ಬಹುಮುಖ ಪ್ರತಿಭೆಯ ಕಾಲೇಜು ವಿದ್ಯಾರ್ಥಿ ಪ್ರಜ್ವಲ್

ವಿಜಯಪುರ.ಫೆ೧೨:ಪಟ್ಟಣದ ಬಸವೇಶ್ವರನಗರದ ನಿವಾಸಿಗಳಾದ ಕೆನರಾ ಬ್ಯಾಂಕ್ ನ ನಿವೃತ್ತ ನೌಕರರಾದ ಬ್ಯಾಂಕ್ ಶಶಿಕಾಂತ್ ರವರ ಮೊಮ್ಮಗ ಬೆಸ್ಕಾಂ ಉದ್ಯೋಗಿ ರಾಜೇಶ್ ಹಾಗೂ ಶರ್ಮಿಳ ದಂಪತಿಗಳ ಮಗನಾದ ಪ್ರಗತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಪ್ರಜ್ವಲ್ ರವರು ಬಹುಮುಖ ಪ್ರತಿಭೆಯ ವಿದ್ಯಾರ್ಥಿಯಾಗಿದ್ದು, ಚಿತ್ರಕಲೆ ಹಾಗೂ ಸಂಗೀತದಲ್ಲಿ ಹೆಚ್ಚಿನ ಆಸಕ್ತಿ ಇದ್ದು ಡ್ರಾಯಿಂಗ್ ಕಲಿತುಕೊಂಡು ಕೆಲವೇ ನಿಮಿಷಗಳಲ್ಲಿ ಹತ್ತು ಹಲವಾರು ಪ್ರಮುಖ ವ್ಯಕ್ತಿಗಳ ಚಿತ್ರಗಳನ್ನು ಮೂಡಿಸಬಲ್ಲವರಾಗಿರುತ್ತಾರೆ.
ಈಗಾಗಲೇ ಇವರ ಚಿತ್ರಕಲೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆಎಚ್ ಮುನಿಯಪ್ಪ ಮೊದಲಾದವರ ಚಿತ್ರಗಳನ್ನು ಬಿಡಿಸಿಕೊಟ್ಟು, ಅವರುಗಳಿಂದ ಹಾಗೂ ರಾಜ್ಯ ಯುವ ಜೆಡಿಎಸ್ ನ ಅಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ, ಶಾಸಕ ಶರತ್ ಬಚ್ಚೇಗೌಡ ರವರುಗಳಿಂದಲೂ ಮೆಚ್ಚುಗೆ ಪಡೆದಿರುತ್ತಾರೆ ಪಟ್ಟಣ ಹಾಗೂ ಸುತ್ತಮುತ್ತಲ ಶಾಲೆಗಳಲ್ಲಿ ಇವರು ನುಡಿಸುವ ವಾಯ್ಲಿನ್ ಸಂಗೀತಕ್ಕೆ ಮಂತ್ರಮುಗ್ಧರಾಗದ ಜನತೆಗೆ ಇರುವುದಿಲ್ಲ
ಇವರು ಇದರೊಂದಿಗೆ ಹಾರ್ಮೋನಿಯಂ ತಬಲಾ ಸಹ ನುಡಿಸುತ್ತಿದ್ದು, ಕವಿತೆ, ಕವನಗಳನ್ನು ಸಹ ರಚಿಸಿರುತ್ತಾರೆ. ಶಿಕ್ಷಕ ರುದ್ರೇಶ್ ರವರ ಬಳಿ ಸಂಗೀತ ಅಭ್ಯಾಸ ಮಾಡುತ್ತಿರುವ ಇವರು ಬಹುಮುಖ ಪ್ರತಿಭೆಯಾಗಿದ್ದು, ವಿಜಯಪುರ ಜನತೆಯ ಬೆಂಬಲವೇ ತಮ್ಮ ಅಭಿವೃದ್ಧಿಗೆ ಕಾರಣವೆಂದು ಮುಂದಿನ ದಿನಗಳಲ್ಲಿಯೂ ಹೆಚ್ಚಿನ ವಿಧದ ಕಲೆಯಿಂದ ಹೆಸರು ಗಳಿಸುವುದರೊಂದಿಗೆ ಉನ್ನತ ವಿದ್ಯಾಭ್ಯಾಸವನ್ನು ಪಡೆಯಬೇಕೆಂದು ಹಾತೊರೆಯುತ್ತಿರುತ್ತಾರೆ.
ಮುಂದಿನ ಮಾರ್ಚಿ ಸಮಯಕ್ಕೆ ಇವರೇ ಚಿತ್ರಕಥೆ ಬರೆದ ಸಿನಿಮಾ ಕಥೆಯನ್ನು ಸಹ ಶೂಟಿಂಗ್ ಪ್ರಾರಂಭಿಸಬೇಕೆಂದು ಯೋಜನೆ ರೂಪಿಸಿರುತ್ತಾರೆ.
ಇದರೊಂದಿಗೆ ಇವರು ಕನ್ನಡ ರಾಜ್ಯೋತ್ಸವ, ಗಣೇಶೋತ್ಸವ, ಮತ್ತಿತರೆ ಪಾರ್ಟಿ ಮುಂತಾದವುಗಳಲ್ಲಿಯೂ ತಮ್ಮ ಸಂಗೀತ, ಚಿತ್ರಕಲೆ, ಕವನ, ಹಾಸ್ಯ, ಸ್ಪೀಡ್ ಪೇಂಟಿಂಗ್ ಮುಂತಾದವುಗಳಿಂದ ಜನರನ್ನು ರಂಜಿಸಲಿರುತ್ತಾರೆ.