ಬಹುಮುಖ ವ್ಯಕ್ತಿತ್ವದ ಡಿವಿಜಿ ಪತ್ರಕರ್ತರಿಗೆ ಮಾದರಿ: ಸತ್ಯಂಪೇಟೆ

ಕಲಬುರಗಿ,ಜು.1: ಡಿವಿಜಿ ಎಂಬ ಹೆಸರಿನಿಂದ ಪ್ರಸಿದ್ಧರಾದ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರು ಬಹುಮುಖ ವ್ಯಕ್ತಿತ್ವ ಹೊಂದಿದ್ದರು ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರರ್ಕರ ಸಂಘದ ರಾಜ್ಯ ಸಮಿತಿ ಸದಸ್ಯ ಡಾ. ಶಿವರಂಜನ್ ಸತ್ಯಂಪೇಟೆ ಅವರು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿss ಶನಿವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಅಂಗವಾಗಿ ಡಿವಿಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಮಾಣಿಕ ಮತ್ತು ನ್ಯಾಯ ನಿಷ್ಠುರಿ ಪತ್ರಕರ್ತಆಗಿರುವುದರ ಜೊತೆಗೆ ಉತ್ತಮ ಸಾಹಿತಿ, ವಾಗ್ಮಿಕೂಡ ಆಗಿದ್ದರು ಎಂದರು.
ಡಿವಿಜಿಯವರು ಸರಳ ಸಜ್ಜನಿಕೆ ಸ್ನೇಹಜೀವಿ ಪತ್ರಕರ್ತರು ಆಗಿದ್ದರು. ಅವರು ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ ಎಂದು ಅವರು ಬಣ್ಣಿಸಿದರು.
ಪತ್ರಕರ್ತರ ಕ್ಷೇಮಾಭಿವೃದ್ಧಿಗಾಗಿ 1932ರಲ್ಲಿ ಅವರು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘವನ್ನು ಸ್ಥಾಪಿಸುತ್ತಾರೆ. ಆ ಸಂಘದ ಮೊದಲನೇಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾರೆ. ಅವರ ಮಂಕುತಿಮ್ಮನ ಕಗ್ಗ ಬಹಳ ಪ್ರಸಿದ್ಧ ಕೃತಿಯಾಗಿದೆ. ಆದ್ದರಿಂದ ಅವರನ್ನು ಪತ್ರಿಕಾ ದಿನಾಚರಣೆ ದಿನದಂದು ಸ್ಮರಿಸುವುದರ ಜೊತೆಗೆ ಅವರ ಹಾದಿಯಲ್ಲಿ ಸಾಗಬೇಕಿದೆ ಎಂದು ಅವರ ಹೇಳಿದರು.
ಡಿವಿಜಿ ಅವರು ರಾಜಕೀಯದ ಬಗ್ಗೆ ಆಗಲೇ ಒಂದು ಮಾತನ್ನು ಹೇಳಿದ್ದರು. ಮುಂದೊಂದು ದಿನ ಈ ರಾಜಕಾರಣ ದೊಡ್ಡ ಉದ್ಯಮವಾಗುತ್ತೆವೆಂದು ಹೇಳಿದ್ದರು. ಅವರ ಆ ಮಾತು ಇಂದು ನಿಜವೆನಿಸುತ್ತಿದೆ. ರಾಜಕಾರಣದುಡ್ಡು ಹಾಕಿ ದುಡ್ಡು ತೆಗೆಯುವ ವ್ಯಾಪಾರ ಆಗಿದೆ. ಅದರಂತೆ ಪತ್ರಿಕೋದ್ಯಮವೂ ಉದ್ಯಮವಾಗಿ ಬೆಳೆದಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮನಾಥ್ ರೇವತಗಾಂವ್, ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ.ವಿ. ಚಕ್ರವರ್ತಿ, ಕರ್ನಾಟಕ ರಾಜ್ಯ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕ ಶರಣಬಸಪ್ಪ ಜಿಡಗೆ, ಮಾಧ್ಯಮ ಅಕ್ಯಾಡೆಮಿ ಮಾಜಿ ಸದಸ್ಯ ದೇವೆಂದ್ರಪ್ಪ ಕಪನೂರ್, ಹಿರಿಯ ಪತ್ರಕರ್ತ ಸಿದ್ದಣ್ಣ ಮಾಲಗಾರ್, ಸೈಯದ್ ಮನ್ಸೂರ್, ಮಹೇಶ್ ಚೌಕಿಮಠ್, ಶಿವಾನಂದ್ ಮಠಪತಿ, ಪುಂಡಲೀಕ್ ಮೊಸಲಗಿ ಮುಂತಾದವರು ಉಪಸ್ಥಿತರಿದ್ದರು.