವ್ಯಕ್ತಿತ್ವದ ಶಿವಶಂಕರ ಟೋಕರೆ

ಬೀದರ:ಎ.6:ಒಬ್ಬ ಅಧಿಕಾರಿ ಮನಸ್ಸು ಮಾಡಿದರೆ ಏನೆಲ್ಲಾ ಕೆಲಸ ಮಾಡಬಹುದೆಂಬುವುದಕ್ಕೆ ಶಿವಶಂಕರ ಟೋಕರೆ ಸಾಕ್ಷಿ. ಕಲ್ಯಾನ ಕರ್ನಾಟಕದಲ್ಲೆ ಹೆಚ್ಚಿನ ಅನುದಾನ ಪಡೆದು ಗುಣಾತ್ಮಕ ತರಬೇತಿ ಜೊತೆಗೆ ಮೂಲ ಸೌಕರ್ಯ ಕಲ್ಪಿಸಿದ ಶಿವಶಂಕರ ಟೋಕರೆ ಒಬ್ಬ ನಿಷ್ಠಾವಂತ ಅಧಿಕಾರಿ ಎಂದು ಐಟಿಐ ವಿಭಾಗೀಯ ಜಂಟಿ ನಿರ್ದೇಶಕರಾದ ಶ್ರೀ ರಾಜೇಶ ಬಾವಗಿ ನುಡಿದರು.

ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವಿಭಾಗೀಯ ಕಛೇರಿಯಿಂದ ಹಮ್ಮಿಕೊಂಡ ಡಾ|| ಬಾಬು ಜಗಜೀವನರಾಮ ಜಯಂತಿ, ಶಿವಶಂಕರ ಟೋಕರೆಯವರ ಕೌಶಲ್ಯ ರಶ್ಮಿ ಪುಸ್ತಕ ವಿಮರ್ಶೆ ಹಾಗೂ ಕಲ್ಯಾಣ ಕರ್ನಾಟಕದ ಕೌಶಲ್ಯ ಪ್ರಾಚಾರ್ಯರಿಗೆ ಸನ್ಮಾನ ಸಮಾರಂಭವನ್ನು ತಮ್ಮ ಅಮೃತ ಹಸ್ತದಿಂದ ಉದ್ಘಾಟಿಸಿದ ಜಂಟಿ ನಿರ್ದೇಶಕರು, ಶಿವಶಂಕರ ಟೋಕರೆ ತನ್ನ ಕ್ರಿಯಾಶೀಲ ಕ್ಷಮತೆ ಹಾಗೂ ಪಾದರಸದ ಘನವ್ಯಕ್ತಿತ್ವದ ಜೊತೆಗೆ 16662 ಐಟಿಐ ಕುಶಲ ಕರ್ಮಿಗಳಿಗೆ ನೌಕರಿ ಒದಗಿಸುವುದರಲ್ಲದೆ ಒಬ್ಬ ತಂತ್ರಜ್ಞಾನ ವಿದ್ಯಾರ್ಥಿಯಾಗಿ 101 ಕವನಗಳನ್ನು ಕ್ರೋಢೀಕರಿಸಿ ಕೌಶಲ್ಯ ರಶ್ಮಿ ಕವನ ಸಂಕಲನ ಲೋಕಾರ್ಪಣೆ ಮಾಡಿದ್ದು ಇಡಿ ಇಲಾಖೆಗೆ ಒಂದು ಗೌರವ ಹಾಗೂ ಹೆಮ್ಮೆಯ ಸಂಗತಿಯಾಗಿದೆ ಎಂದು ನುಡಿದರು. ತನ್ನ ಸೇವಾ ಅವಧಿಯಲ್ಲಿ ಸಹಾಯ ಸಹಕಾರಕ್ಕೆ ಕಾರಣಿಭೂತರಾದ 60 ಜನ ಪ್ರಾಚಾರ್ಯರಿಗೆ ಸನ್ಮಾನಿಸುತ್ತಿರುವುದು ಒಂದು ಅಭಿಮಾನದ ಸಂಗತಿಯಾಗಿದೆ ಎಂದು ನುಡಿದರು.

ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿ ಪುರಸ್ಕøತರು ಹಾಗೂ ಪ್ರಗತಿ ಪರ ಚಿಂತಕರಾದ ಶಿವಲಿಂಗ ಹೆಡೆ ಪುಸ್ತಕ ವಿಮರ್ಶೆಯನ್ನು ತಮ್ಮದೆ ದಾಟಿಯಲ್ಲಿ ಪ್ರಸ್ತುತ ಪಡಿಸುತ್ತ-101 ಕವನಗಳ ಸಮುಚ್ಛಯದಲ್ಲಿ 7 ಸ್ಥರಗಳಿವೆ. ಸರ್ಕಾರಿ ನೌಕರರ ಕ್ಷಮತೆ ಹಾಗೂ ಎಚ್ಚರಿಕೆ, ವೃತ್ತಿ ಗೌರವ, ಗುಣಾತ್ಮಕ ತರಬೇತಿ ಮೂಲಭೂತ ಸೌಕರ್ಯ ತನ್ನನೆ ತಾನು ಅವಲೋಕನ, ಕರೋನ ಕಂಟಕ, ಮತದಾನ ಹಬ್ಬ ಹರಿದಿನಗಳ ಆಹಾರ ವ್ಯವಸ್ಥೆ ಹಾಗೂ ಅನೇಕ ವ್ಯಕ್ತಿಗಳ ವ್ಯಕ್ತಿತ್ವ ಚಿತ್ರಣ ಪ್ರತಿಬಿಂಬಿಸುವುದು ಒಂದು ಅಪರೂಪದ ಗ್ರಂಥ ಇದಾಗಿದೆ. ಒಬ್ಬ ತಂತ್ರಜ್ಞಾನ ಸಾಹಿತ್ಯ ರಚಿಸಿರುವುದು ಜೊತೆಗೆ ಅನೇಕ ಕಾರ್ಯಕಲಾಪಗಳಲ್ಲಿ ತನ್ನನ್ನೆ ತಾನು ತೊಡಗಿಸಿಕೊಂಡ ದೂರದೃಷ್ಟಿಯ ಘನವ್ಯಕ್ತಿತ್ವ ಇವರದಾಗಿದೆ. ಅನೇಕ ಕವನಗಳ ಒಳಹೊಕ್ಕು ನುಡಿದಾಗ ಆತ್ಮವಿಮರ್ಶೆ ಸಂಬಂಧಗಳ ಬೆಸುಗೆ, ಸಂಘ ಸಂಸ್ಥೆಗಳ ಸ್ಮರಣೆ ಇತಿಹಾಸ ಪರಂಪರೆ ಪತ್ರಿಕೆಗಳ ಮಹತ್ವದ ಬಗ್ಗೆ ತಮ್ಮ ವಿಚಾರವನ್ನು ಕವನಗಳ ಮುಖಾಂತರ ಹಿಡಿದಿಟ್ಟಿರುವುದು ಇವರ ಕನ್ನಡ ಕಾಳಜಿ ಹೊರಹೊಮ್ಮಿದೆ. ಶಿವಶಂಕರ ಟೋಕರೆ ಕೌಶಲ್ಯ ಜೊತೆಗೆ ಕಾವ್ಯಕ್ಷೇತ್ರದಲ್ಲಿ ಒಂದು ಬೆಳಕು ಕಂಡಿರುವುದು ಸಂತಸವಾಗಿದೆ ಎಂದು ನುಡಿದರು.

