ಬಹಿರಂಗ ಪ್ರಚಾರ ಅಂತ್ಯ, ಪಾದಯಾತ್ರೆ ಮೂಲಕ ಮತ ಯಾಚನೆ ಚುರುಕುಮತಗಟ್ಟೆಯತ್ತ ತೆರಳಿದ ಚುನಾವಣೆ ಅಧಿಕಾರಿ, ಸಿಬ್ಬಂದಿ

ವಿಜಯಪುರ,ಮೇ.6:ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಬಹಿರಂಗ ಪ್ರಚಾರ ಭಾನುವಾರ ಸಂಜೆ ಅಂತ್ಯಗೊಂಡಿದ್ದು, ಪಾದಯಾತ್ರೆ ಮೂಲಕ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ನಾಯಕರು ಹಾಗೂ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತದಾರರನ್ನು ಮನವೊಲಿಸುವ ಕಾರ್ಯ ಚುರುಕುಗೊಂಡಿದೆ.ಭಾನುವಾರ ಸಂಜೆ 5 ಗಂಟೆಯಾಗುತ್ತಿದ್ದಂತೆಯೇ ರಾಜಕೀಯ ಪಕ್ಷಗಳ ಬ್ಯಾನರ್, ಕಟೌಟ್‍ಗಳನ್ನು, ಪೋಸ್ಟರ್‍ಗಳನ್ನು ರಾಜಕೀಯ ಪಕ್ಷಗಳ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ತೆರವುಗೊಳಿಸಿದರು.
ಬೆಳಗ್ಗೆಯಾಗುತ್ತಿದ್ದಂತೆಯೇ ವಿವಿಧ ರಾಜಕೀಯ ಪಕ್ಷಗಳ ನಾಯಕರು, ಕಾರ್ಯಕರ್ತರು ಐದು ಜನರ ತಂಡಗಳಾಗಿ ಕ್ಷೇತ್ರದ ತುಂಬೆಲ್ಲ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಇಡೀ ದಿನ ಮತದಾರ ಪ್ರಭುಗಳ ಮನೆಗೆ ತೆರಳಿ ತಮ್ಮ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸುವಂತೆ ಮನವಿ ಮಾಡಿಕೊಂಡರು.

ಮತಗಟ್ಟೆಗೆ ತೆರಳಿದ ಚುನಾವಣೆ ಸಿಬ್ಬಂದಿ
ನಸುಕಿನ ಐದು ಗಂಟೆಗೇ ವಿಜಯಪುರದ ದರ್ಬಾರ ಹೈಸ್ಕೂಲ್ ಮೈದಾನಕ್ಕೆ ತೆರಳಿ ಮತ ಯಂತ್ರ ಹಾಗೂ ಇತರ ಸಾಮಗಿಗಳನ್ನು ಚುನಾವಣೆ ಸಿಬ್ಬಂದಿ ಪಡೆದುಕೊಂಡರು. ಈ ವೇಳೆ ಚುನಾವಣೆ ಸಿಬ್ವಂದಿ ಮತ ಯಂತ್ರಗಳನ್ನು ಪರಿಶೀಲಿಸಿಕೊಂಡು ಮತ ಯಂತ್ರ ಯಾವ ರೀತಿ ಬಳಕೆ ಮಾಡುವ ¨ಗ್ಗೆಯೂ ಕೇಳಿ ಮಾಹಿತಿ ಪಡೆದುಕೊಂಡರು. ಇದಾದ ಬಳಿಕ ಚುನಾವಣೆ ಸಿಬ್ಬಂದಿ ಮತ ಯಂತ್ರ ಸಮೇತ ತಮ್ಮ ಮತಗಟ್ಟೆಗೆ ನಿಗದಿಪಡಿಸಿದ ಬಸ್‍ಗಳ ಮೂಲಕ ಪ್ರಯಾಣ ಬೆಳೆಸಿದರು.