ಬಹುತೇಕ ಎಟಿಎಂ ಸ್ಥಗಿತ ಗ್ರಾಹಕರ ಗೋಳಾಟ

ಹಗರಿಬೊಮ್ಮನಹಳ್ಳಿ.ಮಾ.೨೭ ಇತ್ತೀಚಿಗೆ ಬಹುತೇಕ ಎಟಿಎಂ ಗಳು ಕೆಲಸ ಮಾಡದೆ ತಟಸ್ಥವಾಗಿರುವುದು ರಿಂದ ಗ್ರಾಹಕರಿಗೆ ಪರದಾಟ ಶುರುವಾಗಿದೆ.
ಕಾರಣ ಪಟ್ಟಣದ ಬಹುತೇಕ ಬ್ಯಾಂಕುಗಳ ಎಟಿಎಂ ಗಳು ಕೆಲಸಮಾಡುತ್ತಿಲ್ಲ ಕೆಲವು. ಮುಚ್ಚಿರುತ್ತವೆ. ಇನ್ನು ಕೆಲವು ತೆರೆದರು ಅದರಲ್ಲಿ ಹಣ ಇರುವುದಿಲ್ಲ ಗ್ರಾಹಕರು ಅವಶ್ಯಕತೆಗೆ ಹಣ ಬೇಕೆಂದು ಎಟಿಎಂ ಹೋದರೆ ಅಲ್ಲಿ ಅವರಿಗೆ ನಿರಾಸೆ ಮೂಡುವುದು ಗ್ಯಾರೆಂಟಿ. ಇದರ ಬಗ್ಗೆ ಬ್ಯಾಂಕ್ ಸಿಬ್ಬಂದಿಯನ್ನು ವಿಚಾರಿಸಿದಾಗ ಅವರು ಬ್ಯಾಂಕುಗಳ ವಿಲೀನದಿಂದ ಈ ಸಮಸ್ಯೆ ಉಂಟಾಗಿದೆ ಇದು ನಮ್ಮ ಸಮಸ್ಯೆಯಲ್ಲ ಎಂದು ಜಾರಿಕೊಳ್ಳುತ್ತಾರೆ. ಈಗಾಗಲೇ ಫೋನ್ ಪೇ ಗೂಗಲ್ ಪೆ ಪ್ರಚಲಿತವಾಗಿದ್ದು. ಎಟಿಎಂ ಗ್ರಾಹಕರು ಕೂಡ ಕಡಿಮೆ ಯಾಗಿರುವುದು ಕಾಣಬಹುದು ಆದರೂ ಎಲ್ಲರೂ ಆನ್ಲೈನ್ ವ್ಯವಹಾರ ಮಾಡಲು ಸಾಧ್ಯವಿಲ್ಲ. ಕೆಲವರು ಎಟಿಎಂಗಳನ್ನು ನಂಬಿ ವ್ಯವಾರ ಮಾಡುವವರಿದ್ದಾರೆ. ಸಣ್ಣಪುಟ್ಟ ಖರೀದಿಗೆ ಹಣ ಬೇಕೇಬೇಕು. ಬ್ಯಾಂಕಿಗೆ ಹೋದರೆ ಜನಸಂದಣಿಯಿಂದ ಬ್ಯಾಂಕುಗಳು ಗಿಜೋ ಎನ್ನುತ್ತೇವೆ.. ನಿವೃತ್ತ ನೌಕರರು , ಸಣ್ಣ-ಪುಟ್ಟ ವ್ಯಾಪಾರಸ್ಥರು, ರೈತರು, ಕಾರ್ಮಿಕರು ಎಟಿಎಂ ಬಳಕೆದಾರರಾಗಿದಗದ್ದು ಅವರಿಗೆ ಬಹಳ ತೊಂದರೆಯಾಗಿದೆ. ಕೂಡಲೇ ಸಂಬಂಧಪಟ್ಟ ಬ್ಯಾಂಕಿನವರು ತಮ್ಮ ಎಟಿಎಂ ಗಳು ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂಬುವುದು ಸಾರ್ವಜನಿಕರ ಒತ್ತಾಯವಾಗಿದೆ.