ಬಹುದಿನಗಳ ಬೇಡಿಕೆ ಈಡೇರಿತು :ಪ್ರಕಾಶ್ ಪಾಟೀಲ

ಆಲಮೇಲ :ನ.27:ಹೂವಿನಹಳ್ಳಿ-ಉಚಿತನಾವದಗಿಯಿಂದ ಅನೇಕ ವಿದ್ಯಾರ್ಥಿಗಳು ಪ್ರತಿನಿತ್ಯವೂ ಶಾಲೆ ಕಾಲೇಜುಗಳಿಗೆ ಹೋಗುತ್ತಿದ್ದು ಬಸ್ಸಿನ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದರು ಅದನ್ನು ವಿವಿಧ ಗ್ರಾಮದ ಗ್ರಾಮಸ್ಥರು ಸೇರಿ ಸಾರಿಗೆ ಇಲಾಖೆಯವರನ್ನು ಕಳೆದ ಹಲವಾರು ದಿನಗಳಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಸಂಪರ್ಕಿಸಿ ಆಲಮೇಲದಿಂದ ಸಿಂದಗಿಗೆ ವ್ಹಾಯಾ ಉಚಿತನಾವದಗಿ, ಹೂವಿನಹಳ್ಳಿ ಮಾರ್ಗವಾಗಿ ಎರಡು ಬಸ್ಸುಗಳವ್ಯವಸ್ಥೆ ಕಲ್ಪಿಸಿದ್ದಕ್ಕೆ ಇಲಾಖೆ ಅಭಿನಂದಗಳು ಎಂದು ಗ್ರಾಮ ಪಂಚಾಯತ ಸದಸ್ಯರಾದ ಪ್ರಕಾಶ ಪಾಟೀಲ್ ಹೇಳಿದರು.

ಆಲಮೇಲದಿಂದ ಸಿಂದಗಿಗೆ ವ್ಹಾಯಾ ಉಚಿತನಾವದಗಿ, ಹೂವಿನಹಳ್ಳಿ ಮಾರ್ಗವಾಗಿ ಎರಡು ಬಸ್ ಬಿಡಲಾಗಿದೆ ಬಸ್ ಗಳಿಗೆ ಹೂವಿನಹಳ್ಳಿಯಲ್ಲಿ ಪೂಜೆ ಸಲ್ಲಿಸಿ ಮಾತನಾಡಿದರು

ಹೂವಿನಹಳ್ಳಿ ಮಾರ್ಗವಾಗಿ ನಿತ್ಯ ನೂರಾರು ಬಸ್‍ಗಳು ಸಂಚರಿಸುತ್ತವೆ ಆದರೆ ಯಾವ ಬಸ್‍ಗಳು ಈ ಗ್ರಾಮದಲ್ಲಿ ನಿಲುಡಗೆ ಇರಲಿಲ್ಲ, ಇದರಿಂದಾಗಿ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತಿತ್ತು ಈಗ ನಮ್ಮ ಸಮಸ್ಯೆ ನಿವಾರಣೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ಸಂಗಯ್ಯ ಹಿರೇಮಠ, ಗ್ರಾಮ ಪಂಚಾಯತಿ ಸದಸ್ಯರಾದ ಮಹಾಂತಸ್ವಾಮಿ ಹಿರೇಮಠ, ಪುಟ್ಟು ನಾಯ್ಕೋಡಿ, ಶರಣು ಸಿಂಗೆ, ಗ್ರಾಮದ ಪ್ರಮುಖರಾದ ಯಮನೂರ್ ಹೆಗ್ಗಾ, ಶ್ರವಣಕುಮಾರ ಪಾಟೀಲ್, ವಿಠ್ಠಲ್ ಪರೀಟ್, ಸಂಗಪ್ಪ ಕರ್ಜಗಿ, ಮಲ್ಲಣಗೌಡ ಬಿರಾದಾರ, ಗುರುಶಾಂತ ಬಿರಾದಾರ, ಸದಾಶಿವ ಬಿರಾದಾರ, ಚಂದ್ರಾಮ ನಾಯ್ಕೋಡಿ ಹಾಗೂ ಅನೇಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.