ಬಹುಜನ ಪಕ್ಷ ಸಮಾಜವಾದಿ : ಅಧಿಕಾರಿಕ್ಕೆ ತನ್ನಿ

@12bc = ನಿರುದ್ಯೋಗ ಸೃಷ್ಟಿಸಿ ಜನರನ್ನು ಒಕ್ಕಲೆಬ್ಬಿಸುವ ಪಕ್ಷಗಳಿಂದ ದೂರವಿರಲು ಕರೆ-ದಿನೇಶ್ ಗೌತಮ್
ಮಾನ್ವಿ:ನ.20 ಭಾರತ ದೇಶದಲ್ಲಿ ನಿರುದ್ಯೋಗ ಸೃಷ್ಟಿಸಿ ಜನರನ್ನು ಒಕ್ಕಲೆಬ್ಬಿಸುವ ಬಿಜೆಪಿ-ಕಾಂಗ್ರೆಸ್ ಪಕ್ಷಗಳಿಂದ ದೂರವಿರಬೇಕೆಂದು ಬಹುಜನ ಪಕ್ಷದ ಕರ್ನಾಟಕ ರಾಜ್ಯ ಉಸ್ತುವಾರಿಯಾದ ದಿನೇಶ್ ಗೌತಮ್ ಕರೆ ನೀಡಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕುಮಾರಿ ಮಾಯಾವತಿ ಅವರ ಹುಟ್ಟುಹಬ್ಬದ ಅಂಗವಾಗಿ ಜನಕಲ್ಯಾಣ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಚುನಾವಣೆಯಲ್ಲಿ ದೇಶದಲ್ಲಿ ಸಾವಿರಾರು ಕೋಟಿ ಉದ್ಯೋಗಗಳನ್ನು ಸೃಷ್ಟಿ ಮಾಡುತ್ತೇವೆ ಎಂದು ಭರವಸೆ ಚುನಾವಣೆ ಮುಗಿದ ನಂತರ ಉದ್ಯೋಗ ಸೃಷ್ಟಿಸದೆ ಪಕೋಡ ಮಾರಿ ಜೀವನ ನಡೆಸಬಹುದು ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಷ್ಟ್ರದಲ್ಲಿ ಬಿಜೆಪಿ ಸರ್ಕಾರವು ಸರ್ಕಾರಿ ಇಲಾಖೆಗಳನ್ನು ಖಾಸಗೀಕರಣ ಮಾಡಿ ದೇಶದಲ್ಲಿ ನಿರುದ್ಯೋಗ ಸೃಷ್ಟಿಮಾಡಿ ಓಬಿಸಿ ಮತ್ತು ದಲಿತರನ್ನು ಹಿಂದುಳಿಸುವ ಹುನ್ನಾರ ನಡೆದಿದೆ ಕೂಡಲೇ ದಲಿತರು,ಹಿಂದುಳಿದವರು,ಮುಸ್ಲಿಮರು ಜಾಗೃತವಾಗಿ ನಾವೆಲ್ಲರೂ ಸೇರಿ ಸಮಾಜ ಪಕ್ಷವನ್ನು ಗೆಲ್ಲಿಸಬೇಕೆಂದು ಕರೆ ನೀಡಿದರು.
ಭಾರತ ದೇಶವನ್ನು ಹಿಂದು ದೇಶವನ್ನಾಗಿ ನಿರ್ಮಿಸಲು ಬಿಜೆಪಿ ಸರ್ಕಾರವು ಹಿಂದೂ-ಮುಸ್ಲಿಂ ಮಧ್ಯೆ ಸಂಘರ್ಷ ಸೃಷ್ಟಿಮಾಡಿ ರಾಷ್ಟ್ರಧಿಕಾರವನ್ನು ಪಡೆಯುತ್ತಿವೆ ನಮ್ಮತನವನ್ನು ಉಳಿಸಿಕೊಳ್ಳಲು ನಾವೆಲ್ಲರೂ ಜಾಗೃತರಾಗಿ ಎಂದು ಕರೆ ನೀಡಿದರು.
ನಂತರ ಬಹುಜನ ಸಮಾಜ ಪಕ್ಷದ ರಾಯಚೂರು ಲೋಕಸಭಾ ಉಸ್ತುವಾರಿಗಳಾದ ಶ್ಯಾಮ್ ಸುಂದರ ಕುಂಬ್ದಾಳವರು ಕಾನ್ಶಿರಾಮ್ ಅವರು ಕೆಳವರ್ಗದ ಜನರ ಉದ್ಧಾರಕ್ಕಾಗಿ ಕಷ್ಟಪಟ್ಟು ಬಹುಜನ ಸಮಾಜ ಪಕ್ಷ ಕಟ್ಟಿದ್ದು ಹಿಂದುಳಿದ ಹಾಗೂ ಅಲ್ಪಸಂಖ್ಯಾತರು, ದಲಿತರು ಮತ್ತು ಕಾರ್ಯಕರ್ತರು ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನ ಮಾಡಬೇಕಾಗಿದೆ ಎಂದು ಹೇಳಿದರು.ಹನುಮಂತರಾಯ ಕಪ್ಪಗಲ್ ನಿರೂಪಿಸಿದರು
ಈ ಸಂದರ್ಭದಲ್ಲಿ ಬಿಎಸ್ಪಿ ರಾಜ್ಯ ಉಪಾಧ್ಯಕ್ಷರಾದ ಕೆ.ಬಿ.ವಾಸು, ವೈ.ನರಸಪ್ಪ,ಜಿಲ್ಲಾಧ್ಯಕ್ಷರಾದ ಬಸವರಾಜ್ ಭಂಡಾರಿ,ಎಮ್ ಆರ್ ಬೇರಿ,ವೀರೇಶ್ ಮಡಿವಾಳ, ತಾಲ್ಲೂಕು ಅಧ್ಯಕ್ಷ ಇಮಾಮ್ ಸಾಬ್, ಓವನ್, ಚನ್ನಬಸವ ಅಮರಾವತಿ ಉಪಸ್ಥಿತರಿದ್ದರು.