ಬಹುಮಾನ ವಿತರಣೆ


ಧಾರವಾಡ,ಡಿ2 : ಮಕ್ಕಳಿಗೆ ಮೊದಲುಇಷ್ಟವಾಗುವುದು ನಿಸರ್ಗಚಿತ್ರನ. ಬೆಟ್ಟ, ನದಿ, ಸೂರ್ಯ, ಗಿಡ ನಂತರಚಿಕ್ಕದಾದಗುಡಿಸಲು ಪ್ರತಿ ಮಗುವಿನ ಚಿತ್ರ ಬಿಡಿಸುವಿಕೆಯಲ್ಲಿಎದ್ದುಕಾಣುತ್ತದೆ. ಇದಕ್ಕಾಗಿಯೇ ಹೇಳುವುದು ಮಗು ನಿಸರ್ಗದ ಕೂಸು ಎಂದುಡಾ.ಬೆಟಗೇರಿಕೃಷ್ಣಶರ್ಮ ಸ್ಮಾರಕ ಟ್ರಸ್ಟಿನ ಅಧ್ಯಕ್ಷರಾಘವೇಂದ್ರ ಪಾಟೀಲ ನುಡಿದರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘದ `ಮಕ್ಕಳ ಮನೆ’ ದತ್ತಿ ಅಂಗವಾಗಿ ಮಕ್ಕಳಿಗಾಗಿ ಚಿತ್ರಕಲೆ ಮತ್ತು ಶುದ್ಧಬರಹ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಿ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದಅವರು, ಮಕ್ಕಳ ಭಾವನೆಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕೆಂದರೆ ಅವರುಚಿತ್ರ ಬಿಡಿಸುವುದಕ್ಕೆ ಅವಕಾಶ ಕಲ್ಪಿಸಬೇಕು.ಮಗು ಏನನ್ನು ಬಯಸುತ್ತದೆ ಮತ್ತುಏನನ್ನುಇಷ್ಟಪಡುತ್ತದೆಎನ್ನುವದನ್ನು ತಿಳಿದುಕೊಳ್ಳಲು ಆ ಮೂಲಕ ಸಹಾಯವಾಗುತ್ತದೆ.ಮಗುವಿನ ಮಾನಸಿಕ ಬೆಳವಣಿಗೆಗೆ ಚಿತ್ರಕಲೆ ಸಹಕಾರಿಯಾಗುತ್ತದೆಎಂದರು.
ಚಂದ್ರಕಾಂತ ಬೆಲ್ಲದಅಧ್ಯಕ್ಷತೆ ವಹಿಸಿದ್ದರು.500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಚಿತ್ರಕಲೆಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶುದ್ಧಬರಹ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. 1ನೇ ತರಗತಿಯಿಂದ 10ನೇ ತರಗತಿಯವರೆಗೆಚಿತ್ರಕಲೆಯಲ್ಲಿ ಪ್ರತೀತರಗತಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನದೊಂದಿಗೆಎಲ್ಲ ಮಕ್ಕಳಿಗೆ ಪ್ರಶಸ್ತಿ ಪತ್ರವನ್ನು ನೀಡಿಗೌರವಿಸಲಾಯಿತು.
ಶಂಕರ ಹಲಗತ್ತಿ, ಶಂಕರ ಕುಂಬಿ, ಕೆ.ಎಚ್.ನಾಯಕ, ಸತೀಶತುರಮರಿಕಾರ್ಯಕ್ರಮ ನಡೆಸಿಕೊಟ್ಟರು.ಚಿತ್ರಕಲೆ ನಿರ್ಣಾಯಕರಾಗಿ ಬಿ.ಮಾರುತಿ, ಎಸ್.ಕೆ.ಪತ್ತಾರ, ಬಿ.ಎಚ್.ಕುರಿಯವರಕಾರ್ಯ ಮಾಡಿದರು.