ಬಹುಜನ ಸಮಾಜ ಪಾರ್ಟಿ ಕಾರ್ಯಕರ್ತರ ಸಭೆ

ಬೀದರ:ಎ.7:ಬಹುಜನ ಸಮಾಜ ಪಾರ್ಟಿ ಬೀದರ ಜಿಲ್ಲಾ ಘಟಕದ ವತಿಯಿಂದ ಕಾರ್ಯಕರ್ತರ ಸಭೆ ಹಾಗೂ ಬೀದರ ನಗರಸಭೆ ಸಾರ್ವತ್ರಿಕ ಚುನಾವಣೆಯ ಬಗ್ಗೆ ಸಭೆ ನಗರದ ಶಿವಾ ಇಂಟರನ್ಯಾಶನಲ್ ಸಭಾಂಗಣದಲ್ಲಿ ಕರೆಯಲಾಯಿತು.
ವಿಶೇಷವಾಗಿ ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ಎಂ. ಕೃಷ್ಣಮೂರ್ತಿ ರಾಜ್ಯ ಅಧ್ಯಕ್ಷರು ಕರ್ನಾಟಕ ಆಗಮಿಸಿದರು. ಸಭೆಯ ಅಧ್ಯಕ್ಷತೆಯನ್ನು ಬೀದರ ಜಿಲ್ಲೆಯ ಅಧ್ಯಕ್ಷರಾದ ಶ್ರೀ ಎಂ.ಡಿ. ಜಮೀಲ್ ಅಹ್ಮದ ಖಾನ್ ವಹಿಸಿದರು, ಮುಖ್ಯ ಅತಿಥಿಯಾಗಿ ಶ್ರೀ ಕೆ.ಬಿ. ವಾಸು ರಾಜ್ಯ ಉಪಾಧ್ಯಕ್ಷರು, ಶ್ರೀ ಮಹಾದೇವ ಧನ್ನಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆಗಮಿಸಿದರು. ಶ್ರೀ ಅಂಕುಶ ಗೋಖಲೆ ರಾಜ್ಯ ಕಾರ್ಯದರ್ಶಿ ಹಾಗೂ ಬೀದರ ಜಿಲ್ಲಾ ಉಸ್ತುವಾರಿಗಳು, ಶ್ರೀ ಎಲ್.ಆರ್. ಗೋಸ್ಲೆ ರಾಜ್ಯ ಕಾರ್ಯದರ್ಶಿಗಳು, ಪ್ರಕಾಶ ಕೋಟೆ, ಸ್ವಾಮಿದಾಸ, ಜಿಲ್ಲಾ ಸಂಯೋಜಕರು ಶ್ರೀ ಮಲ್ಲಿಕಾರ್ಜುನ ಕೊಡ್ಲ ಕಲಬುರಗಿ ಜಿಲ್ಲಾ ಅಧ್ಯಕ್ಷರು, ಶ್ರೀ ಎಂ.ಡಿ. ತಾಜ ಯಾದಗಿರ ಜಿಲ್ಲಾಧ್ಯಕ್ಷರು, ಶ್ರೀ ಕೆ. ಪ್ರಕಾಶ ಕಲಬುರಗಿ, ಶ್ರೀ ಬಸವರಾಜ ಯಾದಗಿರ, ಅಶೋಕ ಮಂಠಾಳಕರ್, ತಿಪ್ಪಣ್ಣಾ ಎಸ್. ವಾಲಿ, ಜಾಫರ್ ಖುರೇಷಿ, ಸತ್ಯದೀಪ ಹಾವನೂರ ವೇದಿಕೆ ಮೇಲಿದ್ದರು.
ಎಂ.ಡಿ. ಜಮೀಲ್ ಅಹ್ಮದ ಖಾನ್ ಬೀದರ ಜಿಲ್ಲಾ ಅಧ್ಯಕ್ಷರು ಮಾತನಾಡಿ ಬೀದರ ನಗರ ಸಾರ್ವತ್ರಿಕ ಚುನಾವಣೆಯಲ್ಲಿ ಸದಸ್ಯರನ್ನು ಗಎಲ್ಲಿಸುತ್ತೇವೆ, ಈಗಾಗಲೇ ತಾಲೂಕಾ ಪಂಚಾಯತನಲ್ಲಿ ಮೂರು ಸದಸ್ಯರನ್ನು ಗೆಲ್ಲಿಸಿದೆ, ಮತ್ತು ಒಂದು (1) ಚಿಟಗುಪ್ಪಾ ಸಿ.ಎಂ.ಸಿ. ಯಲ್ಲಿ ಗೆಲ್ಲಿಸಿದೆ ಎಂದು ಮಾತನಾಡಿದರು.