ಹಿರಿಯರಾದ ಪಂಡಿತ ಬಸವರಾಜ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಶಿವಶಂಕರ ಟೋಕರೆ ಒಬ್ಬ ಧನಾತ್ಮಕ ಚಿಂತನೆಗಾರ. ವ್ಯಾಕರಣ ಛಂದಸ್ಸು, ಅಲಂಕಾರದ ಗೋಜಿಗೆ ಹೋಗದೆ ತನಗೆ ತಿಳಿದಿದ್ದನ್ನು ಸಾಹಿತ್ಯ ರೂಪದಲ್ಲಿ ಜೊಡಿಸಿ ಸಮಾಜಕ್ಕೆ ಅರ್ಪಣೆ ಮಾಡಿರುವುದು ಅವರಲ್ಲಿಯ ತುಡಿತ ಏನೆಂಬುವುದನ್ನು ಇದು ತೋರಿಸುತ್ತದೆ. ಒಬ್ಬ ಜಿಲ್ಲಾ ಮಟ್ಟದ ಅಧಿಕಾರಿಯಾಗಿ ಅನೇಕ ಕೆಲಸದ ಒತ್ತಡ ಹಾಗೂ ಮಾನಸಿಕೆ ಹಿಂಸೆಯೊಳಗಾಗಿ ಕೆಲಸ ಮಾಡುವ ಸಂದರ್ಭದಲ್ಲಿಯೂ ತನ್ನ 60ನೇ ವರ್ಷದ ಇಳಿ ವಯಸ್ಸಿನಲ್ಲಿ ಸರ್ಕಾರಿ ನೌಕರಿ ಇದ್ದಾಗಲೆ ತನ್ನ ಕರ್ತವ್ಯಕ್ಕೆ ನ್ಯಾಯ ಒದಗಿಸುವ ದಿಸೆಯಲ್ಲಿ ಕೌಶಲ್ಯ ರಶ್ಮಿ ಲೋಕಾರ್ಪಣೆ ಮಾಡಿರುವುದು ಪ್ರಯತ್ನದ ಫಲವಾಗಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಕೌಶಲ್ಯ ರಶ್ಮಿ ಲೇಖಕರಾದ ಶಿವಶಂಕರ ಟೋಕರೆ ಪ್ರಾಸ್ತವಿಕವಾಗಿ ಮಾತನಾಡಿ – ನಾನು ಬರೆದ ಕವನಗಳಿಗೆ ಸದಾಶಯದ ನುಡಿಯನ್ನು ಬರೆದ ಇಲಾಖೆಯ ಆಯುಕ್ತರಾದ ಮಾನ್ಯ ಶ್ರೀಮತಿ ಜ್ಯೋತಿ ಕೆ. ಅವರನ್ನು ಸ್ಮರಿಸುತ್ತ ಇದನ್ನು ಮುದ್ರಣ ಮಾಡಿ ಸಹಕಾರ ಮಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ ರವರನ್ನು ಅಭಿನಂದಿಸಿ ಮಾತನಾಡಿ – ನನ್ನ ಜೀವನದ ಅನೇಕ ಕ್ಷಣಗಳನ್ನು ಸಾಹಿತ್ಯ ಮುಖಾಂತರ ಬರೆದಿಡುವ ಒಂದು ಸಣ್ಣ ಪ್ರಯತ್ನ ಮಾಡಿದ್ದೇನೆ ಎಂದು ಎಲ್ಲರನ್ನು ಅಭಿನಂದಿಸಿದರು. ಮೊದಲಿಗೆ ಕಲಬುರ್ಗಿ ವಿಭಾಗದ ಪ್ರಭಾರೆ ಉಪನಿರ್ದೇಶಕರಾದ ಡಾ|| ಶರಣಬಸಪ್ಪ ಸಡ್ಡು ಸ್ವಾಗತಿಸಿದರೆ, ಸಹಾಯಕ ನಿರ್ದೇಶಕರಾದ ಬಸವರಾಜ ಕಣ್ಮುಸ ವಂದಿಸಿದರೆ, ಬಾಬು ಪ್ರಭಾಜಿ ನಿರೂಪಿಸಿದರು. ಈ ಸಂದರ್ಭದಲ್ಲಿ 60 ಜನ ಕೌಶಲ್ಯ ಪ್ರಾಚಾರ್ಯರಿಗೆ ತನ್ನ 60ನೇ ಹುಟ್ಟು ಹಬ್ಬದ ನಿಮಿತ್ಯವಾಗಿ ಕೌಶಲ್ಯ ರಶ್ಮಿ ಸ್ಮರಣಿ ಶಾಲು ಪುಸ್ತಕವನ್ನು ನೀಡಿ ಗೌರವಿಸಿರುವ ಕ್ಷಣ ಎಲ್ಲರನ್ನು ಮೂಕ ವಿಸ್ಮಯರನ್ನಾಗಿ ಮಾಡಿತು.