ಬಹುಮುಖಪ್ರತಿಭೆ ಆಕಾಂಕ್ಷಾ ಪುರಾಣಿಕ

ಕಲಬುರಗಿ:ನ.13: ಎಲ್ಲರೂ ಒಂದು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಉನ್ನತ ಸಾಧನೆ ಮಾಡುವದು ಸಹಜ. ಆದರೆ ಇಲ್ಲೊಬ್ಬ ಯುವತಿಯು ವೈವಿಧ್ಯಮಯ ಕಲೆ ಕಲಿತು ಅದರಲ್ಲಿ ಸಾಧನೆ ಮಾಡಿದ್ದು ನೋಡಿದರೆ ಎಲ್ಲರಿಗೂ ಆಶ್ಚರ್ಯ ಆಗುವುದಂತೂ ಸತ್ಯ . ಅಂತಹ ಸಾಧಕರ ಸಾಲಿಗೆ ಸೇರುವವರೇ ಆಕಾಂಕ್ಷಾ ಪ್ರಮೋದ ಪುರಾಣಿಕ. ಪ್ರಮೋದ ಮತ್ತು ರೂಪಾಲಿ ಪುರಾಣಿಕ ದಂಪತಿಗಳ ಮಗಳು. ಆಕಾಂಕ್ಷಾ ಪ್ರಸ್ತುತ ಶ್ರೀ ಗುರು ಸ್ವತಂತ್ರ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಮೊದಲ ವರ್ಷದ ಪಿ.ಯೂ.ಸಿ. ವಿದ್ಯಾರ್ಥಿನಿ.ಸುಮಾರು ಅರತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಸಂಗೀತನೃತ್ಯ :
ತಬಲಾ,ಹಾರ್ಮೋನಿಯಂ,ಕೀಬೋರ್ಡ, ತಂಬೂರಿ ,ಸೀತಾರ, ಗೀಟಾರ ಡೋಲಕ್, ನುಡಿಸುವರು. ಹಿಂದೂಸ್ಥಾನಿ ವಾದ್ಯದಲ್ಲಿ ಜೂನಿಯರ ಗ್ರೇಡ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು ಹಿಂದೂಸ್ಥಾನಿ ಸಂಗೀತ ಓಕರ್ ಜೂನಿಯರ್ ಗ್ರೇಡ ತರಗತಿ ಮುಗಿಸಿದ್ದು ಶಾಸ್ತ್ರೀಯ ಸಂಗೀತವನ್ನು ಸಾವಿತ್ರಿ ಥೀಟೆ ಅವರಲ್ಲಿ ಕಲಿತರು. ಕ್ಲಾಸಿಕಲ್ ಡಾನ್ಸ, ಫೋಕ್ ಡಾನ್ಸ, ವೆಸ್ಟರ್ನ ಡಾನ್ಸ, ಆರ್ಕೆಸ್ಟಾ ಸಿಂಗರ್, ಗೀಗಿ ಪದ, ಹಂತಿ ಪದ, ಸೋಬಾನ ಪದ, ಬೀಸುವ, ಕುಟ್ಟುವ ಪದಗಳು, ನಶಿಸಿಹೋಗುತ್ತಿರುವ ಜಾನಪದ ಗೀತೆಗಳಿಗೆ ಜೀವತುಂಬುತ್ತಿರುವರು.ರಂಗ ಗೀತೆ, ಭಜನೆ ಪದ, ಭಾವಗೀತೆ ಸುಶ್ರಾವ್ಯವಾಗಿ ಹಾಡುವರು ಆಕಾಂಕ್ಷಾ ನೃತ್ಯಅಭ್ಯಾಸ ಮಾಡಿದ್ದು ಅರ್ಚನಾ ಮತ್ತು .ಅನುಶ್ರೀ ಗುರುಗಳಲ್ಲಿ.ರವೀಂದ್ರ ಕುಲಕರ್ಣಿಯವರಿಂದ ತಬಲಾ ಕಲಿತಿದ್ದು ಹೀಗೆ ಹಲವು ಬಗೆಯ ಸಂಗೀತ ಕಲಿತು ಗುರುವರ್ಯರ ಮೆಚ್ಚುಗೆ ಪಡೆದಿದ್ದಾರೆ.
