ಬಹುದಿನದ ರೈತರ ಕನಸು ನನಸಾಗುವ ಭ್ಯಾಗ

ದೇವದುರ್ಗ.ಮೇ.೦೧-ನಾರಾಯಣಪುರ ಬಲದಂಡೆ ನೀರಾವರಿ ಸೌಲಭ್ಯ ಬಳಿಕ ತಾಲೂಕು ಶೇ.೮೫ರಷ್ಟು ಕೃಷಿ ಚಟುವಟಿಕೆ ಚುರುಕಾಗಿದೆ. ವರ್ಷಪೂರ್ತಿ ಕೃಷ್ಣಾನದಿ, ಕಾಲುವೆಗಳಲ್ಲಿ ನೀರು ಹರಿದರು ಕೆಲ ಹಳ್ಳಿಗಳು ನೀರಾವರಿ ಸೌಲಭ್ಯ ವಂಚಿತಗೊಂಡಿವೆ. ಮಳೆ ಅವಲಂಭಿತ ರೈತರ ಹಳ್ಳಿಗಳಿಗೆ ನೀರಿನ ಸೌಲಭ್ಯ ಒಲಿದು ಬರುತ್ತಿದೆ.
೨೮ ಅಧಿಕ ಹಳ್ಳಿಗಳಿಗೆ ಏತ ನೀರಾವರಿ ಸೌಲಭ್ಯ ಕಲ್ಪಿಸಲು ಕಳೆದ ಹತ್ತು ದಿನಗಳಿಂದ ಕೆಬಿಜೆಎನ್‌ಎಲ್‌ನ ಅಧಿಕಾರಿಗಳ ತಂಡ ಸರ್ವೇ ಕಾರ್‍ಯ ನಡೆಸಿದ್ದಾರೆ. ಶಾಸಕ ಕೆ.ಶಿವನಗೌಡ ನಾಯಕರ ಪರಿಶ್ರಮ ವಂಚಿತ ಹಳ್ಳಿಗಳಿಗೆ ನೀರಿನ ಸೌಲಭ್ಯ ಒದಗಿಸಲು ೨ಸಾವಿರ ಕೋಟಿ ರೂ. ಯೋಜನೆಯಿಂದಾಗಿ ಸಮಪರ್ಕವಾಗಿ ನೀರು ಒದಗಿಸುವ ಯೋಜನೆಯೊಂದಾಗಿದೆ. ತಾಲೂಕಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಆಗಮಿಸಿದಾಗ ನೀರಾವರಿ ವಂಚಿತ ಹಳ್ಳಿಗಳ ಸ್ಥಿತಿಗತಿ ಕುರಿತು ಸಮಗ್ರವಾದ ವರದಿಯೊಂದನ್ನು ತಯಾರಿಸಿ ಶಾಸಕರು ನೀಡಿದ್ದರು. ಪೂರಕ ಮಾಹಿತಿಯೊಂದಿಗೆ ಪರಿಶೀಲನೆ ನಡೆಸಿದ ಸಿಎಂ ಈಯೋಜನೆಯ ಕುರಿತಂತೆ ಸಾಕಷ್ಟು ಪರಾಮರ್ಶೆ ನಡೆಸಿ ಕೊನೆಗೆ ಅಧಿಕಾರಿಗಳಿಗೆ ಸರ್ವೇ ಕಾರ್‍ಯ ಮಾಡುವಂತೆ ಸೂಚನೆ ನೀಡಿದರು. ಅರಕೇರಾ ಮತ್ತು ಪಲಕನಮರಡಿ ಗ್ರಾಮಗಳ ವ್ಯಾಪ್ತಿಯ ಅಧಿಕಾರಿಗಳ ತಂಡ ಡ್ರೋನ್ ಕ್ಯಾಮರಾ ಮೂಲಕ ಸರ್ವೇ ಕಾರ್‍ಯ ಚುರುಕಾಗಿ ನಡೆದಿದೆ. ಕೆ.ಹನುಮಂತ್ರಾಯ ನಾಯಕ, ಮುಂಡರಗಿ ಶಿವರಾಯ ಏತ ನೀರಾವರಿ ಸರ್ವೇ ನಡೆಸಲಾಗುತ್ತಿದೆ. ರೈತರ ಬಹು ದಿನಗಳ ಕನಸು ಹಸನದ ಭ್ಯಾಗ ಒಲಿದು ಬಂದಂತಾಗಿದೆ. ಕೃಷ್ಣಾ ನದಿಯ ನೀರನ್ನೇ ಏತ ನೀರಾವರಿ ಯೋಜನೆಗೆ ಸದ್ಬಳಕೆ ಮಾಡಿಕೊಳ್ಳುವಂತಹ ಮಹತ್ವಕಾಂಕ್ಷಿ ಯೋಜನೆ ಇದಾಗಿದೆ. ನೀರಾವರಿ ವಂಚಿತ ಹಳ್ಳಿಗಳಲ್ಲಿ ಸರ್ವೇ ಕಾರ್‍ಯ ಮುಗಿದ ಬಳಿಕ ಈಯೋಜನೆಗೆ ತಗಲುವ ೨ಸಾವಿರ ಕೋಟಿ ರೂ. ರಾಜ್ಯ ಸರಕಾರ ಬಿಡುಗಡೆಗೊಳಿಸಲು ಸಿದ್ದತೆ ಮಾಡಿ ಕೊಳ್ಳಲಿದೆ ಎಂದು ತಿಳಿದು ಬಂದಿದೆ. ನಾರಾಯಣಪುರ ಬಲದಂಡೆ ಕಾಲುವೆಯಲ್ಲಿ ನೀರು ಹರಿದರೂ ಕೆಲ ಹಳ್ಳಿಗಳಿಗೆ ನೀರಿನ ಸೌಲಭ್ಯ ಇಲ್ಲವಾಗಿತ್ತು. ತಾಲೂಕು ಪರಿಪೂರ್ಣ ನೀರಾವರಿ ಸೌಲಭ್ಯ ಒದಗಿಸಲು ಶಾಸಕರು ಮುಂದಾಗಿದ್ದಾರೆ. ಈಗಾಗಲೇ ತಿಂಥಿಣಿ ಬ್ರಿಜ್ ಹತ್ತಿರ ವೀರಗೋಟದಿಂದ ಏತ ನೀರಾವರಿ ಆರಂಭಿಸಿ ಹಳ್ಳಿಗಳಿಗೆ ನೀರು ಹರಿಸುವ ಯೋಚಿಸಲಾಗುತ್ತಿದೆ. ನೀರಾವರಿ ವಂಚಿತ ಹಳ್ಳಿಗಳ ವ್ಯಾಪ್ತಿ ಅರ್ಧಷ್ಟು ಸರ್ವೇ ಕಾರ್‍ಯ ಮುಗಿದಿದ್ದು, ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳ ತಂಡ ನಿಗಾವಹಿಸಲಾಗಿದೆ.
ನೀರಾವರಿ ಸೌಲಭ್ಯ ವಂಚಿತ ಹಳ್ಳಿಗಳು ಅರಕೇರಾ, ಪಲಕನಮರಡಿ, ಬುಂಕಲದೊಡ್ಡಿ, ಚಿಂಚೋಡಿ, ಗಲಗ, ಶ್ಯಾಣೇರದೊಡ್ಡಿ, ಸಂಪತರಾಯನದೊಡ್ಡಿ, ಸೋಮನಮರಡಿ, ಪಿಲಿಗುಂಡ, ಮಲ್ಲಿನಾಯಕನದೊಡ್ಡಿ, ಈರಲಕುಂಟಾ, ಆಲ್ಕೋಡ್, ಆಕಳಕುಂಪಿ, ಭೂಮನಗುಂಡ, ಆನ್ವರ, ಕ್ಯಾದಿಗೇರಾ, ಕೆಳಗಿನ ಇರಬಗೇರಾ, ಹಾಳ ಜಾಡಲದಿನ್ನಿ, ಜುಟುಮರಡಿ, ಮದರಕಲ್, ದೇವರಗುಡ್ಡ, ಬಸ್ಸಾಪುರು, ಮೂಡಲಗುಡ್ಡ, ಎಚ್.ಸಿದ್ದಾಪೂರು ಸೇರಿ ೨೮ ಅಧಿಕ ಹಳ್ಳಿಗಳು ನೀರಾವರಿ ಸೌಲಭ್ಯ ವಂಚಿತ ಹಿನ್ನೆಲೆ ನೀರು ಒದಗಿಸಿ ಸಮೃದ್ಧಿ ಕೃಷಿ ಚುಟುವಟಿಕೆ ಆರಂಭಿಸಲು ಈಯೋಜನೆ ಉದ್ದೇಶವಾಗಿದೆ.
ದೇವದುರ್ಗ: ಸಮೀಪದ ಪಲಕನಮರಡಿ ಗ್ರಾಮದಲ್ಲಿ ಡ್ರೋನ್ ಕ್ಯಾಮರಾ ಮೂಲಕ ಸರ್ವೇ ನಡೆಯುತ್ತಿದೆ.

ಕೃಷಿ ಚಟುವಟಿಕೆ ಮಳೆ ನೀರು ಅವಲಂಭಿತ ಹಳ್ಳಿಗಳಿಗೆ ಸಂಪೂರ್ಣ ಏತ ನೀರಾವರಿ ಸೌಲಭ್ಯ ಮೂಲಕ ನೀರು ಒದಗಿಸಲು ಅಧಿಕಾರಿಗಳ ತಂಡ ಸರ್ವೇ ಕಾರ್‍ಯ ನಡೆಸಿದ್ದಾರೆ. ಪೂರ್ಣ ಸರ್ವೇ ನಂತರ ರಾಜ್ಯ ಸರಕಾರ ಅನುದಾನ ಬಿಡುಗಡೆ ಮಾಡಲ್ಲಿದೆ.
ಕೆ.ಶಿವನಗೌಡ ನಾಯಕ ಶಾಸಕರು