ಎಂ. ಕೃಷ್ಣಮೂರ್ತಿ ರಾಜ್ಯ ಅಧ್ಯಕ್ಷರು ಮಾತನಾಡಿ, ಬಸವಕಲ್ಯಾಣ ಉಪ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷ ಮತ್ತು ಸ್ಥಳೀಯ ಪಕ್ಷ ಸೋಲಿಸುವ ಕೆಲಸ ಮಾಡಿ, ಸಿ.ಡಿ. ಪ್ರಕರಣದಲ್ಲಿ ರಮೇಶ ಜಾರಕಿಹೊಳಿ ಮತ್ತು ಡಿ.ಕೆ. ಶಿವಕುಮಾರ ರವರನ್ನು ಬಂಧಿಸಿ ಎಂದು ಹೇಳಿದರು, ಮುಂಬರುವ ಚುನಾವಣೆಯಲ್ಲಿ ಹುಮನಾಬಾದ ವಿಧಾನಸಭಾ ಕ್ಷೇತ್ರದಿಂದ ಶ್ರೀ ಅಂಕುಶ ಗೋಖಲೆಯವರನ್ನು ಅಭ್ಯರ್ಥಿಯಾಗುವುದು ಖಚಿತ ಎಂದು ಘೋಷಣೆ ಮಾಡಿದರು. ಶ್ರೀ ಅಂಕುಶ ಗೋಖಲೆಯವರು ಮಾತನಾಡಿ ನಾವುಗಳು ಜಿಲ್ಲಾ ಪಂಚಾಯತ್, ತಾಲೂಕಾ ಪಂಚಾಯತ್ ಮತ್ತು ಬೀದರ ನಗರಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಟಿಕೇಟ್ ನೀಡಿ ಗೆಲ್ಲಿಸುತ್ತೇವೆ ಎಂದು ಹೇಳಿದರು.
ಬೀದರ ಜಿಲ್ಲೆಯ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರಿಗೆ ಬೀದರ ನಗರ ಸಾರ್ವತ್ರಿಕ ಚುನಾವಣೆಯಲ್ಲಿ ಮೊದಲ ಆದ್ಯತೆ ನೀಡಬೇಕು, ಬೇರೆ ಪಕ್ಷದಿಂದ ಬಂದು ಟಿಕೇಟ್ ಪಡೆಯುವ ವ್ಯಕ್ತಿಯನ್ನು ಪರಿಶೀಲಿಸಿ ಅವರನ್ನು ಟಿಕೇಟ್ ನೀಡಬೇಕೆಂದು ಹೇಳಿದರು.
ಕೆ.ಬಿ. ವಾಸು ರಾಜ್ಯ ಉಪಾಧ್ಯಕ್ಷರು ಮಾತನಾಡಿ, ಬೀದರ ಜಿಲ್ಲೆಯು ಬಸವಣ್ಣನ ನಾಡಿನ ಪ್ರದೇಶವಾಗಿದೆ, ಏನಾದರೂ ಬದಲಾವಣೆಯಾಗಬೇಕಾದರೆ ಅದು ಬಸವಕಲ್ಯಾಣದಿಂದ ಮಾತ್ರ ಸಾಧ್ಯ ಎಂದು ಹೇಳಿದರು. ಶ್ರೀ ಮಹಾದೇವ ಧನ್ನಿ ಮಾತನಾಡಿ, ನಾನು ಬೀದರ ಜಿಲ್ಲೆಗೆ ಬಹಳಷ್ಟು ಸಮಯವನ್ನು ನೀಡಿ ಹಲವಾರು ಶಿಬಿರಗಳನ್ನು ನಡೆಸಿದ್ದೇನೆ. ಇಲ್ಲಿ ಪಕ್ಷದ ಕಾರ್ಯಕರ್ತರು ಹೆಚ್ಚಿದ ಕಾರಣ ಜಿಲ್ಲಾ ಪಂಚಾಯತ್, ತಾಲೂಕಾ ಪಂಚಾಯತ್ ಗೆಲ್ಲುವ ಸಾಧ್ಯತೆ ಇದೆ ಎಂದು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಪಕ್ಷಕ್ಕೆ ಸೇರ್ಪಡೆಯಾದವರು ಮಾರುತಿ ಹಾರಕೂಡೆ, ದೇವಾನಂದ ಕಾಂಬಳೆ, ಕಿರಣ ಗೋರನಳ್ಳಿ, ಜಾನ್ ಫರ್ನಾಂಡಿಸ್ ಸೇರ್ಪಡೆಯಾದರು.
ಯೋಹಾನ ಡಿಸೋಜಾ, ಸಚೀನ ಗಿರಿ, ಶಕ್ತಿಕಾಂತ, ರಾಜು ಸಿಂಧೆ, ರಾಹುಲ ಖಾಂದರೆ, ವೈಜಿನಾಥ ಸಿಂಧೆ, ಫಹೀಮ್ ಪಟೇಲ್, ಫಿರ್ದೌಸ್ ಖಾನ್, ಹುಲೆಪ್ಪಾ ಬಾಳುರ, ಮಾರುತಿ ಕಾಂಬಳೆ, ಜಿ. ಅಸ್ಕರ್, ಸತೀಶ ದೊಡ್ಡಿ, ಅನೇಕ ಕಾರ್ಯಕರ್ತರು ಈ ಸಭೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶ್ರೀ ತಿಪ್ಪಣ್ಣ ಎಸ್. ವಾಲಿಯವರು ನಿರೂಪಣೆ ಮಾಡಿದರು, ಮುಕ್ತಾಯ ಸಮಾರಂಭವನ್ನು ಶ್ರೀ ಪ್ರಕಾಶ ಕೋಟೆ ನಡೆಸಿಕೊಟ್ಟರು.