ಕ್ರೀಡೆ :
ಈಜು, ಲಾಂಗ್ ಜಂಪ್, ಹೈ ಜಂಪ್, ರನ್ನಿಂಗ, ಶಾರ್ಟ ಪುಟ್, ಕಬ್ಬಡ್ಡಿ, ಬ್ಯಾಡ್‍ಮಿಟನ್,ಖೋ ಖೋ, ಯೋಗ ,ಚೆಸ್, ಕೇರಮ್, ಬಾಸ್ಕೆಟ್ ಬಾಲ ,ವಾಲಿಬಾಲ್, ಥ್ರೂಬಾಲ್.ಕಿಕ್ ಬ್ಯಾಕ್ ಮತ್ತು ಆತ್ಮ ರಕ್ಷಣೆಗಾಗಿ ಕರಾಟೆ ಕಲಿತಿದ್ದಾರೆ. ಇದರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪದಕ ಪಡೆದಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ್ದಾರೆ.ಕರಾಟೆಯಲ್ಲಿ ಎರಡನೇ ಬ್ಲ್ಯಾಕ್ ಬೆಲ್ಟ ಪಡೆದು ಅಂತರಾಷ್ಟ್ರೀಯ ಮಟ್ಟದ ಕರಾಟೆ ಪಟು ಎಂದು ಗುರುತಿಸಿದ ಹೆಗ್ಗಳಿಕೆಯೂ ಇದೆ.ಎನ್‍ಸಿಸಿ ಯಲ್ಲಿ ಕರ್ನಾಟಕ ಬೆಟಾಲಿಯನಲ್ಲಿಎ ಪ್ರಮಾಣ ಪತ್ರ ಪಡೆದಿದ್ದಾರೆ. ಇನ್ನು ಬೇರೆ ಬೇರೆ ಕ್ರೀಡೆಯಲ್ಲಿ ರಾಜ್ಯ ಮಟ್ಟದಲ್ಲಿ ಚಿನ್ನದ ಪದಕ ಪಡೆದು ಅಮೋಘ ಸಾಧನೆ ಮಾಡಿದ್ದಾರೆ.ಕಳೆದ ವಾರವಷ್ಟೇ ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಕಿಕ್ ಬ್ಯಾಕ್ ಚಾಂಪಿಯನ್ 2021 ರಲ್ಲಿ ಆಕಾಂಕ್ಷಾ ಸಹೋದರ ರಾಜೇಶ ಇಬ್ಬರೂ ಭಾಗವಹಿಸಿದ್ದರು. ಆಕಾಂಕ್ಷಾ ಎರಡು ಚಿನ್ನದ ಪದಕ ಪಡೆದು ಮುಂದೆ ಕಲಕತ್ತದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕಿಕ್ ಬ್ಯಾಕ್ ಚಾಂಪಿಯನ ಸ್ಪರ್ಧೆಯಲ್ಲಿ ಭಾಗವಹಿಸುವರು.ಬುಲೆಟ್‍ದ್ವಿಚಕ್ರವಾಹನ ಸೇರಿದಂತೆ ಹಲವು ಬಗೆಯ ವಾಹನಗಳ ಸವಾರಿ ಮಾಡುವದು ಇವರಿಗೆ ಹವ್ಯಾಸ. ನಾಟಕ, ಏಕಪಾತ್ರಾಭಿನಯ,ಕುಕ್ಕಿಂಗ, ಮೇಕಪ್, ಹೇರ ಸ್ಟೈಲ್,ವಿವಿಧ ವೇಷ ಭೂಷಣಗಳಲ್ಲಿ ಅಲಂಕಾರ ಮಾಡಿಕೊಳ್ಳುವದು.