ಬಹುಭಾಷೆಯ ಐರಾವನ್ ಟೀಸರ್ ಗೆ ಕಿಚ್ಚನ ‌ಮೆಚ್ಚುಗೆ

ಕನ್ನಡದಲ್ಲಿ ಇತ್ತೀಚೆಗೆ ಬಹುಭಾಷೆಯಲ್ಲಿ ಚಿತ್ರ ನಿರ್ಮಾಣ ವಾಗುತ್ತಿದೆ.‌ಇದೀಗ ಅದರ ಸಾಲಿಗೆ ಐರಾವನ್ ಹೊಸ ಸೇರ್ಪಡೆ.

ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ” ಐರಾವನ್ ” ತೆರೆಗೆ ಬರಲು ಸಜ್ಜಾಗಿದೆ.

ಚಿತ್ರೀಕರಣ ಹಾಗೂ   ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ಮುಗಿಸಿಕೊಂಡು ಚಿತ್ರ ಬಿಡುಗಡೆಗೆ ಸಿದ್ದವಾಗಿದೆ‌

ಈ ಹಿನ್ನೆಲೆಯಲ್ಲಿ ಟೀಸರ್‌ ಬಿಡುಗಡೆ ಕಾರ್ಯಕ್ರಮ ನಡೆಸಿತು.

ಕಾರ್ಯಕ್ರಮಕ್ಕೆ ನಟ ಕಿಚ್ಚ ಸುದೀಪ್‌ , ನಿರ್ಮಾಪಕ‌ ಮುಖ್ಯ ಅತಿಥಿಯಾಗಿ ಆಗಮಿಸಿ ಚಿತ್ರತಂಡವನ್ನು ಹರಸಿ ಹಾರೈಸಿದರು.

ರಾವ್ಸ್ ರಂಗ   ನಿರ್ದೇಶನದ ಐರಾವನ್ ಚಿತ್ರಕ್ಕೆ ನಿರಂತರ್ ಗಣೇಶ್ ಬಂಡವಾಳ ಹೂಡಿದ್ದಾರೆ

ಟೀಸರ್‌ ಬಿಡುಗಡೆ ಮಾಡಿ ಮಾತನಾಡಿದ ಕಿಚ್ಚ ಸುದೀಪ್‌,ಹೊಸದಾಗಿ ನಾನು ಚಿತ್ರರಂಗಕ್ಕೆ ಬಂದಾಗ ಕೆಲವರು ನನ್ನನ್ನು ಸನ್ಮಾನಿಸಿ, ಹಾರೈಸಿದ್ದಾಗ ಏನೋ ರೋಮಾಂಚನ ಅಗುತ್ತಿತ್ತು. ಆದರೆ, ಇವತ್ತು ನಾನು ವೇದಿಕೆಯಲ್ಲಿ ಸನ್ಮಾನಿಸುವಾಗ ಯಾಕೋ ನಂಗೇ ವಯಸ್ಸಾಯ್ತೇನೋ ಅಂತ ಫೀಲ್‌ ಅಗ್ತಿದೆ ಅಂತ ಹೇಳಿ ಹಾಸ್ಯ ಚಟಾಕಿ ಹಾರಿಸಿದರು. 

ನಟನ ಸಾಮರ್ಥ್ಯ ಹಾಗು ಬದ್ದತೆಯನ್ನು ಮೆಚ್ಚಿಕೊಂಡರು.

ಅದ್ವಿತಿ ಶೆಟ್ಟಿ , ಅವಿನಾಶ್, ಕೃಷ್ಣಹೆಬ್ಬಾರ್, ವಂದನಾ ಮುಂತಾದವರು ಈ ಚಿತ್ರದ ಪ್ರಮುಖ ತಾರಾಬಳಗದಲ್ಲಿದ್ದಾರೆ

ಕ್ರೈಂ ಮತ್ತು ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರದಲ್ಲಿ ಕೊಲೆಯನ್ನು ಯಾರು ಮಾಡಿದ್ದಾರೆ ಎನ್ನುವುದು ಕೊನೆಯವರೆಗೂ ಗೊತ್ತಾಗೋದೇ ಇಲ್ಲ. ಪ್ರೇಕ್ಷಕನಿಗೆ ಅಲ್ಲಿದ್ದ ಎಲ್ಲರ ಮೇಲೂ ಅನುಮಾನ ಬರುತ್ತದೆ. ಚಿತ್ರದ ಕಂಟೆಂಟ್ ಬಹಳ ಚೆನ್ನಾಗಿದೆ.

ಒಟ್ಟು 45 ದಿನಗಳ ಕಾಲ ಬೆಂಗಳೂರು, ಮಂಗಳೂರು ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ

ಎಸ್.ಪ್ರದೀಪ್‍ವರ್ಮ ಸಂಗೀತ ನಿರ್ದೇಶನವಿರುವ ದೇವೇಂದ್ರ ಛಾಯಾಗ್ರಹಣವಿದೆ.

ಯತೀಶ್ ವೆಂಕಟೇಶ್, ಸಿಂಧೂರಿ ಯತೀಶ್ ಸೇರಿದಂತೆ ಹಲವು ಗಣ್ಯರು ಆಗಮಿಸಿದ್ದರು