ಬಹುತೇಕ ಚಿತ್ರೀಕರಣ ಮುಗಿಸಿದ ಶಭಾಷ್ ಬಡ್ಡಿಮಗ್ನೆ

 ಪ್ರಕಾಶ್ ಮೊದಲ ಬಾರಿ ನಿರ್ಮಾಣ ಮಾಡುತ್ತಿರುವ ’ಶಭಾಷ್ ಬಡ್ಡಿಮಗ್ನೆ’  ಚಿತ್ರೀಕರಣ ಮೂಡಿಗೆರೆಯ ಕೊಟ್ಟಿಗೆಹಾರ, ಬಾಳೂರು, ಕೊಡಿಗೆ ಜಲಪಾತ ಹಾಗೂ ಸುತ್ತಮತ್ತಲಿನ ಪರಿಸರದಲ್ಲಿ ನಡೆದಿದೆ.

ಇದರೊಂದಿಗೆ ಶೇಕಡ ಎಂಬತ್ತರಷ್ಟು ಮಾತಿನ ಭಾಗದ ಕೆಲಸ ಮುಗಿಸಿದೆ.. ಬಿ.ಎಸ್.ರಾಜಶೇಖರ್ ಪ್ರದಾನ ನಿರ್ದೇಶನ, ಹರೀಶ್.ಸಾರಾ ಸಹಕಾರ ನಿರ್ದೇಶನವಿದೆ. ಪ್ರಮೋದ್‌ಶೆಟ್ಟಿ ತನ್ನ ವಿಭಿನ್ನ ರೀತಿಯ ವರ್ತನೆಯಿಂದಾಗಿ ಶಭಾಷ್ ಬಡ್ಡಿಮಗ್ನೆ ಅನಿಸಿಕೊಂಡರೆ, ಪ್ರಿಯಾ , ಸಾಮ್ರಾಟ್‌ಶೆಟ್ಟಿ ಹಾಗೂ ಕಾವ್ಯಶ್ರಿ ಮತ್ತಿತರು ನಟಿಸಿದ್ದಾರೆ.

ತಾರಾಗಣದಲ್ಲಿ ಶಂಕರ್‌ ಅಶ್ವಥ್, ರವಿತೇಜ, ಮಿತ್ರ, ಪ್ರಕಾಶ್‌ತುಮ್ಮಿನಾಡು, ರಮೇಶ್ ರೈ ಕುಕ್ಕವಳ್ಳಿ, ಈಶ್ವರ್‌ಶೆಟ್ಟಿ, ಮೂಗುಸುರೇಶ್, ಶೋಭಶೆಟ್ಟಿ, ಸುಧಾ, ಸವಿತ, ಗೀತಾವಸಂತ್, ಮಮತಾರಾಜಶೇಖರ್ ಮುಂತಾದವರ ದೊಡ್ಡ ತಂಡವೇ ಇರಲಿದೆ.

 ಎಸ್.ಪಿ.ಭೂಪತಿ ಸಂಗೀತ, ಛಾಯಾಗ್ರಹಣ ಅಣಜಿನಾಗರಾಜ್ ಛಾಯಾಗ್ರಹಣ ಚಿತ್ರಕ್ಕಿದೆ. ಶಿವರಾತ್ರಿ ಹಬ್ಬದ ವೇಳೆಗೆ ಚಿತ್ರ ತೆರೆಗೆ ಬರುವ ಸಾದ್ಯತೆಗಳಿವೆ.