ಮೆಹಂದಿ, ರಂಗೋಲಿ ಚಿತ್ರಕಲೆ, ಪೇಂಟಿಂಗ, ಕಚ್ಚಾ ವಸ್ತುಗಳಿಂದ ಆಭರಣ ತಯಾರಿಸುವದು ಇತ್ಯಾದಿ ಹವ್ಯಾಸಗಳಿವೆ. ಮುಂಬೈ, ಸೊಲ್ಲಾಪೂರ ಅಕ್ಕಲಕೋಟೆ ಸೇರಿದಂತೆ ರಾಜ್ಯ ಹಾಗೂ ಜಿಲ್ಲೆಯ ಅನೇಕ ಮಠ,ಜಾತ್ರೆ, ದೇವಸ್ಥಾನ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಸಾಂಸ್ಕøತಿಕ ಉತ್ಸವದಲ್ಲಿ ಕಲೆ ಪ್ರದರ್ಶನ ಮಾಡಿದ್ದಾರೆ. ಕನ್ನಡ, ಇಂಗ್ಲೀಷ, ಮರಾಠಿ,ತೆಲಗು, ಹಿಂದಿ ಭಾಷೆ ಸರಾಗವಾಗಿ ಮಾತನಾಡುವ ಈ ಚತುರ್ಭಾಷೆಯ ಚತುರೆ ಅದ್ಭುತವಾಗಿ ಕಾರ್ಯಕ್ರಮ ನಿರೂಪಣೆ ಮಾಡುವ ನಿರೂಪಕಿಯೂ ಹೌದು. ಇಷ್ಟೆಲ್ಲಾ ಕಲಿತರೂ ವಿದ್ಯಾಭ್ಯಾಸದಲ್ಲಿ ಹಿಂದೆ ಬಿದ್ದಿಲ್ಲ. ಇಲ್ಲಿಯವರೆಗೆ ಓದಿನಲ್ಲೂ ಎಲ್ಲ ತರಗತಿಯಲ್ಲೂ ಶೇ 90 ಅಂಕ ಪಡೆದಿರುವರು. ಅವರಿಗೆ ಬಂದ ಪ್ರಶಸ್ತಿ, ಫಲಕಗಳು ಒಂದು ಮನೆಯೇ ತುಂಬಿವೆ. ಆಕಾಶವಾಣಿ ಮತ್ತು ದೂರದರ್ಶನದ ಹಲವಾರು ಕಾರ್ಯಕ್ರ ಮದಲ್ಲಿ ಪಾಲ್ಗೊಂಡಿದ್ದಾರೆ.
ಅರಸಿಬಂದ ಪ್ರಶಸ್ತಿಗಳು:
ಕರ್ನಾಟಕ ಕಲಾರತ್ನ , ಕರ್ನಾಟಕ ರತ್ನ ,ಸಿರಿಗನ್ನಡ ರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ಬಾಲವಿಕಾಸ ಕೊಡುವ ಬಾಲ ಗೌರವ, ಮುಂಬಯಿ ಅಖಿಲ ಭಾರತ ಗಾಂಧರ್ವ ಮಹಾವಿದ್ಯಾಲಯದ ಬಾಲ ಪ್ರತಿಭೆ ಪ್ರಶಸ್ತಿ,ಪೆÇಲೀಸ್ ಮಹಾ ವಿದ್ಯಾಲಯ ಕೊಡುವ ಬಾಲ ಪ್ರತಿಭೆಪ್ರಶಸ್ತಿ,ಬೆಂಗಳೂರಿನ ರಂಗ ನಕ್ಷತ್ರ ಟ್ರಸ್ಟನ ರಂಗ ನಕ್ಷತ್ರ ಪ್ರಶಸ್ತಿ,ಗಾನಯೋಗಿ ಪಂಚಾಕ್ಷರಿ ಬಾಲ ವಿಕಾಸ ಅಕಾಡಮಿಯ ಬಾಲ ಗೌರವ ಪ್ರಶಸಿ,್ತ ಕನ್ನಡ ಸಿರಿ, ಚಿನ್ಮಯ, ಜಿಲ್ಲಾ ಫಿಲ್ಮಂ ಫೇರ್ ಅವಾರ್ಡ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀಡಿದ ಕಲಾಸಿರಿ.ಡಾ.ಪಿ.ಶಂಕರ ಪ್ರತಿಷ್ಠಾನದ ಚಿಗುರು ಚಿನ್ಮಯ ಮತ್ತು ಅನೇಕ ಸಂಘ ಸಂಸ್ಥೆಗಳು ಇವರ ಕಲೆ ಗುರುತಿಸಿ ಗೌರವಿಸಿದ್ದಾರೆ.ಆಕಾಂಕ್ಷಾ ತನ್ನ ಮುಂದಿನ ಗುರಿ ಐಎಎಸ್ ಮಾಡಿ ಸಮಾಜದ ಶ್ರೇಯೋಭಿವೃದ್ದಿಗೆ ಶ್ರಮಿಸಬೇಕೆಂಬ ಕನಸಿದೆ .
** ಗುರು.ಕೆ.ಪಟ್ಟಣಶೆಟ್ಟಿ.ಕಲಬುರಗಿ