ಬಹುಕೋಟಿ ಯೋಜನೆಗಳಿಗೆ ಡಾ. ಅಜಯ್ ಸಿಂಗ್ ಅಡಿಗಲ್ಲು

ಕಲಬುರಗಿ,ಮಾ.4:ಜೇವರ್ಗಿ ಕ್ಷೇತ್ರದ ಶಾಸಕರು, ವಿರೋಧ ಪಕ್ಷದ ಮುಖ್ಯ ಸಚೇತಕರಾದ ಡಾ. ಅಜಯ್ ಸಿಂಗ್ ಸತತ 2 ನೇ ದಿನವಾದ ಶನಿವಾರ ಕೂಡಾ ಕ್ಷೇತ್ರ್ಯಾಂತ ತಮ್ಮ ಅಭಿವೃದ್ಧಿ ಅಭಿಯಾನ ಮುಂದುವರಿಸಿದ್ದಾರೆ.

ನಿನ್ನೆಯಷ್ಟೇ (ಶುಕ್ರವಾರ) ಗಾಣಗಾಪುರದ ದತ್ತಾತ್ರೇಯ ದೇವರ ಸ್ಮರಿಸಿ ತಮ್ಮ ಅಭಿಯಾನಕ್ಕೆ ಚಾಲನೆ ನೀಡಿದ್ದ ಶಾಸಕರು ಶನಿವಾರ ಹಿಪ್ಪರಗಾ ಎಸ್‍ಎನ್, ರಂಜಣಗಿ, ಗ್ರಾಮಗಳಲ್ಲಿ ಬಹುಕೋಟಿ ಮೊತ್ತದ ಕುಡಿಯುವ ನೀರು, ಸಿಸಿ ರಸ್ತೆ, ಸಾಲಾ ಕೋಣೆಯಂತಹ ಜನೋಪಯೋಗಿ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆಯನ್ನು ನೆರವೇರಿಸಿ ಜನರ ಯೋದಕ್ಷೇಮ ವಿಚಾರಿಸಿದರು.

ಹಿಪ್ಪರಗಾ ಎಸ್‍ಎನ್ ಊರಿಗೆ ಭೇಟಿ ನೀಡಿದ್ದ ಡಾ. ಅಜಯ್ ಸಿಂಗ್ 1. 95 ಕೋಟಿ ಉರ ವೆಚ್ಚದ ಹಿಪ್ಪರಗಾ ಎಸ್.ಎನ್ ಹಾಗೂ ಸೊನ್ನ ಗ್ರಾಮದಾವರೆಗೆ ರಸ್ತೆ ಕಾಮಗಾರಿಗೆ ಅಡಿಗಲ್ಲಿಟ್ಟರು. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ (ಉರ್ದು) ಕೊಠಡಿ ನಿರ್ಮಾಣದ 34 ಲಕ್ಷ ರು ಯೋಜನೆ, 10 ಲಕ್ಷ ರು ವೆಚ್ಚದ ಗೌರಿ ಶಂಕರ ದೇವಸ್ಥಾನ ಅಭಿವೃದ್ಧಿ, 5 ಲಕ್ಷ ರು ವೆಚ್ಚದಲ್ಲಿ ಜಮೀಯಾ ಮಸೀದಿ ಅಭಿವೃದ್ಧಿದೆ ಅಡಿಗಲ್ಲಿಟ್ಟರು. ಅರಳುಗುಂಡಗಿ ಗ್ರಾಮದಿಂದ ರಂಜಣಗಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ 1 ಲಕ್ಷ ರು ವೆಚ್ಚದಲ್ಲಿನ ಕೊಳವೆ ಬಾವಿ ನಿರ್ಮಾಣ ಕಾಮಗಾರಿಗೂ ಚಾಲನೆ ನೀಡಿ ಅಭಿವೃದ್ಧಿ ಅಭಿಯಾನಕ್ಕೆ ಕ್ಷೇತ್ರದ ಜನರ ಸಹಕಾರ ಹಾಗೂ ಬೆಂಬಲ ಕೋರಿದರು.

