ಬಹುಮಾದರಿಯ ಸಂಪರ್ಕ ವ್ಯವಸ್ಥೆ ಅಭಿವೃದ್ಧಿ ಗುರಿ : ಮೋದಿ

ನವದೆಹಲಿ, ನ. ೮- ದೇಶದಲ್ಲಿ ಬಹುಮಾದರಿಯ ಸಂಪರ್ಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಗುರಿ ಹೊಂದಲಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಈ ರೀತಿಯ ವ್ಯವಸ್ಥೆಯಿಂದ ದೇಶಾದ್ಯಂತ ಲಾಜಿಸ್ಟಿಕ್ ಗಳ ವೆಚ್ಚ ಕಡಿಮೆಯಾಗಲಿದೆ ಎಂದು ಅವರು ಹೇಳಿದರು.

ಗುಜರಾತ್ ನಲ್ಲಿ ನೂತನವಾಗಿ ಅಭಿವೃದ್ಧಿಪಡಿಸಿರುವ ಹಜಿರಾ ಮತ್ತು. ಘೊ ಘಾ ನಡುವಿನ ರೋ ಪಾಕ್ಸ್ ದೋಣಿ ಸಂಚಾರ ಸೇವೆಯನ್ನು ದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್ರ್ ಮೂಲಕ ಲೋಕಾರ್ಪಣೆ ಮಾಡಿ ಅವರುಮಾತನಾಡಿದರು, .

ಹಡಗು ಖಾತೆಯ ಹೆಸರನ್ನು ಬದಲಾವಣೆ ಮಾಡಿ, ಇನ್ನು ಮುಂದೆ ಬಂದರು, ಹಡಗು ಮತ್ತು ಜಲಮಾರ್ಗಗಳ ಅಭಿವೃದ್ಧಿ ಖಾತೆ ಎಂಬುದಾಗಿ ಪುನರ್ನಾಮಕರಣ ಮಾಡಲಾಗುವುದು. ಹಡಗು ಹಾಗೂ ಹಾಗೂ ಜಲಮಾರ್ಗಗಳ ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲ ವಿಚಾರಗಳು ಈ ಖಾತೆ ವ್ಯಾಪ್ತಿಗೆ ಒಳಪಡಲಿವೆ ಎಂದರು.

ಜಲಮಾರ್ಗಗಳ ಅಭಿವೃದ್ಧಿಯಿಂದ ಲಾಜಿಸ್ಟಿಕ್ ಗಳ ವೆಚ್ಚ ಕಡಿಮೆಯಾಗಲಿದೆ . ದೇಶದಲ್ಲಿ ಬಹು ಮಾದರಿಯ ಸಂಪರ್ಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಗುರಿ ಹೊಂದಲಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ರೋ ಪಾಕ್ಸ್ ದೋಣಿ ಸೇವೆಯಿಂದ ಗುಜರಾತ್ ರಾಜ್ಯದ ವ್ಯಾಪಾರ-ವಹಿವಾಟು ನಡೆಸಲು ಹೆಚ್ಚಿನ ಅನುಕೂಲವಾಗಲಿದೆ ಮತ್ತು ಸಾರಿಗೆ ವೆಚ್ಚವನ್ನು ಕಡಿಮೆ ಮಾಡಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಈ ಯೋಜನೆ ಉದ್ಘಾಟನೆ ಇಂದ ಗುಜರಾತ್ ರಾಜ್ಯದ ಬಂದರು ಉದ್ಯಮ ವಿಶ್ವದ ಅತಿ ದೊಡ್ಡ ಉದ್ಯಮವಾಗಿ ಬೆಳೆಯಲಿದೆ ಹಾಗೂ ಸಮುದ್ರ ಮಾರ್ಗದ ಮೂಲಕ ಭಾರತದ ಗೇಟ್ ವೇ ಆಗಿ ಪರಿವರ್ತನೆಯಾಗಲಿದೆ ಎಂದು ಹೇಳಿದರು.

ರಾಜ್ಯದಲ್ಲಿನ ಸಮುದ್ರ ಸಂಬಂಧಿ ಅಧ್ಯಯನ ವಿಶ್ವವಿದ್ಯಾಲಯಗಳು ಬಂದರು ಉದ್ಯಮದ ಗಾತ್ರ ಹೆಚ್ಚಿಸಲು ನೆರವಾಗ ಲಿವೆ ಎಂದು ಪ್ರಧಾನಿ ತಿಳಿಸಿದರು.

ದೋಣಿ ಸಂಚಾರ ಸೇವೆಯಿಂದ ಸಂಪರ್ಕ ವ್ಯವಸ್ಥೆಗೆ ಹೆಚ್ಚಿನ ಅನುಕೂಲವಾಗಲಿದೆ ವಿದ್ಯಾರ್ಥಿಗಳಿಂದ ಹಿಡಿದು ವ್ಯಾಪಾರಿಗಳ ವರೆಗೆ ಎಲ್ಲರಿಗೂ ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ , ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತಿತರರು ಉಪಸ್ಥಿತರಿದ್ದರು.