ಬಹುಮಾನ ವಿತರಣಾ ಸಮಾರಂಭ


ಮುನವಳ್ಳಿ,ನ.3: ಪಟ್ಟಣದ ಪ್ರಾಥನಾ ಆಂಗ್ಲಮಾಧ್ಯಮ ಶಾಲೆಯ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮುನವಳ್ಳಿ ಹೋಬಳಿ ಘಟಕದ ವತಿಯಿಂದ ಕನ್ನಡ ನಾಡು ನುಡಿಗೆ ಸಂಬಂದಿಸಿದ ನಾಡ ಗೀತೆಗಳ ಮುಕ್ತ ಗಾಯನ ಸ್ಪರ್ಧೆಗಳ ಬಹುಮಾನ ವಿತರಣಾ ಸಮಾರಂಭ ಜರುಗಿತು.
ಮುಖ್ಯ ಅತಿಥಿಗಳಾಗಿ ಸಾಹಿತಿ ವಾಯ್.ಎಮ್ ಯಾಕೊಳ್ಳಿ ಮಾತನಾಡಿದರು ಸಾಯಿತಕವಾಗಿ ಸಂಸ್ಕøತಿಕವಾಗಿ ದಾರ್ಮಿಕವಾಗಿ ರಾಜಕಿಯವಾಗಿ ಜಗತ್ತಿಗೆ ಅನೇಕ ಕೊಡುಗೆ ಕೊಡುವಂತಾ ಸ್ರೆಷ್ಠತೆ ನಾಡು ನಮ್ಮದು ಅಲ್ಲಲ್ಲಿ ಹರಿದು ಹಂಚಿಹೊಗಿದ ಕನ್ನಡ ಒಗ್ಗುಡಿಸಿ ಅದಕ್ಕೆ ಕರ್ನಾಟಕ ವೆಂದು ನಾಮಕರನ ಮಾಡಿ ಇಂದಿಗೆ 50 ವರ್ಷಗಳಾದವು ಇದರ ನೀಮಿತ್ಯ ಸರಕಾರ ಒಂದು ಕರ್ನಾಟಕ ರಾಜ್ಯೋತ್ಸವದ ನೆನಪಿಗಾಗಿ ವಿಷೇಶವಾಗಿ ಒತ್ತುನಿಡಿ ಒಂದು ವರ್ಷ ಆಚರಿಸಲು ಸರಕಾರ ಆಧೇಶ ನೀಡಿದೆ ಆದೇಶದಂತೆ ಮುನವಳ್ಳಿ ಕನ್ನಡ ಸಾಹಿತ್ಯ ಪರಿಷತ್ತಯ ಪ್ರತಿ ತಿಂಗಳು ಒಂದು ಕಾರ್ಯಕ್ರಮದಂತೆ ಒಂದು ವರ್ಷ ಪೂರ್ತಿ ಆಚರನೆ ಮಾಡುತ್ತಿರುವದು ಶ್ಲ್ಯಾಘನಿಯ ಎಂದರು.
ಶಿಕ್ಷಕ ವಾಘೇರಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ಮೋಹನ ಸರ್ವಿ ಮಾತನಾಡಿದರು.
ಸಾನಿಧ್ಯ ವಹಿಸಿದ ಮುರಘೇಂದ್ರ ಶ್ರೀಗಳು ಆಶೀರ್ವಚನದಲ್ಲಿ ಕನಕದಾಸರು ಹಾಗೂ ಶಿಸುನಾಳ ಶರಿಫ್‍ರ ಸಾಹಿತ್ಯ ದೇಶಕ್ಕಾಗಿ ಕೊಡುಗೆ ನೀಡಿದ್ದಾರೆ ಹಾಗೂ ಅನೇಕ ಸಾಹಿತ್ಯಗಳು ಕರ್ನಾಟಕ ಬಗ್ಗೆ ಅನೇಕ ಕವನಗಳನ್ನು ಬರೆದಿದ್ದಾರೆ ಹೊರ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯ ರೆಲ್ವೆಸ್ಟೇಶನ, ಬಸ್ಟ್ಯಾಂಡ ರಸ್ತೆಗಳು ಸ್ವಚ್ಛ ಸುಸುಚ್ಛಿತವಾಗಿ ಇದೆ ಎಂದರು.
ಬಹುಮಾನ ನೀಡಿದ ಅನುರಾದ ಬೇಟಗೇರಿ, ಪದ್ಮಾವತಿ ಪಾಟೀಲ, ಅನುಸೂಯಾ ಮದನಭಾವಿ, ಸುರೇಶ ಜಾವೂರ ಶಿಕ್ಷಕ ಬೇವಿನಗಿಡದ ಅತಿಥಿಗಳಾಗಿ ಆಗಮಿಸಿದ್ದರು.
ನಿರ್ಣಾಯಕರಾಗಿ ಪುಷ್ಪಾ ಬಡಿಗೇರ, ಹಾಗೂ ರೇವಡೆ ಆಗಮಿಸಿದ್ದರು. ರಾಜ್ಯೋತ್ಸವ ಪ್ರಶಸ್ಥಿಗೆ ಬಾಜನರಾದ ವಾಯ್,ಎಮ್. ಯಾಕೊಳ್ಳಿ, ವಾಯ್.ಬಿ ಕಡಕೋಳ, ಬಾಳು ಹೊಸಮನಿ ಇವರನ್ನು ಸನ್ಮಾನಿಸಿ ಗೌರವಿಸಿದರು,
ಸಂಗಿತ ಸ್ಪರ್ಧೆಯಲ್ಲಿ ಪ್ರಥಮ ಮಾಹಾದೇವಿ ಮಾತಾರಿ, ದ್ವಿತೀಯ ರೂಪಾ ಚಕ್ಕಡಿ, ತೃತೀಯ ಸಂತೋಶ ಹೂಲಿ, ಹಾಗೂ ಬಾಗವಹಿಸಿದ ಎಲ್ಲರಿಗು ಸಮಾದನಕರ ಬಹುಮಾನ ವಿತರಿಸಿದರು.
ಗುರುನಾಥ ಪತ್ತಾರ ಸ್ವಾಗತಿಸಿದರು ಬಾಳು ಹೊಸಮನಿ ಕಾರ್ಯಕ್ರಮ ನಿರೂಪಿಸಿದರು ವಂದಿಸಿದರು.