ರಂಜಣಗಿಯಲ್ಲಿ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ ರಂಜಣಗಿ ತಾಂಡ ಗ್ರಾಮದ 328 ಮನೆಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆಗೆ ಚಾಲನೆ ನೀಡಿದ ಡಾ. ಅಜಯ್ ಸಿಂಗ್ ಅದೇ ಊರಲ್ಲಿ 4 ಲಕ್ಷ ರು ವೆಚ್ಚದ ಸೇವಾಲಾಲ್ ಭವನ ಉದ್ಘಾಟಿಸಿದರು. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿ ಹಾಗೂ ಗ್ರಾಮದ ಸ್ಮಶಾನ ಭೂಮಿಯಲ್ಲಿ ಬೋರ್ವೆಲ್, ಮೋಟಾರ್ ಮತ್ತು ಸಿಸ್ಟರ್ನ್ ಅಳವಡಿಸುವ 3 ಲಕ್ಷ ರು ಕೆಲಸಕ್ಕೆ ಚಾಲನೆ ನೀಡಿದರು.

ಶಾಸಕರಾದ ಡಾ. ಅಜಯ್ ಸಿಂಗ್ ಅವರು ಆರಂಭಿಸಿರುವ ಅಭಿವೃದ್ಧಿ ಅಭಿಯಾನದಲ್ಲಿ ಅಧಿಕಾರಗಳಾದ ಬಸವರಾಜು, ಎಇಇ, ಕೆ.ಆರ್.ಐ.ಡಿ.ಎಲ್, ಮಲ್ಲಿನಾಥ್ ಎಇಇ, ಪP್ಷÀದ ಹಿರಿಯ ಮುಖಂಡರಾದ ಶಿವಶರಣಪ್ಪ ಕೋಬಾಳ, ಶೌಕತ್ ಅಲಿ ಆಲೂರ, ಗುರುಲಿಂಗಪ್ಪಗೌಡ ಆಂದೋಲಾ, ಬಹದ್ದೂರ ರಾಥೋಡ್ , ಅಪ್ಪಾಸಾಬ ಹೊಸಮನಿ, ಪಂಡಿತ ಪವಾರ ರಂಜಣಗಿ, ಸಿದ್ದಣ್ಣ ಮೈಯೂರ,ಅನ್ನು ದೇಸಾಯಿ, ಸೀತಾರಾಮ ರಾಥೋಡ್,ಅಣ್ಣರಾಯ ನೀಷ್ಠಿ ದೇಶಮುಖ, ದತ್ತಪ್ಪ ರಂಜಣಗೆ, ಮರೆಪ್ಪಾ ಸಿಂಗೆ, ಸಮರ್ತ ಬಾಸಲೆ, ಗುಜ್ಜು ರಾಥೋಡ್, ಶತ್ರು ಭೀಮು ಪವಾರ, ಪ್ರಭು ಹಿರು ರಾಥೋಡ, ಬಿಳಿಯಾನ್ ಸಿದ್ದ ವಡೆಯರ , ಖಾಜಾ ಪಟೇಲ ರಂಜಣಗಿ, ವಕೀಲ ನಾಯಕ, ಸಂಜಿತ್, ರಾಮಸಿಂಗ್ ರಾಥೋಡ್ ವಿರೂಪಾಕ್ಷಿ ನಂದಿಕೋಲಮಠ, ಮಾಂತೇಶ ಬಾಸಗಿ, ಕರಬಸಯ್ಯ ನಂದಿಕೋಲಮಠ, ಶಿವಲಿಂಗಪ್ಪ ಯರಗಲ್, ಪ್ರಭಾಕರ ಅರಳಗುಂಡಗಿ, ಶೌಕತ್ ಅಲಿ ಬಡಿಗೇರ, ಮಡಿವಾಳಪ್ಪ ಅವಟಿ, ಮಲ್ಲಿಕಾರ್ಜುನ ಯರಗಲ್, ಖಾಜಿ ಮಲಂಗ್, ಮಲ್ಲಿಕಾರ್ಜುನ ಉಮ್ಮರಗಿ, ಮಲ್ಲಿಕಾರ್ಜುನ ಅವಟಿ, ಉಮೇಶ ದೇಸಣಗಿ, ರಾಯನಗೌಡ ಪಾಟೀಲ್ , ಬಸವರಾಜ ಹತ್ತರಕಿ, ನರಸಪ್ಪ ಬಡಿಗೇರ, ಉಸ್ಮಾನ ಪಟೇಲ್ , ಸೂರ್ಯಕಾಂತ ಮಾಗೇರಿ ಇಮ್ರಾನ್ ಕಾಸರಬೋಸಗಾ, ರಫೀಕ್ ಜಮಾದಾರ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.